ಖುಷಿ

ಉತ್ತಾಧಿಕಾರಿ

Published On :

-      ಜೆ.ಆರ್. ಆದಿನಾರಾಯಣಮುನಿ, ಶ್ರೀಕೋಡಿಹಳ್ಳಿ ಮಠ
    'ಅಧಿಕಾರ'ವೆಂಬುದು ವಿಷವೇ?
    ರಾಜಕಾರಣಿಗಳ ಪಾಲಿಗೆ ಅದು ಅಮೃತ!

-      ಕೆ.ಎಂ. ಲಿಂಗರಾಜು, ನಂಜನಗೂಡು
    ದೇವರನ್ನು ನಂಬಿದರೆ ಆಸ್ತಿಕ, ಬುದ್ಧಿಜೀವಿಗಳನ್ನು ನಂಬಿದರೆ?
    ಬರೀ ಪುಸ್ತಕ!

-      ಪೇಂಟರ್ ಪಾಪು, ಸಂತೇಮರಹಳ್ಳಿ
    ಯಾರೋ ಮಾಡಿದ ತಪ್ಪಿಗೆ ಯಾರೋ ಶಿಕ್ಷೆ ಅನುಭವಿಸುತ್ತಾರಲ್ಲ, ಯಾಕೆ ಸಾರ್?
    ಅದು ದೇವರು ಮಾಡಿದ ಲೆಡ್ಜರ್ ಮಿಸ್ಟೇಕ್!

-      ಬರ್ಕ್‌ಲಿ ರಮೇಶ್ ಕಿರಂಗದೂರ್, ಮಂಡ್ಯ
    ಮಾರಿ ಕಣ್ಣು ಹೋರಿ ಮ್ಯಾಗೆ, ನಿಮ್ಮ ಕಣ್ಣು ಯಾರ ಮ್ಯಾಗೆ?
    ಪೋರಿ ಮ್ಯಾಗೆ ಅಂತ ಉತ್ತರಿಸೋದು ಕಷ್ಟ!

-      ಹೇಮಂತ್‌ಕುಮಾರ್, ಬೆಂಗಳೂರು
    ದೇವಕನ್ನಿಕೆಗೂ, ಕಾವ್ಯಕನ್ನಿಕೆಗೂ ವ್ಯತ್ಯಾಸವೇನು?
    - ದೇವಕನ್ನಿಕೆ ಭ್ರಮೆ, ಕಾವ್ಯಕನ್ನಿಕೆ ವಾಸ್ತವ!

-      ಬಿ.ಎಂ. ಪರಶಿವಮೂರ್ತಿ, ಬೆಂಗಳೂರು
    ಸೂಜಿಗೂ, ಗುಂಡು ಸೂಜಿಗೂ ವ್ಯತ್ಯಾಸವೇನು?
    ಒಂದು ಸ್ತ್ರೀಲಿಂಗ ಮತ್ತೊಂದು ಪುಲ್ಲಿಂಗ!

-      ರವೀಂದ್ರ ಶಿ. ಯಡಹಳ್ಳಿ, ಬೀಳಗಿ
    ಗೋಲ್ ಕೀಪರ್‌ಗೂ ಗೇಟ್ ಕೀಪರ್‌ಗೂ ವ್ಯತ್ಯಾಸವೇನು?
    ಗೋಲ್ ಕೀಪರ್ ಹಿಂದೆ ನಿಂತಿರ್ತಾನೆ, ಗೇಟ್ ಕೀಪರ್ ಎದುರಿಗೇ ನಿಂತಿರ್ತಾನೆ!

-      ಪಿ.ಜೆ. ರಾಘವೇಂದ್ರ ಮೈಸೂರು
    ಬಿದರಿ, ಎಚ್‌ಡಿಕೆ ಒಬ್ಬರಿಗೊಬ್ಬರು ಗುಂಡಿಕ್ಕಿಕೊಂಡರಾ?
    ಅದೂ ನಕಲಿ ಎನ್‌ಕೌಂಟರ್!

-      ಸ್ವಾಮಿ ನಿರ್ಮಲಾ, ಉಡಿಗಾಲ
    ಕಾಣಿಕೆ ಎಂದರೆ ಉಚಿತ, ಆದರೂ ಉಚಿತ ಕಾಣಿಕೆ ಎನ್ನುವುದೇಕೆ?
    ಉಚಿತವಾದರೂ ಕೆಲವೊಮ್ಮೆ ಭಾರಿ ಬೆಲೆ ತೆರಬೇಕಾಗುತ್ತದೆ!

-      ಬಿ.ಎಂ. ಪರಶಿವಮೂರ್ತಿ, ಬೆಂಗಳೂರು.
    ಆದರ್ಶಪತಿ ಅಂತ ಕರೆಸಿಕೊಳ್ಳೋದಕ್ಕೆ ಏನು ಮಾಡಬೇಕು?
    ಬೇರೆಯವರ ಸತಿಯರ ಹತ್ತಿರ ಸರ್ಟಿಫಿಕೇಟ್ ತರಬೇಕು!

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.