ಖುಷಿ

ಸಿನಿ ಸಂತೆ

ಹಬ್ಬಗಳು, ಊರಿನ ಜಾತ್ರೆಗಳು, ವಾರಕ್ಕೊಮ್ಮೆ ಬರುವ ಪಟ್ಟಣದ ಸಂತೆಗಳು ಎಂದಿಗೂ ತಮ್ಮ ಸಂಭ್ರಮ ಕಳೆದುಕೊಳ್ಳಲ್ಲ. ಪ್ರತಿ ಬಾರಿಯೂ ಅವು ನಮಗೆ...

ಸಿನಿ ಸಂತೆ
Published On :

ಹಬ್ಬಗಳು, ಊರಿನ ಜಾತ್ರೆಗಳು, ವಾರಕ್ಕೊಮ್ಮೆ ಬರುವ ಪಟ್ಟಣದ ಸಂತೆಗಳು ಎಂದಿಗೂ ತಮ್ಮ ಸಂಭ್ರಮ ಕಳೆದುಕೊಳ್ಳಲ್ಲ. ಪ್ರತಿ ಬಾರಿಯೂ ಅವು ನಮಗೆ ಹೊಸದಾಗಿಯೇ ಕಾಣುತ್ತವೆ, ಖುಷಿ ಹೆಚ್ಚಿಸುತ್ತದೆ. ಸಿನಿಮಾ ಸಂತೆಯೂ ಅಷ್ಟೇ. ದೇಶ, ವಿದೇಶಗಳ ನೂರಾರು ಚಿತ್ರಗಳನ್ನು ನೋಡುವ 'ಉತ್ಸವ' ಮತ್ತೆ ಬಂದಿದೆ.
ಹೌದು. 6ನೇ ಬೆಂಗಳೂರು ಅಂತಾರಾಷ್ಟ್ರೀಯ ಸಿನಿಮೋತ್ಸವಕ್ಕೆ ಸಕಲ ಸಿದ್ಧತೆಗಳು ನಡೆಯುತ್ತಿವೆ. 'ದಿ ವರ್ಲ್ಡ್ ಇನ್ ಬೆಂಗಳೂರು' ಎನ್ನುವ ಘೋಷಣೆಯಡಿ ಭಾರತ ಸೇರಿದಂತೆ 45 ದೇಶಗಳ 150 ಚಿತ್ರಗಳು ಪ್ರದರ್ಶನಗೊಳ್ಳಲಿವೆ. ವಿಶೇಷ ಅಂದರೆ, ಆಸ್ಕರ್ ಅಂಗಳದಲ್ಲಿ ಸಾಕಷ್ಟು ಪೈಪೋಟಿ ನಡೆಸಿದ 14 ಸಿನಿಮಾಗಳನ್ನು ನೋಡುವ ಭಾಗ್ಯ ನಮ್ಮದಾಗಲಿದೆ. ಡಿಸೆಂಬರ್ 26ರಿಂದ 8 ದಿನಗಳ ಕಾಲ ನಡೆಯಲಿರುವ ಈ ಸಿನಿಮೋತ್ಸವಕ್ಕೆ 'ಉಳಗ ನಾಯಕ' ಕಮಲ್ ಹಾಸನ್ ಚಾಲನೆ ನೀಡಲಿದ್ದಾರೆ. ಕನ್ನಡ ಚಿತ್ರೋದ್ಯಮದ ಪರವಾಗಿ ನಟ ಸುದೀಪ್ ಉದ್ಘಾಟನಾ ಸಮಾರಂಭದಲ್ಲಿ ಪಾಲ್ಗೊಳಲಿದ್ದಾರೆ.
ಪ್ರತಿ ಬಾರಿಯ ಚಿತ್ರೋತ್ಸವದಲ್ಲೂ ಒಂದು ಫೋಕಸ್ ಅಂತ ಇರುತ್ತದೆ. ಕಳೆದ ಬಾರಿ ಯುದ್ಧ ವಿರೋಧಿ ಚಿತ್ರಗಳನ್ನು ಫೋಕಸ್ ಮಾಡಲಾಯಿತು. ಈ ಬಾರಿ ಆ ಸರದಿ 'ರೈಲು ಚಿತ್ರ'ಗಳದ್ದು. 'ಚಲನೆ ಸಿನಿಮಾದ ಬಹು ಮುಖ್ಯ ಭಾಗ. ಸ್ಥಿರ ಚಿತ್ರಗಳನ್ನೇ ಇಟ್ಟುಕೊಂಡು ಅವುಗಳನ್ನು ಚಲಿಸುವ ಚಿತ್ರಗಳಂತೆ ಮಾಡಿದ್ದು ಸಿನಿಮಾ ಲೋಕದ ಅಚ್ಚರಿ. ಹೀಗಾಗಿ 'ಓಡುವ ಮತ್ತು ನೋಡುವ' ಕ್ರಿಯೆಯನ್ನು ಒಳಗೊಂಡ ಸಿನಿಮಾಗಳಲ್ಲಿ ರೈಲು ಚಿತ್ರಗಳು ರೀಲು ಚಿತ್ರಗಳಷ್ಟೇ ಮಹತ್ವ ಪಡೆದುಕೊಂಡಿವೆ. ಈ ಕಾರಣಕ್ಕೆ ಆರನೇ ಸಿನಿಮೋತ್ಸವ ರೈಲು ಚಿತ್ರಗಳ ಮೇಲೆ ಫೋಕಸ್ ಮಾಡಿದೆ' ಎನ್ನುತ್ತಾರೆ ಚಿತ್ರೋತ್ಸವದ ಕಲಾತ್ಮಕ ವಿಭಾಗ ನಿರ್ದೇಶಕ ಎಚ್. ಎನ್. ನರಹರಿರಾವ್.

ದೇಶ- ವಿದೇಶ
ವಿಶ್ವ ಸಿನಿಮಾ: 50
ಏಷ್ಯನ್ ಚಿತ್ರಗಳು: 10
ಭಾರತೀಯ ಸಿನಿಮಾ: 10
ಕನ್ನಡ ಚಿತ್ರಗಳು: 10
ಭಾರತೀಯ ಸಿನಿಮಾ ವಿಶೇಷ ವಿಭಾಗ: 5 (ಬಿಮಲ್ ರಾಯ್ ಚಿತ್ರಗಳು)
ಡಾ. ರಾಜ್‌ಕುಮಾರ್ ವಿಶೇಷ: 5 ಚಿತ್ರಗಳು
ದೇಶ ವಿಶೇಷ
10 ಚಿತ್ರಗಳು (ತೈವಾನ್ ಮತ್ತು ಜರ್ಮನಿ)
ದಕ್ಷಿಣ ಅಮೆರಿಕ: 7
ರೈಲು ಚಿತ್ರಗಳ ವಿಭಾಗ: 5
ವಿಮರ್ಶಕರ ಆಯ್ಕೆ: 5
ಜಪಾನ್ ಸಮುರಾಯ್ ಚಿತ್ರಗಳು: 4
ಇಟಾಲಿಯನ್ ನವ್ಯವಾಸ್ತವವಾದಿ ಚಿತ್ರಗಳು: 4
ವಿಶೇಷ ವಿಭಾಗ ಚಿತ್ರಗಳು: 20

ವಿಶೇಷ ಅಹ್ವಾನಿತರು
 ಗೊರಾನ್ ಪಾಸ್ಕಯವಿಚ್ (ಸರ್ಬಿಯಾ), ಮೈಕ್ ಲೈ (ಬ್ರಿಟನ್), ಡೆನ್ನಿಸ್ ಕ್ಲೇಯರ್(ಫ್ರಾನ್ಸ್), ಧರ್ಮಸೇನಾ ಪತಿರಾಜ, ಮಾಲಿನಿ ಫೋನ್ಸೇಕ (ಶ್ರೀಲಂಕ), ಪುರಾನ್ ಡೇರಾಕ್‌ಶಾಂಡೇ (ಇರಾನ್), ಜೆಫ್ರೀ ಜಟ್ ವಿಲಿಯನ್ (ಪಿಲಿಪಿನ್ಸ್), ರಾಜೇಶ್ ಗೊಂಗಾಜು (ನೇಪಾಳ), ಗೋಲಂ ಬಿಪ್ಲಬ್ (ಬಾಂಗ್ಲಾದೇಶ), ಜ್ಯೂರಿಸ್ ಪಾಸ್ಕಸ್ (ಲಾಟ್‌ವಿಯಾ), ಹೈನ್ಸ್ ಬಡೆವಿಟ್ಸ್, ಪೋಲಾ ಬೆಕ್ (ಜರ್ಮನಿ), ತಾರು ಮಕೇಲ (ಫಿನ್‌ಲ್ಯಾಂಡ್).

ನೊಂದಣಿ ಎಲ್ಲಿ?:
ಬಾದಾಮಿ ಹೌಸ್ , ವಾರ್ತಾ ಇಲಾಖೆ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ
ಸುಚಿತ್ರಾ ಫಿಲ್ಮ್ ಸೊಸೈಟಿ (ಬನಶಂಕರಿ)
ನೋಂದಣಿ ಶುಲ್ಕ:
ಸಾಮಾನ್ಯರಿಗೆ- 500 ರುಪಾಯಿ, ವಿದ್ಯಾರ್ಥಿಗಳು ಹಾಗೂ ಫಿಲ್ಮ್ ಸೊಸೈಟಿ ಸದಸ್ಯರಿಗೆ- 250 ರುಪಾಯಿ

-  ಆರ್. ಕೇಶವಮೂರ್ತಿ
keshavarkm1@gmail.com

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.