ಆಟಕ್ಕುಂಟು ತೀರ್ಪು

ಕ್ರಿಕೆಟ್‌ನಲ್ಲಿ ಆಟಗಾರರನ್ನು ಬಿಟ್ಟರೆ, ನಂತರದ ಪ್ರಮುಖ ಹುದ್ದೆ ಅಂಪೈರ್‌ಗಳು. ಫ್ರೀ ಹಿಟ್, ವೈಡ್, ನೋ ಬಾಲ್, ಔಟ್, ಡೆಡ್ ಬಾಲ್, ಬೌಂಡರಿ, ಸಿಕ್ಸರ್, ಬೈ, ಲೆಗ್ ಬೈ, ಶಾರ್ಟ್...
ಆಟಕ್ಕುಂಟು ತೀರ್ಪು
Updated on: 

ಕ್ರಿಕೆಟ್‌ನಲ್ಲಿ ಆಟಗಾರರನ್ನು ಬಿಟ್ಟರೆ, ನಂತರದ ಪ್ರಮುಖ ಹುದ್ದೆ ಅಂಪೈರ್‌ಗಳು. ಫ್ರೀ ಹಿಟ್, ವೈಡ್, ನೋ ಬಾಲ್, ಔಟ್, ಡೆಡ್ ಬಾಲ್, ಬೌಂಡರಿ, ಸಿಕ್ಸರ್, ಬೈ, ಲೆಗ್ ಬೈ, ಶಾರ್ಟ್ ಬಾಲ್, ಟಿವಿ ರಿಪ್ಲೇ, ಪೆನಾಲ್ಟಿ ರನ್, ಲಾಸ್ಟ್ ಹವರ್, ಹೊಸ ಚೆಂಡು, ಪಾವರ್ ಪ್ಲೇ- ಇವೆಲ್ಲವುಗಳನ್ನು ನಿರ್ಧರಿಸುವವರು ಇವರು.
ಪಂದ್ಯದಲ್ಲಿ ಇಬ್ಬರು ಅಂಪೈರ್‌ಗಳಿರುತ್ತಾರೆ. ಒಬ್ಬರು ಬೌಲಿಂಗ್ ಸ್ಥಾನದಲ್ಲಿರುತ್ತಾರೆ. ಎಸೆದ ಚೆಂಡು ಕ್ರಮವಾಗಿತ್ತೇ ಎಂಬುದನ್ನು ಇವರು ವೀಕ್ಷಿಸುತ್ತಾರೆ. ಮತ್ತೊಬ್ಬರು ಬ್ಯಾಟ್ಸ್‌ಮನ್‌ನ ಸ್ಕ್ವೇರ್ ಲೆಗ್‌ನಲ್ಲಿ ನಿಂತಿರುತ್ತಾರೆ. ಇತ್ತೀಚೆಗೆ ಇಬ್ಬರಿಗೂ ಹೆಚ್ಚುವರಿ ಅಂಪೈರ್‌ಗಳನ್ನು ನೀಡಲಾಗುತ್ತಿದೆ. ಟೆಸ್ಟ್ ಕ್ರಿಕೆಟ್‌ನಲ್ಲಿ ನಾಲ್ವರು ಅಂಪೈರ್‌ಗಳಿರುತ್ತಾರೆ. ಇಬ್ಬರು ಫೀಲ್ಡ್ ಅಂಪೈರ್, ಒಬ್ಬರು ವಿಡಿಯೋ ರಿಪ್ಲೇ ನೋಡುವ ಥರ್ಡ್ ಅಂಪೈರ್ ಹಾಗೂ 4ನೆಯವರು ಫೀಲ್ಡ್ ಅಂಪೈರ್‌ಗಳು ಮೈದಾನದಲ್ಲಿರುವ ಆಟಗಾರರಿಗೆ ನೀರು, ಅಹಾರಗಳ ನೆರವು ನೀಡುತ್ತಾರೆ.

ಮಹತ್ವದ ಅಂಶ

'ವಿಕೆಟ್‌ಗಾಗಿ ಬೌಲರ್‌ಗಳು ಅಪೀಲ್ ಮಾಡಿದಾಗ ಅದಕ್ಕೆ ಸೂಕ್ತ ರೀತಿಯಲ್ಲಿ ಪ್ರತಿಕ್ರಿಯಿಸುವುದು ಮತ್ತು ಕ್ರಿಕೆಟ್ ನಿಯಮಗಳನ್ನು ಮೀರದಂತೆ ಪಂದ್ಯ ನಡೆಸುವುದು ಅಂಪೈರ್‌ಗಳ ಕರ್ತವ್ಯ. ಎಲ್ಲಕ್ಕಿಂತ ಹೆಚ್ಚಾಗಿ ಬೌಲಿಂಗ್ ಮಾಡುವಾಗ ಕ್ಷಣಮಾತ್ರದಲ್ಲೇ ನೋಬಾಲ್ ತೀರ್ಮಾನ ತೆಗೆದುಕೊಳ್ಳುವುದು ಕಷ್ಟದ ವಿಷಯ. ಚೆಂಡ್ ಎಡ್ಜ್‌ಗೆ ಬಡಿಯಿತಾ? ಅಥವಾ ಎಲ್‌ಬಿ ಆಯಿತಾ? ಎಂಬ ತೀರ್ಮಾನ ತೆಗೆದುಕೊಳ್ಳುವುದು ಕಠಿಣ' ಎನ್ನುತ್ತಾರೆ ಅಂಪೈರ್ ಬಿ.ಕೆ. ಕುಮಾರ್.

ಯಾರೆಲ್ಲ ಆಗಬಹುದು?
ಅಂಪೈರ್ ನಿರ್ದಿಷ್ಟ ಪದವಿ ಪಡೆಯಬೇಕಿಲ್ಲ. ಕ್ರಿಕೆಟ್ ನಿಯಮಗಳನ್ನು ಸರಿಯಾಗಿ ತಿಳಿದುಕೊಂಡಿರಬೇಕು. ರಾಜ್ಯ ಕ್ರಿಕೆಟ್ ಸಂಸ್ಥೆ ಆಗಾಗ ಈ ಕುರಿತು ಪರೀಕ್ಷೆಗಳನ್ನು ನಡೆಸುತ್ತದೆ. ಇಲ್ಲಿ ಒಂದು ಬಾರಿ ಆಯ್ಕೆಯಾದರೆ, ಐಸಿಸಿ ಪೆನಲ್ ಅಂಪೈರ್‌ವರೆಗೂ ಹೋಗಬಹುದು.

ಗಳಿಕೆ ಎಷ್ಟು?
ಕ್ರಿಕೆಟ್‌ನಲ್ಲಿ ಆಟಗಾರರನ್ನು ಬಿಟ್ರೆ ಅತಿ ಹೆಚ್ಚು ಸ್ಪರ್ಧೆ ಇರುವುದು ಅಂಪೈರ್ ಸ್ಥಾನಕ್ಕೆ. ಲೀಗ್ ಪಂದ್ಯಗಳ ಅಂಪೈರ್‌ಗೆ ದಿನಕ್ಕೆ ರು. 1,500. ರಣಜಿ ಪಂದ್ಯಗಳಿಗೆ ಆಯ್ಕೆಯಾದರೆ, ದಿನಕ್ಕೆ ರು. 15,000ವರೆಗೂ ಗಳಿಸಬಹುದು. ಐಸಿಸಿ ಪೆನೆಲ್‌ಗೆ ಆಯ್ಕೆಯಾದರೆ ದಿನಕ್ಕೆ ರು. 25,000 ಸೇರಿದಂತೆ ವರ್ಷಕ್ಕೆ ಇಂತಿಷ್ಟು ಅಂತ ಗುತ್ತಿಗೆ ಅಧಾರದ ಮೇಲೆ ಸಂಭಾವನೆ ನೀಡುತ್ತಾರೆ.ಟಿ

- ಮಲ್ಲಿಕಾರ್ಜುನ ಕರಿಯಪ್ಪನವರ
malluk3@gmail.com

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com