ಜೋಕ್ಸ್‌ಪಿಯರ್

Updated on: 

ಒಂದು ಸೈಲೆಂಟ್ ಸ್ಟೋರಿ
ಅದೊಂದು ಪಾರ್ಕು. ಅಲ್ಲಿ ಪ್ರತಿಸಂಜೆ ರಾಶಿ ಹೆಂಗಸರು ಕೂತು ಬಾಯಿಗೆ ಪುರುಸೊತ್ತು ಕೊಡದಂತೆ ಮಾತು ಮಾತು ಅಂತ ಹರಟೆ ಹೊಡೀತಾ ಇರ್ತಿದ್ರು.
ಆದರೆ ಒಂದು ದಿನ ಅಚ್ಚರಿ ಕಾದಿತ್ತು. ಹೆಂಗಸರ ರಾಶಿಯೇನೋ ಇದೆ. ಆದರೆ ಒಬ್ಬರೂ ಮಾತಾಡ್ತಿಲ್ಲ. ಫುಲ್ ಸೈಲೆಂಟ್!
ದಿನಾ ಈ ಗುಂಪನ್ನು ಗಮನಿಸುತ್ತಿದ್ದ ಒಬ್ಬ ಗಂಡಸಿಗೆ ಇದನ್ನು ನೋಡಿ ಅಚ್ಚರಿಯಲ್ಲಿ ಕೇಳಿದ. 'ಏನಾಶ್ಚರ್ಯ! ಯಾಕೆ ಇವತ್ತು ಇಷ್ಟು ಸೈಲೆಂಟು? ಮಾತು ನಗು ಏನೂ ಇಲ್ಲವಲ್ಲ?'
ಅವರಲ್ಲೊಬ್ಬಾಕೆ ಬೇಸರದಿಂದ ಹೇಳಿದಳು. ಎಲ್ಲರೂ ಬಂದಿದೀವಿ ಇವತ್ತು. ಯಾರ ಬಗ್ಗೆ ಗಾಸಿಪ್ ಮಾಡೋಣ ಹೇಳಿ. ಇಷ್ಟ್ ದಿನ ಒಬ್ರಾದ್ರೂ ಮಿಸ್ ಆಗಿರ್ತಿದ್ರು. ಅವರ ಬಗ್ಗೆ ಮಾತಾಡೋ ಅವಕಾಶ ಇರ್ತಿತ್ತು. ನಿಮ್‌ಗೆ ಈ ಕಷ್ಟ ಅರ್ಥ ಆಗಲ್ಲ ಹೋಗ್ರಿ'.
'ಬೆತ್ತಲೆ' ಹುಲಿ
ಮಗ: ಅಪ್ಪ ಅಪ್ಪಾ, ಸರ್ಕಸ್ ನೋಡೋಕ್ ಹೋಗೋಣ ಪ್ಲೀಸ್.
ಅಪ್ಪ: ಇಲ್ಲ ಮರಿ... ತುಂಬಾ ಬ್ಯುಸಿ ಇದೀನಿ.
ಮಗ: ಸರ್ಕಸ್ಸಲ್ಲಿ ಒಂದು ಹುಡುಗಿ... ಬೆತ್ತಲೆ ಹುಲಿ ಮೇಲೆ ಸವಾರಿ ಮಾಡ್ತಾಳಂತೆ ಅಪ್ಪಾ...
ಅಪ್ಪ: ತುಂಬ ಹಟ ಆಯ್ತು ನಿಂದು. ಏನಾದ್ರೂ ಹೇಳಿ ಒಪ್ಪಿಸಿಬಿಡ್ತೀಯ ನೀನು. ಸರಿ ಬಾ. ನಾನೂ ಹುಲಿ ನೋಡದೆ ತುಂಬ ವರ್ಷ ಆಯ್ತು.
ಮುಂದೆ...
ಇಬ್ರೂ ಸರ್ಕಸ್‌ಗೆ ಹೋದ್ರು. ಅಪ್ಪ ಪೂರ್ತಿ ಮುಂದಿನ ಸೀಟಿಗೆ ಟಿಕೆಟ್ ತಗೊಂಡ. ಹುಲಿ ಬಂತು. ಹುಲಿ ಮೇಲೆ ಒಂದು ಹುಡುಗಿ ಕೂಡ ಬಂದ್ಳು. ಆದರೆ ಮೈತುಂಬ ಬಟ್ಟೆ ಧರಿಸಿದ್ದಳು. ಬೆತ್ತಲೆಯಾಗಿರಲಿಲ್ಲ. ಸರ್ಕಸ್ ಮುಗೀತು. ವಾಪಸ್ ಹೋಗ್ತಾ ಇರುವಾಗ ಅಪ್ಪ ಕೇಳ್ದ: ನೀನು ಸರ್ಕಸ್ಸಲ್ಲಿ 'ಒಂದು ಹುಡುಗಿ ಬೆತ್ತಲೆ... ಹುಲಿಮೇಲೆ ಸವಾರಿ ಮಾಡ್ತಾಳೆ' ಅಂದಿದ್ಯಲ್ವಾ?
ಮಗ: ನಾನು ಹೇಳಿದ್ದು ಬೆತ್ತಲೆ ಹುಲಿ ಅಂತ. ಬೆತ್ತಲೆ ಹುಡುಗಿ ಅಲ್ಲ. ಇನ್ನೊಂದ್ಸಲ ನಾ ಹೇಗೆ ಹೇಳ್ದೆ ಅಂತ ನೆನಪಿಸ್ಕೋ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com