ಖುಷಿ

ಮಂಚದ ಮೇಲಿನ ಮೌನ

ಮಂಚದ ಮೇಲಿನ ಮೌನ
Published On :

ರಾತ್ರಿ ಹನ್ನೆರಡು ಗಂಟೆ. ಬೆಡ್ ಮೇಲೆ ಗಂಡ ಹೆಂಡ್ತಿ. ಇಬ್ರೂ ಸೈಲೆಂಟ್. ಮಾತಿಲ್ಲ ಕತೆಯಿಲ್ಲ, ರೋಮ್ಯಾನ್ಸೂ ಇಲ್ಲ.  ಇಬ್ರೂ ಅವ್ರ ಪಾಡಿಗೆ ಅವ್ರು ಏನೋ ಯೋಚನೇಲಿ ಮುಳುಗಿದ್ದಾರೆ.
ಹೆಂಡ್ತಿ ತಲೇಲಿ ಯೋಚನೆಗಳು ಹೀಗೆ ಹರಿದಾಡಲು ಶುರುವಾಗುತ್ತೆ...
ಯಾಕೆ ಇವ್ರು ಮಾತಾಡ್ತಾ ಇಲ್ಲ? ಈತ ಬೇರೆ ಹೆಣ್ಣಿನ ಬಗ್ಗೆ ಯೋಚಿಸ್ತಾ ಇರಬಹುದಾ? ಬೇರೆ ಅಫೇರ್ ಏನಾದರೂ...? ನನ್ನ ಬಗ್ಗೆ ಆಕರ್ಷಣೆ ಕಡಿಮೆ ಆಗಿರಬಹುದಾ? ನನ್ನ ಮುಖದಲ್ಲೇನಾದ್ರೂ ಸುಕ್ಕು ಕಾಣಿಸ್ತಾ ಇದ್ಯಾ? ನನ್ನನ್ನ ಬಿಟ್ಟು ಹೋಗೋ ಬಗ್ಗೆ ಯೋಚಿಸ್ತಾ ಇರಬಹುದಾ? ನಾನೇನಾದ್ರೂ ಯದ್ವಾತದ್ವಾ ದಪ್ಪಾ ಆಗಿದೀನಾ? ನನ್ನ ಮೇಕಪ್ ಇಷ್ಟ ಆಗ್ತಿಲ್ವಾ ಅವನಿಗೆ? ನನ್ನ ಮಾತೇನಾದ್ರೂ ಕಿರಿಕಿರಿ ಅನಿಸ್ತಿರಬಹುದಾ?
ಇತ್ತ ಗಂಡನ ತಲೆಯಲ್ಲಿ....
'ಥತ್... ಈ ಧೋನಿ ಯುವರಾಜನ್ನ ಯಾಕೆ ಬ್ಯಾಟಿಂಗಿಗೆ ಕಳಿಸಿದ್ದು? ರೈನಾ ಬಂದಿದ್ರೆ ಆಗ್ತಿರಲಿಲ್ವಾ...?'

ನಂಬರ್ ಮ್ಯಾಜಿಕ್
ಯಾವುದಾದರೂ ಸಂಖ್ಯೆ ಮನಸಲ್ಲಿಟ್ಕೊಳ್ಳಿ.
ಅದಕ್ಕೆ ಅಷ್ಟನ್ನೇ ಸೇರಿಸಿ.
ಸರಿಯಾಗಿ ಅರ್ಧ ಭಾಗ ಮಾಡಿ.
ಒಂದು ಅರ್ಧಕ್ಕೆ ಹತ್ತು ಸೇರಿಸಿ.
ನೀವು ಶುರುವಲ್ಲಿ ಯಾವ ಸಂಖ್ಯೆ ಮನಸಲ್ಲಿಟ್ಕೊಂಡಿದ್ರೋ ಅದನ್ನು ಕಳೆಯಿರಿ.
ಈಗ ಗಟ್ಟಿಯಾಗಿ ಕಣ್ಣುಮುಚ್ಚಿಕೊಳ್ಳಿ
ಮುಚ್ಚಿಕೊಂಡ್ರಾ?
ಈಗ ನಿಮಗೇನೂ ಕಾಣಿಸ್ತಿಲ್ಲ ತಾನೇ?
ಹೇಗಿದೆ ನಂಬರ್ ಮ್ಯಾಜಿಕ್!!??

ವಜ್ರದಂಗಡಿ
ಆಫೀಸಿಂದ ನಿತ್ಯ ಆರು ಗಂಟೆಗೆ ಬರುತ್ತಿದ್ದ ಗಂಡ ಅವತ್ತು ಏಳಾದರೂ ಇನ್ನೂ ಬಂದಿರಲಿಲ್ಲ. ಹೆಂಡತಿ ಕೋಪದಿಂದ ಫೋನ್ ಮಾಡಿ ರೇಗಿದಳು.
ಎಲ್ಲಿ ಹಾಳಾಗ್ ಹೋದ್ರಿ? ಯಾವ್ ಬೀದಿ ಸುತ್ತುತಾ ಇದ್ದೀರ?
ಗಂಡ: ಡಾರ್ಲಿಂಗ್... ನಿಂಗೆ ನೆನಪಿದೆಯಾ...? ಅವತ್ತು.. ಅದೇ ನೀನು ಹೋದ ತಿಂಗಳು ಒಂದು ಅಂಗಡಿಯಲ್ಲಿ ವಜ್ರದ ನೆಕ್ಲೇಸ್ ತೋರಿಸಿ, ತುಂಬಾ ಇಷ್ಟ ಆಯ್ತು ಕೊಡಿಸ್ತೀಯ ಅಂತ ಕೇಳಿದ್ದೆ.
ಹೆಂಡ್ತಿ: (ಒಂದೇ ಸಲಕ್ಕೆ ಐಸ್ ಆಗಿ ಬಿಟ್ಟಳು) ಹ್ಞಾಂ... ಹೌದು... ಹೇಳಿ ಅಂದ್ರೆ...
ಗಂಡ: ಕೊಡಿಸಬೇಕು ಅಂತ ನಂಗೂ ಆಸೆ ಇತ್ತು. ಅವತ್ತು ನನ್ನ ಹತ್ರ ಅಷ್ಟು ದುಡ್ಡಿರಲಿಲ್ಲ. ಒಂದಲ್ಲ ಒಂದಿನ ಖಂಡಿತಾ ಕೊಡಿಸ್ತೀನಿ ಅಂದಿದ್ದೆ. ನೆನಪಿದೆಯಾ?
ಹೆಂಡ್ತಿ ಮುಖದಲ್ಲಿ ಮಂದಹಾಸ. ಸಿಟ್ಟು ಪೂರ್ತಿ ಮಾಯ.
ಹ್ಞೂಂ ನೆನಪಿದೆ. ನನ್ ರಾಜ ನೀವು... ಲವ್ ಯೂ... ಮುಂದೆ ಹೇಳಿ.
ಗಂಡ: ಆ ಚಿನ್ನದಂಗಡಿ ಪಕ್ಕದಲ್ಲೇ ಹೊಸಾದೊಂದು ಬಾರ್ ಓಪನ್ ಆಗಿದೆ. ಅಲ್ಲಿ ಎಣ್ಣೆ ಹೊಡಿತಾ ಇದೀನಿ. ಬೇಗ ಬರ್ತೀನಿ. ಓಕೆನಾ? ಲವ್ ಯೂ ಟೂ ಡಿಯರ್.


    ಕ್ಲಾಸ್‌ರೂಮಲ್ಲಿ ಗಲಾಟೆ ಮಾಡಿದಾಗ 'ಇದನ್ನೇನ್ ತರಕಾರಿ ಮಾರ್ಕೆಟ್ ಅಂದ್ಕೊಂಡಿದೀರಾ?' ಎಂದು ಗದರೋ ಟೀಚರ್, ತರಕಾರಿ ಮಾರ್ಕೆಟ್ ಸೈಲೆಂಟಾಗಿದ್ರೆ 'ಇದನ್ನೇನ್ ಕ್ಲಾಸ್‌ರೂಮ್ ಅಂದ್ಕೊಂಡಿದೀರಾ?' ಎಂದು ಗದರುತ್ತಾರಾ?
    ತಮಗೆ ಗೂಗಲ್ ಕಂಪನಿಯಲ್ಲಿ ನೌಕರಿ ಸಿಕ್ಕಿದರೂ ಜನ ಖುಷಿಯಲ್ಲಿ ಉದ್ಗರಿಸುವುದು 'ಯಾಹೂ...' ಅಂತಲೇ!
    ಸನ್ನಿ ಲಿಯೋನ್: ನಾನು ಲೆಸ್ಬಿಯನ್. ನೀನು? ಸರ್ದಾರ್ಜಿ: ನಾನು ಇಂಡಿಯನ್. ಇದು ನಮ್ ದೇಶ.
    ಮನೆ ಕಾಲಿಂಗ್‌ಬೆಲ್ ರಿಂಗಣಿಸಿದರೆ ಬಾಗಿಲು ತೆಗೆಯೋ ಮುನ್ನ ಗಂಡಸರು ಟೀವಿ ರಿಮೋಟ್ ಹುಡುಕ್ತಾರೆ. ಹೆಂಗಸರು ತಮ್ಮ ದುಪ್ಪಟ್ಟಾ ಹುಡುಕ್ತಾರೆ.



ನಾಲ್ಕು ಮಕ್ಕಳ ಹೆತ್ತು ಶೇಪ್ ಕಳಕೊಂಡೆ ಅನ್ನೋ ಬೇಸರ ಈಗಿಲ್ಲ. ಅದೇ ನಾಲ್ಕು ತುಂಟ ಮಕ್ಕಳ ಹಿಂದೆ ಓಡಿ ಓಡಿ ಮತ್ತೆ ಶೇಪ್ ಪಡೆದುಕೊಂಡಿದ್ದೇನೆ.
-ಕಿಮ್ ಜೋಲ್ಸಿಯೆಕ್,
ಖ್ಯಾತ ಪಾಪ್ ಗಾಯಕಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.