ಅವನು: ನಿನ್ನನ್ನು ಇದಕ್ಕೂ ಮೊದಲು ಎಲ್ಲೋ ನೋಡಿದ್ದೆ ಅಲ್ವಾ?
ಅವಳು: ಹ್ಹಾ ಹೌದು! ಅದಕ್ಕೆ ನಾನು ಅಲ್ಲಿಗೆ ಹೋಗೋದನ್ನೇ ನಿಲ್ಸಿದ್ದೀನಿ!
ಅವನು: ನಾನೊಬ್ಬ ಛಾಯಾಗ್ರಾಹಕ. ನಿಮ್ಮಂಥ ಸುಂದರ ಮುಖವನ್ನೇ ಹುಡುಕುತ್ತಿರುತ್ತೇನೆ.
ಅವಳು: ಓಹೋ, ನಾನೂ ಪ್ಲಾಸ್ಟಿಕ್ ಸರ್ಜನ್! ನಾನೂ ನಿಮ್ಮಂಥ ಮುಖವನ್ನೇ ಹುಡುಕುತ್ತಿರುತ್ತೇನೆ!
ಅವನು: ಈ ಶನಿವಾರ ನನ್ನೊಂದಿಗೆ ಬರುತ್ತೀಯಾ?
ಅವಳು: ಇಲ್ಲ. ವಾರಾಂತ್ಯದಲ್ಲಿ ನನಗೆ ತಲೆನೋವು ಬರುತ್ತದೆ.
ಅವನು: ನಾನು ನಿನಗೆ ಈ ರಾತ್ರಿ ಹೆಚ್ಚಿನ ಸಂತೋಷ ಕೊಡುತ್ತೇನೆ.
ಅವಳು: ಏನು? ಇವತ್ತು ಹೊರಗೆ ಹೋಗುತ್ತೀಯಾ?
ಅವನು: 'ನಾನು ನಿನ್ನನ್ನು ಮದುವೆ ಆಗಲೆ?' ಎಂದು ಕೇಳಿದರೆ ನೀನೇನು ಮಾಡುತ್ತೀಯ?
(ಅವಳು ಮಾತನಾಡುವುದಿಲ್ಲ. ಜೋರಾಗಿ ನಗುವಾಗ ಮಾತನಾಡಲು ಆಗುವುದಿಲ್ಲ!)
ಅವನು: ನಿನ್ನ ಹೆಸರು ಬೇಕಿತ್ತು...
ಅವಳು: ಯಾಕೆ? ನಿನಗೆ ಹೆಸರಿಲ್ವ?
ಅವನು: ನಮ್ಮಿಬ್ಬರನ್ನು ಒಟ್ಟುಗೂಡಿಸಿದ್ದು ಅದೃಷ್ಟವೇ ಆಗಿರಬೇಕು, ಅಲ್ವಾ?
ಅವಳು: ಹಾಗೇನಿಲ್ಲ. ಅದು ದುರಾದೃಷ್ಟ!
ಒಂದೇ ಕಾರಣ!
ಒಂದು ಸಂದರ್ಶನಕ್ಕೆ ಹುಡುಗ ಮತ್ತು ಹುಡಗಿ ಇಬ್ಬರೂ ಹೋಗುತ್ತಾರೆ. ಎಲ್ಲಾ ಪ್ರಶ್ನೆಗೂ ಹುಡುಗ ಉತ್ತರಿಸುತ್ತಾನೆ. ಆದರೆ, ಒಂದೇ ಕಾರಣಕ್ಕೆ ಕೆಲಸ ಕಳೆದುಕೊಳ್ಳುತ್ತಾನೆ. ಹುಡುಗಿ ಯಾವ ಪ್ರಶ್ನೆಗೂ ಉತ್ತರಿಸುವುದಿಲ್ಲ. ಆದರೂ ಒಂದೇ ಕಾರಣಕ್ಕೆ ಸೆಲೆಕ್ಟ್ ಆಗುತ್ತಾಳೆ.
ಕಾರಣ: ಇಬ್ಬರ ಶರ್ಟ್ನ ಮೊದಲಿನ ಎರಡು ಬಟನ್ ತೆಗೆದಿತ್ತು!
ಅವಳೇ ಬಿಡ್ಲಿಲ್ಲ!
ಟೀಚರ್: ಯಾವಾಗ್ಲೂ ತರಗತಿಗೆ ತಡಮಾಡಿ ಬರ್ತೀಯ. ಇವತ್ತೇನಾಯ್ತು?
ತಿಮ್ಮ: ಬೈಕ್ ಪಂಕ್ಚರ್ ಆಯ್ತು.
ಟೀಚರ್: ಬಸ್ನಲ್ಲಿ ಬರೋದ್ ತಾನೆ?
ತಿಮ್ಮ: ನಾನೂ ಹಾಗೇ ಅಂದ್ಕೊಂಡೆ. ಬಸ್ನಲ್ಲೇ ಹೋದ್ರೆ ಕ್ಲಾಸಿಗೆ ತಡ ಆಗಲ್ಲಾಂತ. ಆದ್ರೆ ಅವಳು ಬಿಡ್ಲಿಲ್ಲ.
ಟೀಚರ್: ಓಹ್, ಜೊತೆಗೆ ಹುಡುಗಿ ಬೇರೆ. ಯಾವಳವಳು?
ತಿಮ್ಮ: ನಿಮ್ಮ ಮಗಳು ಸುನೀತಾ!
ಮುತ್ತಿನ ತತ್ವ!
ಸುಮ್ಮಿ: ಅಮ್ಮ ನನಗೆ ಮರಿಕೊಲ್ಯ ಒಂದು ಕೆನ್ನೆಗೆ ಮುತ್ತುಕೊಟ್ಟ.
ಅಮ್ಮ: ಏನು? ಅವಿವೇಕಿ. ಕೆನ್ನೆಗೆರಡು ಬಾರಿಸಿದಿ ತಾನೆ?
ಸುಮ್ಮಿ: ಇಲ್ಲ ಅಮ್ಮ ನಿನ್ನ ಮಾತಿನಂತೆ ನಡೆದುಕೊಂಡೆ.
ಅಮ್ಮ: ಏನು ಮಾಡಿದೆ?
ಸುಮ್ಮಿ: ಗಾಂಧಿ ತತ್ವ ಪಾಲಿಸಬೇಕು ಅಂತ ನೀನೆ ಹೇಳಿದ್ದೆಯಲ್ಲಾ?
ಅಮ್ಮ: ಹ್ಹಾ ಹೌದು. ಒಂದು ಕೆನ್ನೆಗೆ ಹೊಡೆದರೆ ಮತ್ತೊಂದು ಕೆನ್ನೆ ತೋರಿಸು ಅಂತ.
ಸುಮ್ಮಿ: ಅದನ್ನೇ ಚೂರು ಬದಲಿಸಿ ಇನ್ನೊಂದು ಗಲ್ಲಕ್ಕೂ ಮುತ್ತು ಕೊಡಿಸಿಕೊಂಡೆ!