ನಮ್ಮ ಕರುನಾಡು
ನಮ್ಮ ರಾಜ್ಯದಲ್ಲಿದೆ ಹಲವು ದೇವಾಲಯವು
ಕೋಟಿ ಕೋಟಿ ದೇವರು ನೆಲೆಸಿರುವವು
ಅದನ್ನು ನೋಡಿ ತೃಪ್ತಿಗೊಳ್ಳಿರಿ
ನಿಮ್ಮ ಮನಕೆ ನೀವೇ ಹರುಷ ತಂದುಕೊಳ್ಳಿರಿ
ಕರುನಾಡಿನಲಿ ಈ ಸುಂದರ ಬೀಡಲಿ
ಹಲವು ಕವಿಗಳು ಜನಿಸಿರುವರು
ಕುವೆಂಪು ಬರೆದ ಕೃತಿ
ರಾಜರತ್ನಂ ರಚಿಸಿದ ಗದ್ಯ
ಇವರೆಲ್ಲ ನಮ್ಮ ಕರುನಾಡಿನವರು
ಹಲವು ಬೆಟ್ಟಗಳು
ಬೆಟ್ಟದ ಮೇಲೆ ಹಕ್ಕಿಗಳು
ಅದನ್ನು ನೋಡಲು ಎಂಥ ಚಂದ
ನೋಡಿದ ಮೇಲೆ ಅದು ಅಂದ
ಜಾತಿ ಮತ ಇಲ್ಲಿಲ್ಲ
ಸ್ನೇಹಪರ ಎಲ್ಲೆಲ್ಲ
ನಮ್ಮ ನಾಡಿದು
ಕರುಣೆಯ ಬೀಡಿದು
ಉದಯ. ಸಿ
6ನೇ ತರಗತಿ, 'ಸಿ' ವಿಭಾಗ,
ಜೈನ್ ಪಬ್ಲಿಕ್ ಸ್ಸ್ಕೂಲ್,
ಚಕ್ಕಸಂದ್ರ, ರಾಮನಗರ ಜಿಲ್ಲೆ