ಎಫ್ ಅಂದರ...
ತಿಮ್ಮಾ: ಅದೇನ ತಮ್ಮಾ. ಡಿಕ್ಷನರಿ ತಕ್ಕೊಂಡ ಕುಂತಿಯಲಾ? ಏನ್ ನೋಡಾಕತ್ತಿ?
ತಮ್ಮಾ: 'ಎಫ್' ಪದದಾಗ ಏನೆಲ್ಲ ಐತಿ ಅಂತ ನೋಡತಿದ್ದೆ...
ತಿಮ್ಮ: ಎನರಡ ಸಿಕ್ಕವೇನು?
ತಮ್ಮಾ: 'ಎಫ್'ದಿಂದ 'ಎಫ್‌ಎಂ' ಬಂದೈತಲಾ..!
ತಿಮ್ಮಾ: ಆದರ ಭಾಷಾ ಹಾಳಾಗಿ ಹತ್ತಿಬಿತ್ತಿ ಹೋಗೆತಲಾಡ!!
ತಮ್ಮಾ: 'ಎಫ್'ನಿಂದ 'ಫ್ಯೂಜನ್' ಅಂತ ಏನೋ ಮಾಡ್ತಾರಂತಲಾಡ!
ತಿಮ್ಮಾ: ಸಂಗೀತ ಹಾಳಾಗಿ ಹೊಗೇತಲಾಡ!!
ತಮ್ಮಾ: 'ಎಫ್'ನಿಂದ ಈಗ ಭಾಳಾ ಇಂಪಾರಟೆಂಟ್ ಅಂದ್ರ 'ಫೇಸಬುಕ' ನೋಡಪಾ...!
ತಿಮ್ಮಾ: ಸಂಬಂಧಗಳು ಶಗಣಿ ತಿಂದು ಹೊಂಟಾವಲಾಡಡ!!
ತಮ್ಮಾ: 'ಎಫ್'ನಿಂದ 'ಫಾರಿನ್ ಟೂರ್' ಆಗ್ತಾವಲಾ ಡಡ!!
ತಿಮ್ಮಾ: ಊರಾಗ ಇದ್ದ ಮಾಡಲಿಕ್ಕಾಗಲಾರದ್ದನ್ನ ಟೂರ್‌ನ್ಯಾಗ ಮಾಡಬಹುದಲಾಡಡ!!
ತಮ್ಮಾ: 'ಫಾರಿನ್ ಮಾಲ' ಬಂದಾವಲಾಡಡ!!
ತಿಮ್ಮಾ: ನಾಲ್ಕ ದಿನ ಛಂದಾಗಿರತಾವು, ಆಮ್ಯಾಲ ಮುರದ ಬಿಳತಾವ, ಏನೂ ಗ್ಯಾರಂಟಿ ಇಲ್ಲಲಾಡಡ!!
ತಮ್ಮಾ: 'ಫ್ಯಾಂಟಸಿ ಪಾರ್ಕ್'ಗಳಾಗ್ಯವಲಾಡಡ!!
ತಿಮ್ಮಾ: ಜಾತ್ರಿ, ಹಬ್ಬ-ಹರಿದಿನಗಳು ಮಾಯ ಆಗಕತ್ತವಲಾಡಡ!!
ತಮ್ಮಾ: 'ಎಫ್' ನಿಂದ ಫ್ಲೆಕ್ಸ್ ಬಂದಾವಲಾಡಡ!!
ತಿಮ್ಮಾ: ಕುಂಚ ಹಿಡಿದ ದುಡಿಯೋ ಕಲಾವಿದ ಕಂಗಾಲ ಆಗ್ಯಾನಲಾಡಡ!!
ತಮ್ಮಾ: 'ಫ್ಯಾಷನ್' ಬರೋದೇನು ಹೊಸಾದಲ್ಲ ಆದರ ಚನಲ್ಲು ಬಂದೈತಲಾ...!
ತಿಮ್ಮಾ: ಹುಚ್ಚುತನದ ವರೈಟಿ ನೋಡಾಕ ಸಿಗತೇತಲಾಡಡ!!
ತಮ್ಮಾ: 'ಫಿಲ್ಮ್'ನ್ಯಾಗ ಏನೇನೋ ಆಗ್ಯಾವಲಾಡಡ!!
ತಮ್ಮಾ: ನೋಡವರು ಥೇಟರಿಗೆ ಬರೋದ ಬಿಟ್ಟಾರಲಾಡಡ!!
ತಮ್ಮಾ: 'ಫಿಲ್ಮ್ ಅವಾರ್ಡ್' ಎಲ್ಲಾರಿಗೂ ಕೊಡಾಕತ್ತಾರಲಾಡಡ!!
ತಿಮ್ಮಾ: ಆದರ ಇಸಗೊಳ್ಳಾಕ, ಫಿಲ್ಮ್‌ನವರಡ ಯಾರು ಉಳಿದಿಲ್ಲಲಾಡಡ!!
ತಮ್ಮಾ: 'ಫಂಕ್ಷನ್' ಗಲ್ಲಗಲ್ಲಿಗೂ ಆಗತ್ತಾವಲಾಡಡ!!
ತಿಮ್ಮಾ: ಹಿಂಗಾಗಿ ಮುಖ್ಯ ಅತಿಥಿಗಳು ಸಿಗವಲ್ಲರಾಗ್ಯಾರಲ್ಲ ಡಡ!!
ತಮ್ಮಾ: 'ಫ್ರಾಡ್' ದಿನಕ್ಕದಿನಾ ಹೆಚ್ಚಗಾಕತ್ತಾವಲ !
ತಿಮ್ಮಾ: ಮಾಡಿಸಿಕೊಳ್ಳವರು ಇದ್ದಲ್ಲೆ ಮಾಡವರು ರಡಿ ಇರತಾರ!!
ತಮ್ಮಾ: 'ಫ್ಲಾಪ್'ಗಳು ಭಾಳಗ್ಯಾವು!
ತಿಮ್ಮಾ: ಅರ್ಧಮರ್ಧ ಶಾಣ್ಯಾತನ ಇದ್ದರ ಇನ್ನೇನು ಆಗ್ತಾವು ಡಡ !!
ತಮ್ಮಾ: ಈ 'ಎಫ್'ದಾಗ ಫೇಲ್ ಐತಿ, ಫ್ಲಾ ಐತಿ, ಫೂಲ್ ಐತಿ, ಫಾಲ್ಟ್ ಐತಿ, ಫೋರ್‌ಟ್ವೆಂಟಿನೂ ಇದರಾಗ ಐತೆಲಾ...
ತಿಮ್ಮಾ: ಅದಕ್ಕ ಅದರಾಗಡ ಮಜಾ ಐತಿ, ಅದಡ ಎಫ್‌ನ್ಯಾಗ ಫನ್ ಐತಿ, ಫ್ಲವರ್ ಐತಿ, ಫ್ಲೇವರ್ ಐತಿ, ಫೇವರ್ ಐತಿ, ಒಟ್ಟಿನ್ಯಾಗ 'ಎಫ್' ಫೆಂಟಾಸ್ಟಿಕ್ ಐತಿ!!