ಹಕ್ಕಿಯೊಂದು ಹಾರಿಬಂದು
ಹಣ್ಣು ತಿಂದು ಹೋಯಿತಿಂದು,
ಎಲ್ಲಿ ಎಲ್ಲಿ, ಅಲ್ಲಿ ಅಲ್ಲಿ,
ಗಗನದಲ್ಲಿ, ಮೈಯಿ ಚೆಲ್ಲಿ!
ನಿಲ್ಲೆ ಪುಟ್ಟ ಕಳ್ಳಿ,
ಕಾಗೆಗಿಂತ ಕುಳ್ಳಿ..!
ರೆಕ್ಕೆ ಫ್ಯಾನು, ಕೊಕ್ಕೆ ಗೂನು
ಬಾನ ಮೀನು, ಚಿಕ್ಕ ಪ್ಲೇನು
ಹಣ್ಣು ತಿಂತು ಕುಕ್ಕಿ ಕುಕ್ಕಿ,
ಅಯ್ಯೋ ಹಕ್ಕಿ, ಕಪ್ಪು ಚುಕ್ಕಿ!
ನಿಲ್ಲೆ ಪುಟ್ಟ ಕಳ್ಳಿ,
ಕಾಗೆಗಿಂತ ಕುಳ್ಳಿ..!
ಬಾನ ಯಾನ, ಮಳೆಯ ಸ್ನಾನ
ಭಾರಿ ಮಸ್ತು ನಿನ್ನ ಗಾನ,
ಮೈಯ ಬಣ್ಣ ಬಿಳುಪು ಕಪ್ಪು
ಬರದೆ ನಿನಗೆ ಎಂದು ಮುಪ್ಪು?
ನೀನು ಭಾರಿ ಲಕ್ಕಿ,
ಓಯ್ ಹೆದರು ಪುಕ್ಕಿ...!
ಮುದ್ದು ಗುಂಡು, ನಿನ್ನ ಕಂಡು
ಹಿಂದೆ ಬಂತು ಹದ್ದು ಹಿಂಡು
ಬಾರೆ ಬಳಿಗೆ ಬೇಗ ಬೇಗ,
ಜೋರುಮಾಡು ವೇಗ ವೇಗ
ಹೊರಟೆ ನೀನು ಎಲ್ಲಿ?
ಇದುವೆ ನಿನ್ನ ಹಳ್ಳಿ!
- ರಾಘವೇಂದ್ರ ಆಚಾರ್ಯ
raghu.bioastr@gmail.com