ಪ್ರಕೃತಿ ಪ್ರಮೋದ

ಫೋಟೋಗ್ರಫಿ ಪ್ರಿಯರು, ಪರಿಣತರು ತಮ್ಮ ಸಾಮರ್ಥ್ಯದ ಅನಾವರಣಕ್ಕೆ ಈಗ ವೇದಿಕೆಗೆ ಕಾಯಬೇಕಿಲ್ಲ. ಡಿಜಿಟಲ್ ಕ್ಯಾಮೆರಾದಿಂದ ಕಂಪ್ಯೂಟರ್ ಹೊಕ್ಕುವ ಫೋಟೋಗಳು ಈಗ ಫೇಸ್ಬುಕ್ಗೆ ನೇರವಾಗಿ ಅಪ್ಲೋಡ್ ಆಗುತ್ತವೆ. ಅಲ್ಲಿ ಬೀಳುವ ಲೈಕ್ಗಳ ಸಂಖ್ಯೆ ನೋಡಿಯೇ ನಿಮ್ಮ ಫೋಟೋ ಎಷ್ಟು ಜನಪ್ರಿಯವಾಗಿದೆ ಎಂದು ಊಹಿಸಬಹುದು. ಹಾಗೆ ಅಧಿಕ ಲೈಕ್ ಗಳಿಸಿಕೊಂಡ ಒಳ್ಳೆಯ ಛಾಯಾಚಿತ್ರಗಳಿಗಳಿಗಾಗಿಯೇ ಆರಂಭವಾಗಿರುವ ಅಂಕಣ ಇದು...
ಕೃಷಿ ಕೆಲಸದ ನಡುವೆ ಬಿಡುವಾದಾಗಲೆಲ್ಲ ಕ್ಯಾಮೆರಾ ಎತ್ತಿಕೊಂಡು ಕಾಡು ಬೆಟ್ಟ ಸುತ್ತುವ ಪ್ರಮೋದ್ ಪೈಲೂರು, ಕಳೆದ ಮೂರು ವರ್ಷಗಳಿಂದ ಫೋಟೋಗ್ರಫಿಯನ್ನು ಗಾಢವಾಗಿ ನೆಚ್ಚಿದವರು. ಸುಳ್ಯ ತಾಲೂಕಿನ ದೊಡ್ಡತೋಟದಲ್ಲಿ ಪ್ರಗತಿಪರ ಕೃಷಿಕನಾಗಿರುವ ಪ್ರಮೋದ್, ಮನುಷ್ಯನ ಪ್ರವೇಶದಿಂದ ಕಾಡಿಗೂ ಅಲ್ಲಿನ ಜೀವಿಗಳಿಗೂ ಕಿರಿಕಿರಿಯಾಗಬಾರದೆಂಬ ಕಾಳಜಿ ಹೊಂದಿದವರು. ಇಲ್ಲಿರುವ ಬಾದಾಮಿ ದೇವಾಲಯದ ಫೋಟೊಗೆ ಬೀಳುತ್ತಿರುವ ಲೈಕುಗಳ ಸಂಖ್ಯೆ 500 ದಾಟಿ ಮುನ್ನುಗ್ಗುತ್ತಲೇ ಇದೆ. ವನ್ಯಜೀವನ, ಹಳ್ಳಿಜೀವನ ಇವರ ಆಸಕ್ತಿಯ ಕ್ಷೇತ್ರಗಳು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


