

ಬಹುತೇಕ ಬೆಂಗಳೂರಿಗರ ಜೀವಮಾನದ ಕನಸು ಎಂದರೆ ಮಹಾನಗರದಲ್ಲೊಂದು ಪುಟ್ಟ ಮನೆ ಕಟ್ಟಿಕೊಳ್ಳುವುದು. ಅದು ಸಾಧ್ಯವಾಗದಿದ್ದರೆ ಸ್ವಂತ ನಿವೇಶನವನ್ನಾದರೂ ಹೊಂದುವುದು. ಸಿಲಿಕಾನ್ ಸಿಟಿಯ ಇಂಚು ಜಾಗಕ್ಕೂ ಸಾವಿರಾರು ರುಪಾಯಿ ಕಿಮ್ಮತ್ತು. ಇಂಥ ಸನ್ನಿವೇಶದಲ್ಲಿ ಜಾಗದ ಕನಸು ಕಾಣುವುದಾದರೂ ಸಾಧ್ಯವೆ?
ಹಾಗಂತ ಮಧ್ಯಮ ವರ್ಗದ ಮಂದಿ ನಿರಾಶರಾಗಬೇಕಾದ ಅಗತ್ಯವಿಲ್ಲ. ಭರವಸೆಯ ಬೆಳಕಾಗಿ 'ಟ್ರಾನ್ಸಿಟಿ ಡೆವಲಪರ್ಸ್'ನಂಥ ಸಂಸ್ಥೆಗಳೂ ಇವೆ. 'ನಿಮ್ಮ ಕನಸುಗಳನ್ನು ನಾವು ವಾಸ್ತವಾಗಿ ಪರಿವರ್ತಿಸುತ್ತೇವೆ' ಎನ್ನುವ ಧ್ಯೇಯದೊಂದಿಗೆ 2006ರಲ್ಲಿ ಹುಟ್ಟಿಕೊಂಡ ಸಂಸ್ಥೆ, ಅಲ್ಪಾವಧಿಯಲ್ಲೇ ಬೆಂಗಳೂರಿನ ನಂಬಿಕಸ್ಥ ರಿಯಲ್ ಎಸ್ಟೇಟ್ ಸಂಸ್ಥೆಯಾಗಿ ಬೆಳೆದು ನಿಂತಿರುವುದು ಸಣ್ಣ ಮಾತಲ್ಲ.
ನೆಮ್ಮದಿಯ ನೆಲೆ ಹೊಂದುವ ಸಾಮಾನ್ಯನ ಕನಸಿಗೆ ಜೀವ ತುಂಬುತ್ತಿರುವ ಸಂಸ್ಥೆಯನ್ನು ಹುಟ್ಟುಹಾಕಿದವರು ವಿ. ನಂದಗೋಪಾಲ್. ಅವರು ಸಾಫ್ಟ್‌ವೇರ್ ಉದ್ಯಮದಲ್ಲಿ ಸಾಕಷ್ಟು ಅನುಭವ ಹೊಂದಿದ್ದಾರೆ. ಇವರ ಬೆನ್ನೆಲುಬಾಗಿ ನಿಂತಿರುವ ಮತ್ತೊಬ್ಬರು ಸ್ನೇಹಿತ ಎಸ್.ರವಿ. ಇವರು ಭಾರತೀಯ ವಾಯು ಪಡೆಯಲ್ಲಿ ಸುಮಾರು 20 ವರ್ಷ ಸೇವೆ ಸಲ್ಲಿಸಿದ್ದಾರೆ. ತಮ್ಮ ಉದ್ದೇಶದಲ್ಲಿ ಅವರು ಸಫಲರಾಗಿದ್ದಾರೆ ಕೂಡ.
ಉತ್ತರ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಬಳಿ 10್ಢ10 ಅಳತೆಯ ಪುಟ್ಟ ರೂಮಿನಲ್ಲಿ 5 ಮಂದಿಯೊಂದಿಗೆ ಆರಂಭವಾದ ಟ್ರಾನ್ಸಿಟಿ ಇಂದು ದೊಡ್ಡ ಸಂಸ್ಥೆ. ಸದ್ಯ ಸದಾಶಿವನಗರದಲ್ಲಿರುವ ಕಚೇರಿಯಲ್ಲಿ 45ಕ್ಕೂ ಮಂದಿ ದುಡಿಯುತ್ತಿದ್ದಾರೆ. ಬೆಂಗಳೂರಿನ ವಿವಿಧೆಡೆ 10 ಯೋಜನೆಗಳನ್ನು ಯಶಸ್ವಿಯಾಗಿ ಪೂರೈಸಿದೆ. 10,000ಕ್ಕೂ ಹೆಚ್ಚು ಸಂತೃಪ್ತ ಗ್ರಾಹಕರಿದ್ದಾರೆ. ಈ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚುತ್ತಲೇ ಸಾಗಿದೆ. ಮಂಗಳೂರು, ಹಾಸನ, ಶಿವಮೊಗ್ಗ ಸೇರಿದಂತೆ ವಿವಿಧ ಜಿಲ್ಲೆಗಳ ಜನ ಗ್ರಾಹಕರಾಗಲು ಹಾತೊರೆಯುತ್ತಿದ್ದಾರೆ. ಅವರ ಕನಸು ನನಸಾಗಿಸಲು ಮೈಸೂರಿನಲ್ಲಿ 'ಟ್ರಾನ್ಸ್ ಪ್ರಸಿದ್ಧಿ' ಎಂಬ ಯೋಜನೆ ಆರಂಭಿಸುವ ಮೂಲಕ ಮೊದಲ ಹೆಜ್ಜೆ ಇರಿಸಿದೆ. ಮುಂದಿನ ದಿನಗಳಲ್ಲಿ ರಾಜ್ಯದ ಇತರೆಡೆಗಳಲ್ಲೂ ಯೋಜನೆ ರೂಪಿಸಲು ತಯಾರಿ ನಡೆಸುತ್ತಿದೆ.
ಬಡ್ಡಿರಹಿತ ಸಾಲ!
ನಿವೇಶನ ಕೊಳ್ಳುವವರಿಗೆ 12 ರಿಂದ 14 ತಿಂಗಳವರೆಗೆ ಬಡ್ಡಿರಹಿತ ಸಾಲವನ್ನು ಸಂಸ್ಥೆ ಒದಗಿಸುತ್ತದೆ. ಇಷ್ಟೇ ಅಲ್ಲದೆ ಪ್ರತಿ ಚದರಡಿಗೆ 275 ರೂ. ನಿಂದ 1499 ರೂ. ವರೆಗಿನ ನಿವೇಶನಗಳು ಲಭ್ಯ. ಗ್ರಾಹಕ ತನಗೆ ಅನುಕೂಲವಾಗುವ ಅಳತೆಯ 30್ಢ40, 30್ಢ50, 40್ಢ60, 50್ಢ80 ಶ್ರೇಣಿಯ ಸೈಟ್‌ಗಳನ್ನು ಕೊಳ್ಳಬಹದು.
ವಿಳಾಸ: ಟ್ರಾನ್ಸಿಟಿ ಡೆವಲಪರ್ಸ್, ನಂ.32, 13ನೇ ಅಡ್ಡರಸ್ತೆ, ಭಾಷ್ಯಂ ಸರ್ಕಲ್, ಸದಾಶಿವನಗರ, ಬೆಂಗಳೂರು. ಮೊ: 9741596844. ವೆಬ್‌ಸೈಟ್: www.protranscity.com, ಮಿಂಚಂಚೆ: protranscity@gmail.comn
ಟ್ರಾನ್‌ಸಿಟಿ ಯೋಜನೆಗಳು
1. ಆರ್ಕಿಡ್ ಪ್ಯಾರಡೈಸ್
ನಂದಗುಡಿ ಬಳಿ 50 ಎಕರೆ ಪ್ರದೇಶದಲ್ಲಿ ಮೈತೆಳೆದು ನಿಂತಿದೆ. ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ 15 ನಿಮಿಷದ ಪ್ರಯಾಣ. ಅತ್ಯುತ್ತಮ ಸಂಪರ್ಕ ರಸ್ತೆ, ಗಾಲ್ಫ್ ಮೈದಾನ, ಈಜುಕೊಳ, ಟೆನ್ನಿಸ್ ಕೋರ್ಟ್, ಬಾಸ್ಕೆಟ್ ಬಾಲ್ ಕೋರ್ಟ್, ಮಕ್ಕಳ ಆಟದ ಮೈದಾನ, ಜಾಗಿಂಗ್ ಟ್ರ್ಯಾಕ್ ಹಾಗೂ 24 ಗಂಟೆ ಭದ್ರತಾ ವ್ಯವಸ್ಥೆ. ಇಲ್ಲಿ ಪ್ರತಿ ಚದರ ಅಡಿ ಭೂಮಿ ಕೇವಲ 499 ರೂ.ನಿಂದ ಪ್ರಾರಂಭ.
2. ರಾಯಲ್ ಪ್ಯಾರಡೈಸ್
ಇದು ನಂದಿಬೆಟ್ಟದ ತಪ್ಪಲಲ್ಲಿ ತಲೆ ಎತ್ತಿದೆ. ಡಿಸಿ ಪರಿವರ್ತಿತ ಯೋಜನೆಯಾಗಿದೆ.
3. ಟ್ರಾನ್ಸ್ ಗಾರ್ಡೇನಿಯಾ
ಬೆಂಗಳೂರಿನ ರಾಜಾನುಕುಂಟೆ ಹಾಗೂ ಯಲಹಂಕ ಬಳಿ ಇದೆ. ನಿಮ್ಮ ಬಂಡವಾಳಕ್ಕೆ ವಿಶ್ವದರ್ಜೆಯ ಅತ್ಯುತ್ತಮ ಸೌಲಭ್ಯಗಳನ್ನು ನೀಡುವ ಯೋಜನೆಯಾಗಿದೆ.
4. ಏರೋಲೈಟ್ ಕಂಟ್ರಿ
ದೇವನಹಳ್ಳಿಯ ಶಿಡ್ಲಘಟ್ಟ ರಸ್ತೆಯಲ್ಲಿ ಇದ್ದು, ಎಲ್ಲ ಸೌಲಭ್ಯಗಳನ್ನೂ ಒಳಗೊಂಡಿದೆ.
ನಿರ್ಮಾಣ್ ರತನ್ ಪ್ರಶಸ್ತಿ
ಸರ್ಕಾರದ ನಿಯಮದಂತೆ ಲೇಔಟ್ ಅನುಮೋದನೆ ಪಡೆಯುವಾಗಲೇ ಶೇ 55 ಜಾಗದಲ್ಲಿ ಮಾತ್ರ ವಸತಿ ನಿರ್ಮಾಣ ಮಾಡಬೇಕು. ಇನ್ನುಳಿದ ಶೇ 45 ಜಾಗದಲ್ಲಿ ಉದ್ಯಾನ, ಆಟದ ಮೈದಾನ, ಮಕ್ಕಳ ಆಟದ ಮೈದಾನ, ಕ್ಲಬ್ ಅಂತಹವುಗಳಿಗೆ ಬಳಸಲೇಬೇಕು ಎಂಬ ನಿಯಮವಿದೆ. ಈ ಎಲ್ಲ ನಿಯಮ ಹಾಗೂ ಗುಣಮಟ್ಟದಲ್ಲಿ ಯಾವುದೇ ರಾಜಿ ಮಾಡಿಕೊಳ್ಳದೆ ಯೋಗ್ಯ ರೀತಿಯಲ್ಲಿ 'ಟ್ರಾನ್ಸ್ ಸಿಟಿ' ವ್ಯವಹರಿಸುತ್ತಿದೆ. ಈ ಸಂಸ್ಧೆಯ ಯೋಜನೆಗಳು ಮತ್ತು ಕಾರ್ಯದಕ್ಷತೆ ಮೆಚ್ಚಿ ನವದೆಹಲಿಯ 'ಗ್ಲೋಬಲ್ ಅಚೀವರ್ಸ್ ಫೌಂಡೇಷನ್' ಸಂಸ್ಥೆ 'ಭಾರತ ನವ ನಿರ್ಮಾಣ್ ರತನ್' ಎಂದು ಬಿರುದು ನೀಡಿ ಗೌರವಿಸಿದೆ.