ಖುಷಿ

ಅಂವ ಫೋನಿಗೂ ಸಿಗ್ತಿಲ್ಲ...

Published On :

ರವೀಶ್ ಎಂಬ ವ್ಯಕ್ತಿ ಮದುವೆ ಆಗುತ್ತೇನೆ ಎಂದು ಹೇಳಿದ್ದ. ಶಾಸ್ತ್ರ ನೋಡಿ ನಿಶ್ಚಿತಾರ್ಥ ದಿನಾಂಕ ಗೊತ್ತು ಮಾಡಿಯಾಗಿತ್ತು. ಆದರೆ ಇತ್ತೀಚೆಗೆ ಅಂವ ಫೋನಿಗೂ ಸಿಗುತ್ತಿಲ್ಲ. ದಾರಿಯೇ ತೋಚುತ್ತಿಲ್ಲ.
- ರೇಖಾ, ಊರುಬೇಡ
ಧೃತಿಗೆಡಬೇಡಿ. ಕೇವಲ ಮಾತಿನಲ್ಲಷ್ಟೇ ನಂಬಿಸಿದ್ದಾನೆ. ಒಮ್ಮೆ ಹಿರಿಯರನ್ನು ಆತನ ಮನೆಗೆ ಕರೆದೊಯ್ದು ವಿಚಾರಿಸಿ. ಆತನಿಂದಲೇ ನಿಮ್ಮ ಜೀವನ ಬೆಳಕು ಕಾಣುತ್ತದೆ ಎಂಬ ಬಲವಾದ ನಂಬಿಕೆ ಬೇಡ. ನಕಾರಾತ್ಮಕ ಯೋಚನೆ ಬಿಡಿ. ತಾಳ್ಮೆಯಿಂದಿರಿ. ಎಲ್ಲವೂ ಒಳ್ಳೆಯದಾಗುತ್ತದೆ. ಶೀರ್ಘದಲ್ಲೇ ಉತ್ತಮ ಸಂಬಂಧ ಕೂಡಿಬರುತ್ತದೆ ಎಂಬ ನಂಬಿಕೆಯಿಂದಿರಿ.

ನಿದ್ರೆಯಲ್ಲಿ ಬಯಲಾದರೆ...
ನಿದ್ರೆಯಲ್ಲಿ ಮಾತನಾಡುವ ಅಭ್ಯಾಸವಿದೆ. ಇತ್ತೀಚೆಗೆ ಒಬ್ಬಳನ್ನು ಪ್ರೀತಿಸುತ್ತಿದ್ದೇನೆ. ಅವಳ ಕುರಿತೇ ಹೆಚ್ಚು ಯೋಚಿಸುತ್ತೇನೆ. ಮನೆಯವರಿಗೆ ಎಲ್ಲಿ ತಿಳಿದುಬಿಡುತ್ತದೋ ಎಂಬ ಭಯ. ಏನುಮಾಡಲಿ?
- ರಥನ್ ಮಯೂರ, ಶಿವನಗರ
7 ಗಂಟೆಯಷ್ಟೇ ನಿದ್ರೆ ಮಾಡಿ. ಸಮಯ ಸಿಕ್ಕಿತೆಂದು ಬೇಗ ಮಲಗಬೇಡಿ. ತಡಮಾಡಿ ಏಳಬೇಡಿ. ಪುಸ್ತಕ, ಪತ್ರಿಕೆ ಓದುವುದನ್ನು ರೂಢಿಸಿಕೊಳ್ಳಿ. ನಿದ್ದೆಗೆಡುವುದೂ ಸೂಕ್ತವಲ್ಲ. ಆಗ ಮಾತನಾಡುವ ಅಭ್ಯಾಸ ತಾನಾಗೇ ನಿಲ್ಲುತ್ತದೆ. ಚಿಂತೆ ಬೇಡ.

ನಾ ಮದ್ವೆ ಆಗ್ತೀನಿ...
ನನ್ನ ಗೆಳತಿಯರಿಗೆಲ್ಲಾ ಮದುವೆ ಆಯಿತು. ನನಗೀಗ 21 ವಯಸ್ಸು. ಮದುವೆ ಆಗಬಹುದೆ?
- ಸುಭಾಷ್ ಎಚ್., ಹಳೆಮನೆ
ನಿನ್ನ ಗೆಳೆಯರಿಗೆ ಮದುವೆ ಆಗಿದೆಯಾ? ಗೆಳತಿಯರು ಮದುವೆ ಆಗುತ್ತಾರೆಂದು ನೀನೇಕೆ ಒದ್ದಾಡುತ್ತೀಯಾ? ಕೈಯಲ್ಲಿ ಒಳ್ಳೆಯ ಜಾಬ್ ಇದ್ದು ಬರುವವಳನ್ನು ನಿಭಾಯಿಸಬಲ್ಲೆ ಎಂಬ ಕಾನ್ಫಿಡೆನ್ಸ್ ಇದ್ದರೆ ಆಗು. ಹುಡುಗರು 24 ವರ್ಷದ ನಂತರ ಮದುವೆಯಾದರೆ ಉತ್ತಮ.
-    ಡಾ. ನರೇಂದ್ರ ಗಾಂಧಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.