ಖುಷಿ

ಇರುವುದನೆ ಕಳೆದು ಪುನಃ ಪಡೆದುಕೊಳ್ಳಿ...

ಇರುವುದನೆ  ಕಳೆದು ಪುನಃ ಪಡೆದುಕೊಳ್ಳಿ...
Published On :

ಸೆಕ್ಸೊಂದು ಸೌಂದರ್ಯ ಸಮರ. ಹಾಗಂತ ಯೋಗರಾಜ ಭಟ್ಟರೆ ಪರೋಕ್ಷವಾಗಿ ಹೇಳಿಬಿಟ್ಟಿದ್ದಾರೆ. ಕಳೆದುಕೊಳ್ಳುವ ಇಲ್ಲಿನ ಸಂಗತಿಗಳಲ್ಲಿ ಕ್ಯಾಲೊರಿ ಕೂಡ ಒಂದು. ಅರ್ಧ ಗಂಟೆ ಲೈಂಗಿಕ ಕ್ರೀಡೆಗೆ ಪುರುಷ 120 ಕ್ಯಾಲೋರಿ ವ್ಯಯಿಸುತ್ತಾನೆ. ಮಹಿಳೆ 90 ಕ್ಯಾಲೊರಿ ವ್ಯಯಿಸುತ್ತಾಳೆ.
ಹಾಗಂತ ಮೊನ್ನೆ ಕೆನಡಾದ ಕ್ಯುಬೆರಿಕ್ ಯುನಿವರ್ಸಿಟಿ ಬಹಿರಂಗಪಡಿಸಿದೆ. 30 ನಿಮಿಷ ಜಾಗಿಂಗ್ ಮಾಡುವ ಸಂದರ್ಭದಲ್ಲಿ ಖರ್ಚಾಗುವ ಶಕ್ತಿಗಿಂತ ಅರ್ಧದಷ್ಟು ಇಲ್ಲಿ ವ್ಯಯವಾಗುತ್ತದಂತೆ. ಆರೋಗ್ಯವಂತ ಜೋಡಿಗಳಲ್ಲಿ ಸೆಕ್ಸ್ ವೇಳೆ ಪುರುಷ ಪ್ರತಿ ನಿಮಿಷಕ್ಕೆ 4.2 ಕ್ಯಾಲೋರಿ ವ್ಯಯಿಸುತ್ತಾನೆ.
ವಿಜ್ಞಾನಿಗಳು 18-35 ವಯಸ್ಸಿನೊಳಗಿನ 20 ಜೋಡಿಗಳನ್ನು ಗುರುತಿಸಿತು. ತಿಂಗಳಲ್ಲಿ ಪ್ರತಿ ವಾರಕ್ಕೆ ಒಂದು ಬಾರಿ ಸೆಕ್ಸ್ ಮಾಡುವಂತೆ ಮತ್ತು 30 ನಿಮಿಷ ಜಾಗ್ ಮಾಡುವಂತೆ ಹೇಳಿತ್ತು. ವ್ಯಯವಾಗುವ ಶಕ್ತಿಯನ್ನು ಅಳತೆಮಾಡುವ ಪಟ್ಟಿಯನ್ನೂ ನೀಡಲಾಗಿತ್ತು. ಪರೀಕ್ಷೆಯಲ್ಲಿ ತಿಳಿದುಬಂದ ಅಂಶವೆಂದರೆ, ಲೈಂಗಿಕ ಚಟುವಟಿಕೆ ದೇಹಕ್ಕೆ ಉತ್ತಮ ವ್ಯಾಯಾಮ.
ಪುರುಷ ಮತ್ತು ಮಹಿಳೆಯರಿಬ್ಬರೂ ಹಾಸಿಗೆಯಲ್ಲಿ ಮಾಡುವ 'ವ್ಯಾಯಾಮ'ವೇ ಸುಖಕರ. ಜಾಗಿಂಗ್ ಮಾಡುವಾಗ ಹೆಚ್ಚು ದಣಿವಾಗುತ್ತದೆ ಎಂದಿದ್ದಾರೆ. ಲೈಂಗಿಕ ಕ್ರೀಡೆ ಹೆಚ್ಚಿನ ಕ್ಯಾಲೊರಿಯನ್ನು ಕರಗಿಸುವುದಲ್ಲದೆ ಚಯಾಪಚಯ ಕ್ರಿಯೆಯನ್ನೂ ವೃದ್ಧಿಸುತ್ತದೆ. ಇದನ್ನು 'ಎಮ್‌ಇಟಿ' ಎಂದು ಗುರುತಿಸಲಾಗುತ್ತದೆ. ಅಂದರೆ, 'ಮೆಟಾಬೋಲಿಕ್ ಇಕ್ವಿವೇಲೆಂಟ್ ಆಫ್ ಟಾಸ್ಕ್‌'. ಸೆಕ್ಸ್ ವೇಳೆ ಪುರುಷನಲ್ಲಿ ಸುಮಾರು 6 ಎಮ್‌ಇಟಿ ಮತ್ತು ಮಹಿಳೆ 5.6 ಎಮ್‌ಇಟಿ ವೃದ್ಧಿಸುತ್ತದೆ. ಇದು ಟೆನ್ನಿಸ್ ಆಡಿದಾಗ ಅಥವಾ ಎತ್ತರ ಪ್ರದೇಶದಲ್ಲಿ ನಡೆದಾಗ ವೃದ್ಧಿಯಾಗುವುವ ಎಮ್‌ಇಟಿಗೆ ಸಮ.
ವಿಜ್ಞಾನಿಗಳೇ ಹೇಳಿರುವಂತೆ ಸೆಕ್ಸ್ ಜೀವನದಲ್ಲಿ ಬೇಕೇಬೇಕು. ಮಾನಸಿಕ, ದೈಹಿಕ ಮತ್ತು ಸಾಮಾಜಿಕ ಆರೋಗ್ಯದ ಗುಟ್ಟು ಸೆಕ್ಸ್‌ನಲ್ಲೇ ಅಡಕವಾಗಿದೆ. ಊಟ- ನಿದ್ರೆಯಂತೆ ಇದೂ ದೇಹಕ್ಕೆ ಮುಖ್ಯ. ಇನ್ನೇಕೆ ತಡ? ಈ ವಿಚಾರವನ್ನು ನಿಮ್ಮ ಸಂಗಾತಿಗೂ ಹೇಳಿ; 'ವಿಜ್ಞಾನಿಗಳೇ ಹೇಳಿದ್ದಾರಂತೆ, ಇನ್ನೇನ್ ನಿನ್ದು' ಅಂತ.
ಸಂಗಾತಿ ತಕರಾರು ಎತ್ತಿದರೆ, ನಷ್ಟವಾಗುವುದು ಅವರ ಆರೋಗ್ಯವೇ. ಗೊತ್ತಾಯ್ತಲ್ಲ, ಈಗ ಡಾಕ್ಟರ್‌ರಿಂದ ದೂರವಿರಲು ಸೇಬು ತಿನ್ನುವ ಅಗತ್ಯವಿಲ್ಲ. ಬೇರೆ 'ಮಾರ್ಗ' ಕಂಡುಹಿಡಿಯಲಾಗಿದೆ!


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.