ಉತ್ತರಾಧಿಕಾರಿ
ಬರ್ಕ್ಲಿ ರಮೇಶ್, ಕಿರಗಂಧೂರು ಮಂಡ್ಯ
ನಾನೇ ಕಿಂಗ್ ಅನ್ನೋ ಸಿನಿಮಾ ಮಾಡ್ತಿದ್ದೀನಿ, ನೀವೇ ಹೀರೋ, ಫುಲ್ ಖುಷಿಯಾಗ್ತಿದೆಯಾ?
-ನಾನೇ ಕ್ವೀನ್ ಅಂತ ಯಾವ ಹೀರೋಯಿನ್ ಬರ್ತಿದ್ದಾರೆ!?
ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ
ಇತ್ತೀಚೆಗೆ ಗುಳಿ ಕೆನ್ನೆಯ ಹುಡುಗಿಯರೇ ಕಾಣ್ತಿಲ್ಲವಲ್ಲ?
-ಇದ್ದಾರೆ, ಆದರೆ ಕೆನ್ನೆಯ ಗುಳಿಯನ್ನು ಮೊಬೈಲ್ ಮುಚ್ಚಿರುತ್ತೆ!
ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ
ದೆಹಲಿಯಲ್ಲಿ ಎಎಪಿ ವತಿಯಿಂದ ಪೊರಕೆಯನ್ನು ಉಚಿತವಾಗಿ ಪ್ರತಿ ಮನೆಗೂ ನೀಡುತ್ತಾರಂತೆ?
- ಇದರ ವಿರುದ್ಧ ವಾಕ್ಯೂಮ್ ಕ್ಲೀನರ್ ಕಂಪನಿಯವರು ಕೋರ್ಟ್ಗೆ ಹೋಗಬಹುದು!
ಮಹೇಶ್ ಸಾನಬಾಳ, ಮಸ್ಕಿ
ನಾನು ಒಂದು ಮಠ ಕಟ್ಟಿಸುತ್ತೇನೆ, ನೀವು ಉತ್ತರಾಧಿಕಾರಿ ಆಗ್ತೀರಾ?
- ಆಮೇಲೆ ಅಲ್ಲಿ ನಡೆಯುವ ಎಲ್ಲದಕ್ಕೂ ನೀವು ಉತ್ತರ ಕೇಳಬಾರದು!
ವೀರೇಶ್ ಗಡ್ಡಿಮಾಳ, ಸಿಂಧನೂರು
ಆಡದೇ ಮಾಡಿ ತೋರಿಸಬೇಕು ಅನ್ನೋದು ಕೇಜ್ರಿವಾಲರ ನಿಯಮವಂತೆ?
-ಆಡದೇ ಗುಡಿಸಿ ತೋರಿಸ್ತಾರಂತೆ!
ಶಂಕರ.ಬಿ, ಶಿರಮಳ್ಳಿ, ನಂಜನಗೂಡು
ಚಿತ್ರವೇ ಎಲ್ಲವನ್ನೂ ಹೇಳಿಬಿಡಬೇಕು ಎಂದರೆ ಆ ಚಿತ್ರ ಹೇಗಿರಬೇಕು?
- ಚಿತ್ರ ಬಹಳ ಓವರ್ ಆಗಿರಲೂಬಾರದು, ಬಹಳ ಕವರ್ ಆಗಿರಲೂಬಾರದು!
ಪಿ.ಜೆ. ರಾಘವೇಂದ್ರ, ಮೈಸೂರು
ವಿಧಾನಸೌಧದ ಗೋಡೆ ಒಡೆಯುವುದೂ ಸಮಾಜಕಲ್ಯಾಣವೇ?
- ಅಲ್ಲಿಂದ ಸಮಾಜ ಎಷ್ಟು ದೊಡ್ಡದಾಗಿದೆ ಅಂತ ಕಾಣಿಸ್ತಿರಲಿಲ್ಲವಂತೆ!
ಬಸವನಗೌಡ ಹೆಬ್ಬಳಗೆರೆ, ಚನ್ನಗಿರಿ
ಮಧುಚಂದ್ರಕ್ಕೆ ಮಂಗಳ ಗ್ರಹಕ್ಕೆ ಹೋಗೋಣ ಅಂತಿದ್ದಾಳಲ್ಲ ಸಾರ್?
-ನಿಮ್ಮಿಬ್ಬರ ಉಡಾವಣೆಗೆ ಇಸ್ರೋ ಕೇಂದ್ರಕ್ಕೇ ಹೋಗಬೇಕು!
ಅಂದಾನಯ್ಯ ತಿಗರಿಮಠ, ಅಳವಾಡಿ
ಸಿದ್ರಾಮಯ್ಯನವರಿಗೆ ಕಮಲ ಬಾಡಿ ಹೋದ ಹಾಗೆ ಕನಸು ಬಿತ್ತಂತೆ?
-ಅದು ಹಳೇ ಕನಸೇ, ಮತ್ತೆ ಬಿದ್ದಿರಬೇಕು!
-ಎಸ್.ವಿ. ಪದ್ಮನಾಭ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

