ಇಂಕಿಲ್ಲದ ಪೆನ್ನು
ಹುಡುಗ: ಈ ಪೆನ್ನಲ್ಲಿ ಇಂಕೇ ಇಲ್ಲ.
ಕೋಲ್ಯ: ಕಣ್ ಕಾಣಲ್ವೇಣ್ರೀ... ಅಷ್ಟ್ ಇಂಕ್ ಇದೆ...
ಹುಡುಗ: ಹಾಗಾದ್ರೆ ನಿಮ್ಮ ಮೊಬೈಲ್ ನಂಬರ್ ಬರೆದು ತೋರ್ಸಿ ನೋಡೋಣ.
=
ಬೋರ್ಡು ನಾಪತ್ತೆ
ಕೋಲ್ಯ ಆಫೀಸಿನ ತನ್ನ ಛೇಂಬರ್ನಲ್ಲಿ 'ಐ ಆ್ಯಮ್ ದಿ ಬಾಸ್, ಡೋಂಟ್ ಫಾರ್ಗೆಟ್' ಎಂಬ ಬೋರ್ಡನ್ನು ಹಾಕ್ಕೊಂಡಿದ್ದ. ಲಂಚ್ಗೆ ಹೋಗಿ ವಾಪಸ್ಸಾಗುವಾಗ ಆ ಬೋರ್ಡೇ ನಾಪತ್ತೆ ಆಗಿತ್ತು. ಅಟೆಂಡರ್ನನ್ನು ಕರೆದ...
ಕೋಲ್ಯ: ಎಲ್ ಹೋಯ್ತು, ಇಲ್ಲಿದ್ದ ಬೋರ್ಡು?
ಅಟೆಂಡರ್: ನಿಮ್ಮ ಹೆಂಡ್ತಿ ಬಂದಿದ್ರು. 'ಈ ಬೋರ್ಡು ಆಫೀಸಲ್ಲಿರೋದು ಸರಿಯಲ್ಲ. ಮನೆಯಲ್ಲಿದ್ದರೆ ಚೆನ್ನ' ಅಂತ ತಗೊಂಡ್ ಹೋದ್ರು.
=
ಹೀಗೊಂದು ಸರ್ಪ್ರೈಸ್
ಫಂಟಾ: ನನ್ನ ಗರ್ಲ್ಫ್ರೆಂಡ್ಗೆ ಸರ್ಪ್ರೈಸ್ ಕೊಡ್ಬೇಕು. ಏನಾದ್ರೂ ಐಡಿಯಾ ಕೊಡೋ?
ಕೋಲ್ಯ: ಸಿಂಪಲ್ ಕಣೋ... ನಿನ್ನ ಹೆಂಡ್ತೀನ ಅವಳಿಗೆ ಪರಿಚಯ ಮಾಡ್ಕೊಡು.
=
ಮಾತಿಗೆ ಅವಕಾಶ
ಕೋಲ್ಯಿಣಿ: ನಮ್ಮೆಜಮಾನ್ರು ರಾತ್ರಿ ನಿದ್ರೆಯಲ್ಲೂ ಮಾತಾಡ್ತಿರ್ತಾರೆ. ಏನಾದ್ರೂ ಪರಿಹಾರ ಇದ್ಯಾ?
ಡಾಕ್ಟರ್: ಹಗಲು ಹೊತ್ತು ಅವರಿಗೆ ಮಾತನಾಡಲು ಚಾನ್ಸ್ ಕೊಡಿ.
=
ಸ್ವೀಟು ನಂತರ ಅಂಟು
ಫಂಟಾ: ಚ್ಯೂಯಿಂಗ್ ಗಮ್ಗೂ, ಬೇಗಮ್ಗೂ (ಹೆಂಡ್ತಿ) ಇರುವ ವ್ಯತ್ಯಾಸ ಏನು?
ಕೋಲ್ಯ: ಮೊದ ಮೊದಲು ಎರಡೂ ಸಿಕ್ಕಾಪಟ್ಟೆ ಸ್ವೀಟು. ನಂತರ ಬರೀ ಸಪ್ಪೆ. ಬಿಡೋಣ ಅಂದ್ರೂ ಎರಡೂ ಅಂಟೋ ಅಂಟು.
=
ಎಷ್ಟು ನಾಣ್ಯ?
ಕೋಲ್ಯ: ನನ್ನ ಪರ್ಸ್ನಲ್ಲಿ ಎಷ್ಟು ನಾಣ್ಯ ಇದೆ ಅಂತ ಹೇಳು.
ಫಂಟಾ: ಸರಿ ಹೇಳಿದ್ರೆ ನನ್ಗೆ ಒಂದ್ ನಾಣ್ಯ ಕೊಡ್ತೀಯಾ?
ಕೋಲ್ಯ: ಒಂದಲ್ಲಾ, ಇರೋ ಎರಡು ನಾಣ್ಯವನ್ನೂ ಕೊಡ್ತೀನಿ!
-
ಸಾಲ್ಪನಿಕ
ಸಂಸಾರದ ಎಲ್ಲ ಗುಟ್ಟುಗಳನ್ನೂ ಚೆಸ್ ಹೇಳುತ್ತೆ. ಉದಾ: ರಾಜ ಒಂದೇ ಹೆಜ್ಜೆ ಇಡುತ್ತಾನೆ, ರಾಣಿ ಮನಸ್ಸಿಗೆ ಬಂದಂತೆ ಹೆಜ್ಜೆ ಇಡ್ತಾಳೆ!
ಬಿಗ್ಬಾಸ್ ಮನೆಯಲ್ಲಿ ವಾಸ್ತು ಸರಿಯಾಗಿಲ್ಲದ ಕಾರಣ ಅಲ್ಲಿ ಹೆಚ್ಚು ಜಗಳ ಆಗುತ್ತೆ.
ಮೂಗಿ ಹೆಂಡತಿಗೆ ನೋಬೆಲ್ನ ವಿಶ್ವಶಾಂತಿ ಪುರಸ್ಕಾರ ಕೊಡಬೇಕು!
ಗಣಿತದಲ್ಲಿ ದಡ್ಡ ಎಂದು ಸಾಬೀತು ಮಾಡಲು ಲಾಟರಿ ಒಂದೇ ಸಾಕು.
ಒಮ್ಮೆ ಸೆಣಬಿಗೆ ಎಷ್ಟು ಬರಗಾಲ ಬಂತು ಎಂದರೆ, ನೇಣು ಹಾಕಿಕೊಳ್ಳಲು ಹಗ್ಗ ಕೂಡ ಸಿಗಲಿಲ್ಲ.