ಸಾನಿಯಾ ಮಿರ್ಜಾ ಶಾರ್ಟ್ ಸ್ಕರ್ಟ್ ಹಾಕಿ ಟೆನ್ನಿಸ್ ಆಡಿದ್ದಕ್ಕೆ, ಓದಿನ ಹಕ್ಕಿನ ಬಗ್ಗೆ ಮಲಾಲ ಪ್ರಶ್ನಿಸಿದ್ದಕ್ಕೆ, ತಸ್ಲಿಮಾ ನಸ್ರಿನ್ ಇಸ್ಲಾಂನ ಮಹಿಳೆಗಿರುವ ಕಟ್ಟುಪಾಡುಗಳನ್ನು ಜಗತ್ತಿಗೆ ಹೇಳಿದ್ದಕ್ಕೆ ಅವರ ವಿರುದ್ಧ ಫತ್ವಾ ಹಾಕಲಾಗಿತ್ತು. ಮುಸ್ಲಿ ಹುಡುಗಿಯರು ಕೆಲಸಕ್ಕೆ ಹೋಗಬಹುದು, ಆದರೆ ಕಚೇರಿಯಲ್ಲಿ ಯಾರೊಡನೆಯೂ ಮಾತಾಡಬಾರದು ಎಂಬ ಸರ್ವಾಧಿಕಾರದ ಫತ್ವಾ ಹೊರಡಿಸಿತ್ತು ಶರಿಯತ್. ಆದರೆ ನಮ್ಮ ಸುಪ್ರೀಂ ಕೋರ್ಟ್, ಇಂತಹ ಇಲ್ಲಸಲ್ಲದ ಫತ್ವಾಗಳಿಗೆಲ್ಲ ಬ್ರೇಕ್ ಹಾಕಿದೆ. ಇಸ್ಲಾಂ ಧರ್ಮೀಯರೆಲ್ಲ ನಮ್ಮ ಆಜ್ಞೆಗಳನ್ನು ಪಾಲಿಸಬೇಕು ಎಂಬ ಶರಿಯತ್ಗಳ ಮೂರ್ಖತನವನ್ನು ಸುಪ್ರೀಂ ಕೋರ್ಟ್ ಅಲ್ಲಗಳೆದಿದೆ. ತಮ್ಮ ಬಳಿ ಸಮಸ್ಯೆಗೆ ಪರಿಹಾರ ಕೇಳಿದವರಿಗೆ ಮಾತ್ರ ದರಿಯಾಗಳು ಸಲಹೆ ನೀಡಬಹುದು ಎಂದು ಆದೇಶಿಸಿದೆ-
ನೌಕರರಿಗೂ ಸಂಹಿತೆ
ಕಳೆದ ವರ್ಷದ ಸಪ್ಟೆಂಬರ್ನಲ್ಲಿ ನಮ್ಮ ಸರ್ಕಾರ ಕೇವಲ ಶಾಲಾ ಕಾಲೇಜುಗಳಿಗಷ್ಟೇ ಅಲ್ಲದೆ ಸರ್ಕಾರಿ ಕಚೇರಿಯ ಸಿಬ್ಬಂದಿಗೂ ವಸ್ತ್ರ ಸಂಹಿತೆಯನ್ನು ಜಾರಿ ಮಾಡಿದೆ. ಸರ್ಕಾರಿ ನೌಕರರು ಕೆಲಸಕ ್ಕೆ ಹೇಗೆ ಬೇಕೋ ಹಾಗೆ ಬರುವಂತಿಲ್ಲ. ಪುರುಷರು ಫಾರ್ಮಲ್ಸ್ ಹಾಕಬೇಕು, ಟೀ ಶರ್ಟ್ ಹಾಕುವಂತಿಲ್ಲ. ಜೊತೆಗೆ ಮಹಿಳೆಯರು ಸೀರೆ ಮತ್ತು ಚೂಡಿದಾರ್ನಲ್ಲಿ ಮಾತ್ರವೇ ಕಚೇರಿಗೆ ಬರಬೇಕು ಎಂದಿದೆ. ಸಭ್ಯ ವಾತಾವರಣ ಸೃಷ್ಟಿಗೆ ಈ ನಿಯಮಗಳು ಅಷ್ಟೇ. ಈ ವಸ್ತ್ರ ಸಂಹಿತೆ ಜಾರಿಗೆ ಯಾವ ಸರ್ಕಾರಿ ಉದ್ಯೋಗಿಯಿಂದಲೂ ವಿರೋಧ ಬಂದಿಲ್ಲ. ಕಾರಣ ಇಷ್ಟೇ, ಸರಿಯಾದ ನಿಯಮಗಳಿಗೆ ಯಾರೂ ವಿರೋಧಿಸುವುದಿಲ್ಲ.