ಕೆ.ಎಲ್. ಬಾಬು, ಬಿರೂರು
ಮನೆ ಮಾಲೀಕರಿಗೂ, ಬಾಡಿಗೆದಾರರಿಗೂ ಯಾವಾಗಲೂ ಕಿರಿಕಿರಿಗೆ ಕಾರಣವೇನು?
ಬಾಡಿಗೆದಾರನಿಗೆ ತನಗಿಂತ ಬಾಡಿಗೆದಾರನೇ ಸಂತೋಷವಾಗಿದ್ದಾನೆ ಅಂತ ಅಸೂಯೆ!
ಎಂ.ಬಿ. ಕೃಷ್ಣಮೂರ್ತಿ, ಚಾಮರಾಜನಗರ
ರಾಜಕೀಯಕ್ಕೂ, ಕುದುರೆ ವ್ಯಾಪಾರಕ್ಕೂ ಅದೇನು ಸಂಬಂಧ?
ರಾಜಕಾರಣಿಗಳೆಲ್ಲ 'ರೇಸ್‌ಕೋರ್ಸ್' ಅನ್ನೂ ಮಾಡಿರ್ತಾರಲ್ಲ ಹಾಗಾಗಿ ಎರಡೂ ಬಹಳ ಕ್ಲೋಸ್!
ಹರಳಹಳ್ಳಿ ಪುಟ್ಟರಾಜು, ಪಾಂಡವಪುರ
ಒಳ್ಳೆಯವರೇ ಹೆಚ್ಚಾಗಿ ಏಕೆ ಮೋಸ ಹೋಗುತ್ತಾರೆ?
ಅವರಿಗೆ ಎಲ್ಲರೂ ಒಳ್ಳೆಯವರಾಗೇ ಕಾಣ್ತಾರೆ!
ಶ್ರೀಕಾಂತ ಮುದಗಲ್ಲ, ಇಳಕಲ್ಲ
ಬೆಕ್ಕು ಕಣ್ಣು ಮುಚ್ಚಿ ಹಾಲು ಕುಡಿಯುತ್ತದೆ ಏಕೆ?
ಕೆಲವರ ಅಡುಗೆ ಮನೆ ಅಷ್ಟು ಗಲೀಜಾಗಿರುತ್ತದೆ!
ಎಂ.ಬಿ. ಪರಶಿವಮೂರ್ತಿ, ಬೆಂಗಳೂರು
ಗಂಡನ ಜೇಬಿನಿಂದ ಹೆಂಡತಿ ಹಣ ಕದ್ದರೆ ತಪ್ಪೋ ಸರಿಯೋ?
ಗಂಡನದೂ ಕದ್ದ ಹಣವೇ ಆದರೆ ತಪ್ಪೇನಿಲ್ಲ!
ಆರ್.ಸಿ. ಪರಶುರಾಮ್, ಶಿಕಾರಿಪುರ.
ಅನುಭವಕ್ಕೂ ಅನುಭಾವಕ್ಕೂ ವ್ಯತ್ಯಾಸವೇನು?
- ಅನುಭವ ಮನುಷ್ಯನದು, ಅನುಭಾವ ದೇವರದ್ದು!
- ಎಸ್.ವಿ. ಪದ್ಮನಾಭ