ಕಾರ್ತಿಕ್ ಫ್ರಂ ಚಿತ್ರದುರ್ಗ!

ದಿನದಲ್ಲಿ ಒಂದಾದರೂ ಹೊಸ ಕೀಟ, ಪ್ರಾಣಿ-ಪಕ್ಷಿ ಗುರುತಿಸಿ, ಕ್ಯಾಮೆರಾದಲ್ಲಿ ಕಾಪಿಟ್ಟುಕೊಂಡರೆ ಮಾತ್ರ ಕಾರ್ತಿಕ್‌ಗೆ ನೆಮ್ಮದಿ. ಈ ನಿರಂತರ ಪ್ರಕ್ರಿಯೆ ಪ್ರಾರಂಭವಾಗಿ ಇನ್ನೂ ಆರು ವರ್ಷ ನೆಟ್ಟಗೆ ಕಳೆದಿಲ್ಲ. ಚಿತ್ರದುರ್ಗದ ಪರಿಸರದಲ್ಲಿ 200ಕ್ಕೂ ಹೆಚ್ಚು ವೈವಿಧ್ಯದ ಪಕ್ಷಿಗಳು, ಹಾವುಗಳು, ಕ್ರಿಮಿ ಕೀಟಗಳನ್ನು ಈಗಾಗಲೇ ಗುರುತಿಸುರುವ ಈ ಹುಡುಗ, ಕ್ಯಾಮೆರಾದ ಕಣ್ಣುಗಳಿಂದ ನಿಸರ್ಗದ ಆಲ್ಬಂ ತಯಾರಿಸಿದ್ದಾರೆ.
ಅಲೆಮಾರಿತನದಲ್ಲೇ ಹೆಚ್ಚು ಆಸಕ್ತಿ. ಪಿಯುಸಿಯನ್ನು ಅರ್ಧಕ್ಕೇ ನಿಲ್ಲಿಸಿ, ಹತ್ತಾರು ಉದ್ಯೋಗದ ರುಚಿ ಕಂಡು, ಕೊನೆಗೆ ಡೆಸ್ಕ್‌ಟಾಪ್ ಪಬ್ಲಿಷಿಂಗ್‌ನಲ್ಲಿ ಡಿಪ್ಲೋಮಾ ಮುಗಿಸಿ, ಈಗ ದುರ್ಗದಲ್ಲಿ ವಿನಾಯಕ 'ಡಿಜಿಟಲ್ ಪ್ಲಾನೆಟ್' ಎಂಬ ಡಿಜಿಟಲ್ ವರ್ಕ್‌ಶಾಪ್ ತೆರೆದಿದ್ದಾರೆ. ಇವರಿಗೆ ದುರ್ಗದ ವನ್ಯಜೀವಿಗಳ ಮೇಲೆ ಸದಾ ಕಣ್ಣು. ಅವುಗಳ ಚಲನವಲನ- ಕಂಡುಬರುವ ತಾಣಗಳು ಬಲು ಇಷ್ಟ. ಚಿತ್ರದುರ್ಗದಲ್ಲಿ ಅದೇ ಕೋಟೆ, ಕಲ್ಲು ಮಣ್ಣು ಬಿಟ್ಟು ಮತ್ತೇನಿದೆ? ಅಂತ ರಾಗ ಎಳೆಯುವ ಬಹುತೇಕ ಪ್ರವಾಸಿಗರಿಗೆ ಸೂಕ್ತ ಉತ್ತರ ಕೊಡುತ್ತಿದ್ದಾರೆ. ಸಾಮಾಜಿಕ, ಸಾಂಸ್ಕೃತಿಕ ಚಟುವಟಿಕೆಗಳ ಪಟ್ಟಿಯಲ್ಲೀಗ ದುರ್ಗದ ಪರಿಸರದ ವನ್ಯಜೀವಿಗಳ ಛಾಯಾಚಿತ್ರ ಪ್ರದರ್ಶನವನ್ನೂ ಸೇರಿಸಿಕೊಂಡಿದ್ದಾರೆ! ನಟ ಮತ್ತು ಪರಿಸರ ಪ್ರೇಮಿ ಸುರೇಶ್ ಹೆಬ್ಳೀಕರ್, ಕಾರ್ತಿಕ್ ಅವರ ವಿಶಿಷ್ಟ ಕೆಲಸವನ್ನು ಮೆಚ್ಚಿಕೊಂಡಿದ್ದಾರೆ. ಕೋಟೆ ನಾಡಿನ ಈ ವನ್ಯಜೀವಿ ಚಿತ್ರಗ್ರಾಹಕನಿಗೆ ನಿಮ್ಮದೊಂದು ಅಭಿನಂದನೆ ಸಲ್ಲಲಿ. ಮೊ. 9986818001.
ಸರ್ಕಾರ ಇಲ್ಲಿರುವ ಪರಿಸರ, ವನ್ಯಜೀವಿ ಸಂಪತ್ತನ್ನು ಪರಿಗಣಿಸಿ ಚಿತ್ರದುರ್ಗವನ್ನು ಪ್ರಾಣಿ- ಪಕ್ಷಿಧಾಮವೆಂದು ಘೋಷಿಸಿ, ಇಲ್ಲಿನ ಕಾಡು, ಪ್ರಾಣಿ- ಪಕ್ಷಿಗಳನ್ನು ಸಂರಕ್ಷಿಸಿಬೇಕು. ಹೀಗೆ ಮಾಡಿದರೆ ಐತಿಹಾಸಿಕ ಕೋಟೆ, ಚಂದ್ರವಳ್ಳಿಗೆ ಹೆಸರಾದ ಚಿತ್ರದುರ್ಗ ಇನ್ನು ಮುಂದೆ ವನ್ಯಜೀವಿಗಳಿಂದಲೂ ಹೆಸರಾಗಿ, ಮತ್ತಷ್ಟು ಪ್ರವಾಸಿಗರನ್ನು ಸೆಳೆಯಲಿದೆ.
- ಕಾರ್ತಿಕ್
ಸ್ವರೂಪಾನಂದ ಎಂ. ಕೊಟ್ಟೂರ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.


