ಯಾರು ಕಾರಣ?

Updated on: 

ಹೆಂಡ್ತಿ: ರೀ... ನನ್ನ ಹೊಟ್ಟೆ ಸೈಜ್ ದೊಡ್ಡದಾಗ್ತಿದೆ. ನಾನು ಗರ್ಭಿಣಿಯಾಗಿದ್ದೀನಾ ಅಂತನಿಸ್ತಿದೆ.
ಗಂಡ: (ಕೋಪದಿಂದ) ಹ್ಞೂಂ... ಇದಕ್ಕೆ ಕಾರಣ ಯಾರು ಅಂತ ನನಗೆ ಗೊತ್ತು.
ಹೆಂಡ್ತಿ: ಇದೇನ್ರೀ ಹೀಗಂತೀರಿ? ನಾ ಗರ್ಭಿಣಿಯಾಗೋಕೆ ನೀವಲ್ಲದೆ ಇನ್ನ್ಯಾರು ಕಾರಣ ಆಗೋಕೆ ಸಾಧ್ಯ?
ಗಂಡ: ನಿಂಗೆ ಹೊಟ್ಟೆ ಬರೋಕೆ ಕಾರಣ ನಾನಲ್ಲ... ಇದಕ್ಕೆಲ್ಲ ಮ್ಯಾಕ್ ಡೊನಾಲ್ಡ್ಸ್, ಪಿಜ್ಜಾ, ಡೊಮಿನೋ, ಸಬ್ ವೇ. ಇವ್ರೇ ಕಾರಣ.
=

ಇದೊಳ್ಳೆ ಜೋಕು
ಬಾಸ್ ಸೆಕ್ರೆಟರಿಗೆ ಎಸ್ಸೆಮ್ಮೆಸ್ ಮಾಡ್ತಾನೆ: 'ತುಂಬ ಬೋರಾಗ್ತಿದೆ. ಒಂದಿಷ್ಟು ಜೋಕ್ಸ್ ಕಳಿಸು'.
ಸೆಕ್ರೆಟರಿ ಉತ್ತರ: 'ಮೊದಲು ಸಂಬಳ ಜಾಸ್ತಿ ಮಾಡಿ ಸರ್.'
ಬಾಸ್: ಹ್ಹಹ್ಹಹ್ಹ, ಚೆನ್ನಾಗಿದೆ ಚೆನ್ನಾಗಿದೆ. ಇದೇ ಥರದ ಇನ್ನೊಂದಿಷ್ಟು ಜೋಕ್ಸ್ ಕಳ್ಸು ಬೇಗ.
=
ಗಿಫ್ಟೇ ಕೊಡ್ಬೇಕು!
ಹೆಂಡ್ತಿ: ರೀ... ವ್ಯಾಲೆಂಟೈನ್ಸ್ ಡೇಗೆ ನಿಮ್ಗೇನು ಗಿಫ್ಟ್ ಬೇಕು ಹೇಳಿ?
ಗಂಡ: ಏನೂ ಬೇಡ. ನೀನು ನನ್ನನ್ನ ಯಾವಾಗ್ಲೂ ಪ್ರೀತಿ ಗೌರವದಿಂದ ನೋಡ್ಕೊಂಡ್ರೆ ನಂಗಷ್ಟೇ ಸಾಕು ಕಣೆ.
ಹೆಂಡ್ತಿ: ಓಹೋ... ಹೋಗ್ರಿ ರೀ.. ಅದೆಲ್ಲ ಆಗಲ್ಲ... ನಾನು ಗಿಫ್ಟೇ ಕೊಡಬೇಕು.
=
ಅದೇ ಹಲ್ಲು!
ಜಿಪುಣ: ಗುರೂ... ಒಂದು ಬಾಚಣಿಗೆ ಕೊಡಪ್ಪಾ. ನನ್ನ ಬಾಚಣಿಗೆಯ ಒಂದು ಹಲ್ಲು ಬಿದ್ದುಹೋಯ್ತು.
ಅಂಗಡಿಯವನು: ಏನ್ ಸಾರ್. ಬಾಚಣಿಗೆಯ ಒಂದು ಹಲ್ಲು ಬಿದ್ದು ಹೋದ್ರೆ ಏನಂತೆ. ಅದಕ್ಕೋಸ್ಕರ ಹೊಸ ಬಾಚಣಿಗೆ ತಗೊಳ್ತಿದ್ದೀರಲ್ಲ.
ಜಿಪುಣ: ಏನಪ್ಪಾ ತಮಾಷೆ ಮಾಡ್ತೀಯಾ? ನಂಗೆ ಅಷ್ಟೂ ಬುದ್ಧಿ ಇಲ್ಲ ಅಂದ್ಕೊಂಡಿದೀಯ? ಇವತ್ತು ಬಿದ್ದಿದ್ದು ಬಾಚಣಿಗೆಯ ಕೊನೆಯ ಹಲ್ಲು ಮಾರಾಯಾ.
=
ಕುಡಿದು ಟೈಟಾದವರ ಕಾಮನ್ ಡೈಲಾಗ್ಸ್
    ಗುರೂ... ನೀ ನನ್ ಅಣ್ಣ ಇದ್ಹ್ಂಗೆ ಮಗಾ...
= ಗಾಡಿ ನಾನ್ ಓಡಿಸ್ತೀನಿ... ಓಕೇನಾ?
= ಇವತ್ಯಾಕೋ ಎಷ್ಟ್ ಕುಡಿದ್ರೂ... ಏರ್ತಾನೇ ಇಲ್ಲ ಗುರೂ.
= ನಾನು ಕುಡಿದು ಮಾತಾಡ್ತಾ ಇದೀನಿ ಅಂತ ನೆಗ್ಲೆಕ್ಟ್ ಮಾಡಬೇಡಪ್ಪಾ...
    ಶಿಷ್ಯಾ.... ಲಾಸ್ಟ್ ಇನ್ನೊಂದೇ ಒಂದ್ ಪೆಗ್ ತಗೊಂಡ್ ಬಿಡೋಣ... ನಂಗೋಸ್ಕರ ಪ್ಲೀಸ್...
    ಮಗಾ... ಏನ್ ಬೇಕು ಹೇಳು... ನಿಂಗೋಸ್ಕರ ನನ್ ಪ್ರಾಣ ಬೇಕಾದ್ರೂ ಕೊಟ್ಬಿಡ್ತೀನಿ.
    ಲೇ... ನಾ ಎಣ್ಣೆ ಹೊಡೆದಷ್ಟು ನೀ ನೀರ್ ಕುಡಿದಿಲ್ಲ... ಸುಮ್ನಿದ್ ಬಿಡು (ಅಸ್ಲೀ ಡೈಲಾಗ್ ಬೇರೇನೇ ಇದೆ ಬಿಡಿ).
    ಇದೇ ಲಾಸ್ಟ್ ಟೈಮು ಗುರೂ.. ನಾಳೆಯಿಂದ ಗುಂಡಿಗೆ ಗುಡ್ ಬೈ.. ಜಿಮ್ಗೆ ಸೇರ್ತಿದೀನಿ ಮಗಾ.
=
ಹಾರುವ ಹಕ್ಕಿ
ಮೇಷ್ಟ್ರು: ಅತಿ ವೇಗವಾಗಿ ಹಾರುವ ಹಕ್ಕಿ ಯಾವುದು?
ಹುಡುಗ: ಆನೆ  ಸಾರ್..
ಮೇಷ್ಟ್ರು: ಲೇ ದಡ್ಡಾ... ಮನೇಲಿ ಯಾರೂ ಓದಿಸಲ್ವಾ ನಿಂಗೆ? ಏನ್ ಮಾಡ್ತಾರೆ ನಿಮ್ ಅಪ್ಪ?
ಹುಡುಗ: ನಮ್ಮಪ್ಪ ವೀರಪ್ಪನ್ ಗ್ಯಾಂಗಲ್ಲಿ ಶೂಟರ್ ಆಗಿದಾರೆ ಸಾರ್.
ಮೇಷ್ಟ್ರು: ಓಹ್ ಹೌದಾ? ಮೊದಲೇ ಹೇಳೋದಲ್ವಾ? ಎಷ್ಟು ಕರೆಕ್ಟಾಗಿ ಉತ್ತರ ಕೊಟ್ಟಿದೀಯ, ಗುಡ್.. ಕೂತ್ಕೊ. ಮಕ್ಕಳೇ... ಎಲ್ರೂ ಬರೆದುಕೊಳ್ಳಿ... ಅತಿ ವೇಗವಾಗಿ ಹಾರೋ ಹಕ್ಕಿ.. ಆನೆ.
=
ಪರೀಕ್ಷೆಗೆ ಮುನ್ನ
ಅಪ್ಪ: ಈ ಸಲನೂ ನೀನು ಪರೀಕ್ಷೇಲಿ ಫೇಲ್ ಆದ್ರೆ ನನ್ನನ್ನ ಅಪ್ಪ ಅಂತ ಕರೀಬೇಡ. ನಿನ್ ಬಾಯಿಂದ ಅಪ್ಪಾ ಅಂತ ಕರೆಸ್ಕೊಳೋಕೆ ಅಸಹ್ಯ ಆಗತ್ತೆ ನಂಗೆ.
ರಿಸಲ್ಟ್ ಬಂದ ದಿನ ಅಪ್ಪ: ಏನಾಯ್ತು ರಿಸಲ್ಟು?
ಮಗ: ಛೇ... ನನ್ ರಿಸಲ್ಟ್ ಕತೆ ಬಿಡು... ಅನ್ಯಾಯವಾಗಿ ನೀನು ಅಪ್ಪನ ಸ್ಥಾನ ಕಳ್ಕೊಂಡ್ ಬಿಟ್ಯಲ್ಲ ಮಚ್ಚಾ...
ಬುಕ್ಪೋಸ್ಟ್
ಸಾಲ್ಪನಿಕ
    ಪ್ರಪಂಚವನ್ನ ಬದಲಾಯಿಸೋ ಗುರಿ ಹಾಗೂ ಆಸೆ ಇದ್ರೆ ಮದುವೆಯಾಗೋ ಮೊದಲೇ ಬದಲಿಸಿಬಿಡಿ. ಮದುವೆಯಾದ ಮೇಲೆ ಜಗತ್ತನ್ನ ಬದಲಾಯಿಸೋದಿರಲಿ, ಟೀವಿ ಚಾನೆಲ್ಲನ್ನೂ ಬದಲಾಯಿಸೋಕಾಗಲ್ಲ.
    ವ್ಯಾಲೆಂಟೈನ್ಸ್ ಡೇ ದಿನ 'ಅಯ್ಯೋ ನಂಗೆ ವ್ಯಾಲೆಂಟೈನ್ ಇಲ್ಲ' ಅಂತ ಅಳೋವ್ರು 'ಏಡ್ಸ್ ಡೇ'ಯಂದು 'ಅಯ್ಯೋ... ನಂಗೆ ಏಡ್ಸ್ ಇಲ್ಲ' ಅಂತ್ಯಾಕೆ ಅಳೋಲ್ಲ?
    ಜಗತ್ತಿನಲ್ಲಿ ಕೆಲವರು ಅದೆಷ್ಟು ಬಡವರಿರ್ತಾರೆ ಅಂದ್ರೆ... ಅವರ ಬಳಿ ದುಡ್ಡೊಂದನ್ನು ಬಿಟ್ಟು ಬೇರೇನೂ ಇರುವುದಿಲ್ಲ!
    ಗೆಳೆಯರನ್ನು ಎಂದಿಗೂ ಒಂಟಿಯಾಗಿರಲು ಬಿಡಕೂಡದು. ಜೊತೆಗೇ ಇದ್ದು ಅವರನ್ನು ಸದಾ ಪೀಡಿಸುತ್ತಲೇ ಇರಬೇಕು.
    ಲೂಸ್ಮೋಷನ್ನನ್ನು ಸ್ಲೋ ಮೋಷನ್ನಲ್ಲಿ ಮಾಡುವುದು ಅಸಾಧ್ಯ- ಇದು ನ್ಯೂಟನ್ ನಿಯಮವಲ್ಲ. ಪ್ರಕೃತಿಯ ನಿಯಮ.
    ಕೆಲವರು ಕುಡಿತವನ್ನು ಚಟವಾಗಿಸಿಕೊಂಡಿರೋದಿಲ್ಲ. ಅವರು ವರ್ಷದಲ್ಲಿ ಎರಡೇ ದಿನ ಕುಡಿಯೋದು. ತಮ್ಮ ಹುಟ್ಟುಹಬ್ಬದ ದಿನ ಹಾಗೂ ಹುಟ್ಟುಹಬ್ಬ ಇಲ್ಲದ ದಿನ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com