ಆಸ್ತಿ ತೊಳೆಯೋರು...

Updated on: 

ಕೊನೆಯುಸಿರು ಎಳೆಯುತ್ತಿರೋ ಜಿಪುಣನ ಸುತ್ತ ಅವನ ಕುಟುಂಬದವರು ದುಃಖತಪ್ತರಾಗಿ ಕೂತಿದ್ದಾರೆ.
ಜಿಪುಣ ದೀರ್ಘ ಉಸಿರೆಳೆದುಕೊಂಡು ಮೆಲ್ಲಗೆ ಮಾತನಾಡುತ್ತಾನೆ.
'ಲೇ ಇವ್ಳೇ.. ಇದೀಯಾ?'
ಹೆಂಡ್ತಿ: ಹ್ಞೂಂ ಕಣ್ರೀ... ಇಲ್ಲೇ ನಿಮ್ ಜೊತೇನೇ ಇದ್ದೀನಿ. ನೀವು ವಿಶ್ರಾಂತಿ ತಗೊಳ್ಳಿ.
ಜಿಪುಣ: ಮುನ್ನಾ, ಚೋಟು, ಪಿಂಕಿ, ಗುಡ್ಡಿ ಎಲ್ಲಾ ಎಲ್ಲಿದಾರೆ?
ಸುತ್ತುವರಿದಿದ್ದ ಮಕ್ಕಳೆಲ್ಲರೂ ಅಪ್ಪನ ಕಣ್ಣೆದುರು ಬಂದು ನಿಂತು, 'ಅಪ್ಪಾ ನಾವೆಲ್ಲ ಇಲ್ಲೇ ಇದೀವಿ' ಅಂತ ಕೈ ಹಿಡಿದುಕೊಂಡರು.
ಜಿಪುಣ: ಎಲ್ಲಾ ಇಲ್ಲೇ ಇದೀರಾ ಅಂದ್ಮೇಲೆ ಹಾಲ್‌ನಲ್ಲಿ ಫ್ಯಾನ್ ಯಾಕ್ರೋ ಹಾಕಿಟ್ಟು ಬಂದಿದೀರಾ? ನಾ ಮಾಡಿರೋ ಆಸ್ತಿ ತೊಳೆಯೋಕೆ ಅಂತಾನೇ ಹುಟ್ಟಿದೀರ ಎಲ್ರೂ.

ಶ್ರದ್ಧಾಂಜಲಿ ಜಾಹೀರಾತು
ಕಂಜೂಸ್ ಕರಿಯಪ್ಪನ ತಾತ ತೀರಿಕೊಂಡಿರ್ತಾರೆ. ಫೋಟೋ ಹಾಗೂ ಶ್ರದ್ಧಾಂಜಲಿ ಸುದ್ದಿ ಹಾಕಿಸೋಕೆ ಅಂತ ಕರಿಯಪ್ಪ ಪತ್ರಿಕೆ ಆಫೀಸೊಂದಕ್ಕೆ ಹೋಗ್ತಾನೆ.
'ನಮ್ ತಾತ ಸತ್ತೋಗಿದಾರೆ. ಶ್ರದ್ಧಾಂಜಲಿ ಜಾಹೀರಾತು ಹಾಕ್ಸೋಕೆ ಎಷ್ಟು ಚಾರ್ಜ್ ಮಾಡ್ತೀರಿ?'
ಗುಮಾಸ್ತ: ಪ್ರತಿ ಪದಕ್ಕೆ ಐವತ್ತು ರುಪಾಯಿ ಸರ್.
ಕರಿಯಪ್ಪ: ತುಂಬಾ ದುಬಾರಿ ಆಯ್ತು. ಸರಿ ಒಂದ್ ಕೆಲ್ಸ ಮಾಡಿ, 'ಕರಿಯಪ್ಪನ ತಾತ ನಿಧನ' ಇಷ್ಟು ಪ್ರಕಟಿಸಿ ಸಾಕು.
ಗುಮಾಸ್ತ: ಸಾರ್ ಮಿನಿಮಮ್ ಆರು ಪದ ಕೊಡಲೇಬೇಕು. ಅದಕ್ಕಿಂತ ಕಮ್ಮಿ ತಗೊಳೋದಿಲ್ಲ.
ಕರಿಯಪ್ಪ: ಓಹೋ ಹಾಗೋ? (ಸ್ವಲ್ಪ ಹೊತ್ತು ಯೋಚಿಸಿ) ಸರಿ ಬರ್ಕೊಳ್ಳಿ...
'ಕರಿಯಪ್ಪನ ತಾತ ನಿಧನ .. ಮಾರುತಿ ಕಾರು ಮಾರಾಟಕ್ಕಿದೆ' ಅಂತ ಪ್ರಕಟಿಸಿ ಸಾಕು.

ವೇಸ್ಟ್ ಆಗುತ್ತೆ!
ಒಬ್ಬ ಜಿಪುಣ. ಹದಿನಾಲ್ಕು ಫ್ಲೋರಿನ ಅಪಾರ್ಟ್‌ಮೆಂಟಿನ ಎಂಟನೇ ಫ್ಲೋರಲ್ಲಿ ಅವನ ಮನೆ. ಒಂದಿನ ಟೆರೇಸ್ ಮೇಲೆ ವ್ಯಾಯಾಮ ಮಾಡ್ತಿದ್ದ ಅವನು ಆಕಸ್ಮಿಕವಾಗಿ 14ನೇ ಮಹಡಿಯಿಂದ ಬಿದ್ದುಬಿಡ್ತಾನೆ. ಎಂಟನೇ ಮಹಡಿಯ ಮೂಲಕ ಹಾದು ಬೀಳುತ್ತಿರುವಾಗ ಹೆಂಡ್ತಿ ತಿಂಡಿ ಮಾಡ್ತಿರೋದು ಕಾಣಿಸುತ್ತೆ. ಬೀಳ್ತಾ ಬೀಳ್ತಾನೇ ಕೂಗಿ ಹೇಳ್ತಾನೆ, 'ಲೇ.... ನನ್ ಪಾಲಿನ ದೋಸೆ ಹುಯ್‌ಬೇಡ... ಸುಮ್ನೆ ವೇಸ್ಟ್ ಆಗುತ್ತೆ'.

--
ಸಾಲ್‌ಪನಿಕ

    ಯಾಕ್ರೀ ಪದೇಪದೆ ಮಾಡಿದ್ದೇ ತಪ್ಪು ಮಾಡ್ತಿರ್ತೀರಾ? ಹೊಸ ತಪ್ಪುಗಳನ್ನ ಮಾಡೋಕೆ ಟ್ರೈ ಮಾಡೋಕಾಗಲ್ವಾ?
    ಸಾಧನೆ ಅಂದ್ರೇನು? ಸಾಧನೆ ಅಂದ್ರೆ ಜನ ನಮ್ಮನ್ನು ಫೇಸ್‌ಬುಕ್‌ನಲ್ಲಿ ಹುಡುಕೋ ಬದಲು ಗೂಗಲ್ಲಲ್ಲಿ ಹುಡುಕುವಂತೆ ಬೆಳೆಯುವುದು!
    ಅರ್ಥ ಆಗದಿರೋ ಒಂದು ವಿಷಯ: ಟೂತ್‌ಪೇಸ್ಟ್ ಜಾಹೀರಾತಿನಲ್ಲಿ ಬರುವ ದಂತವೈದ್ಯ ಹೆಗಲ ಮೇಲೆ ಸ್ಟೆತೋಸ್ಕೋಪ್ ಹಾಕ್ಕೊಂಡಿರ್ತಾನೆ. ಯಾಕೆ?
    ಪರರಾಜ್ಯಕ್ಕೆ ಹೋದಾಗ ಕನ್ನಡದಲ್ಲಿ ಮಾತಾಡಿದರೆ ನೀವು ಕರ್ನಾಟಕದವರಾ? ಅಂತ ಕೇಳೋ ಜನ ಇಂಗ್ಲೀಷಲ್ಲಿ ಮಾತಾಡಿದರೆ ನೀವು ಇಂಗ್ಲೆಂಡಿನವರಾ ಅಂತ್ಯಾಕೆ ಕೇಳೊಲ್ಲ?
    ಕಂಪ್ಯೂಟರ್ ನಿಮ್ಮನ್ನು ಚೆಸ್ ಆಟದಲ್ಲಿ ಸೋಲಿಸಬಹುದು. ಆದರೆ ಕುಸ್ತಿಯಲ್ಲಿ ಸೋಲಿಸೋದು ಅಸಾಧ್ಯ.
    ಶಾಲೆಯಲ್ಲಿ ನಿತ್ಯ ಪ್ರಾರ್ಥನೆ ಇರೋದ್ಯಾಕೆ? ಟೆಸ್ಟು ರಿಸಲ್ಟು ಪನಿಷ್ಮೆಂಟುಗಳು ಕೂಡ ಇರೋದಕ್ಕೆ.
    ಮಗುವಿನ ಬರ್ತ್ ಸರ್ಟಿಫಿಕೇಟನ್ನು ಕೆಲವು ಅಪ್ಪಂದಿರು ಕರೆಯೋದು ಹೀಗೆ: ಕಾಂಡೋಮ್ ಕಂಪನಿಯ ಕ್ಷಮಾಪಣಾ ಪತ್ರ!
    ನಿತ್ಯ ಆಫೀಸಿಗೆ ನಿಗದಿತ ಸಮಯಕ್ಕಿಂತ ಮೊದಲು ಬರೋದು ಒಳ್ಳೇದಲ್ಲ. ಯಾಕಂದ್ರೆ ನಿಮ್ಮನ್ನು ಹೊಗಳೋಕೂ ಆಫೀಸಿಗೆ ಅಷ್ಟು ಬೇಗ ಯಾರೂ ಬಂದಿರೋದಿಲ್ಲ.

ಕೋಟ್ & ಬೋಲ್ಡ್

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

X
Kannada Prabha
www.kannadaprabha.com