ಕಂಜೂಸ್ ದೇಹ

Updated on: 

ಒಂದ್ಸಲ ಕಂಜೂಸ್ ಕಮಂಗಿ ಮೇಲೆ ದೆವ್ವ ಅಟಕಾಯಿಸ್ಕೊಳ್ತಂತೆ.
ಮೂರು ದಿನದ ನಂತರ ಆ ದೆವ್ವವೇ ಒಬ್ಬ ಮಂತ್ರವಾದಿಯ ಬಳಿ ಹೋಗಿ ಕೇಳಿಕೊಳ್ತಂತೆ; 'ಮಂತ್ರವಾದಿಗಳೇ... ಹೆಂಗಾದ್ರೂ ಮಾಡಿ ಈ ಕಂಜೂಸ್ ದೇಹದಿಂದ ನನ್ನನ್ನ ಆಚೆ ಕರೆಸ್ಕೊಳ್ಳಿ. ಇಲ್ಲಾಂದ್ರೆ ನಾನು ಹಸಿವಿಂದಲೇ ಸತ್ತು ಹೋಗೋದು ಖಚಿತ'!
=
ರೈಲಿನಲ್ಲಿ ನೂತನ ದಂಪತಿಗಳು ಹನಿಮೂನಿಗೆ  ಹೋಗ್ತಾ ಇರ್ತಾರೆ.
ಹೆಂಡತಿ: ಅಯ್ಯೋ ಯಾಕೋ ತುಂಬ ತಲೆ ನೋಯ್ತಿದೆ.
ಗಂಡ:  (ಆಕೆಯನ್ನು ಪ್ರೀತಿಯಿಂದ ತಬ್ಬಿಕೊಂಡು ಹಣೆಯ ಮೇಲೊಂದು ಮುತ್ತಿಕ್ಕಿ) ಈಗ ಹೇಗನಿಸ್ತಿದೆ?
ಹೆಂಡತಿ: ಅರೇ... ತಲೆನೋವು ಮಾಯ!
ಸ್ವಲ್ಪ ಹೊತ್ತಿನ ನಂತರ..
ಹೆಂಡತಿ: ಯಾಕೋ ಕೂತು ಕೂತು ಭುಜ ನೋಯ್ತಾ ಇದೆ.
ಗಂಡ: (ಆಕೆಯನ್ನು ಮತ್ತೊಮ್ಮೆ ಪ್ರೀತಿಯಿಂದ ತಬ್ಕೊಂಡು ಭುಜಕ್ಕೆ ಮುತ್ತಿಟ್ಟು..) ಈಗ ಹೇಗನ್ನಿಸ್ತಿದೆ ಚಿನ್ನಾ?
ಹೆಂಡತಿ: ಆಹಾ... ಆರಾಮ್ ಅನಿಸ್ತಾ ಇದೆ.!
ಮತ್ತೊಂದು ಸ್ವಲ್ಪ ಹೊತ್ತಿನ ನಂತರ...
ಹೆಂಡತಿ: ಅಯ್ಯೋ.. ಒಂದೇ ಸಮನೆ ಕಾಲಿಳಿಸಿ ಕೂತ್ಕೊಂಡು ಮಂಡಿ ನೋಯ್ತಾ ಇದೆ.
ಗಂಡ: (ಆಕೆಯ  ಕಾಲು ಹಿಡ್ಕೊಂಡು ರೊಮ್ಯಾಂಟಿಕ್ಕಾಗಿ ಮಂಡಿಯ ಮೇಲೊಂದು ಮುತ್ತಿಟ್ಟು) ಈಗ ಹೇಗನ್ನಿಸ್ತಿದೆ ಡಿಯರ್?
ಹೆಂಡತಿ: ಅಬ್ಬಾ... ನಿಮ್ಮ ಮುತ್ತಿನಲ್ಲಿ ಅದೇನೋ ಜಾದೂ ಇದೆ ಕಣ್ರೀ... ಕಾಲುನೋವು ಹೊರಟೇ ಹೋಯ್ತು.!
ಎದುರಲ್ಲೇ ಕೂತು ಇದನ್ನೆಲ್ಲಾ ಗಮನಿಸುತ್ತಿದ್ದ ವೃದ್ಧ ಪ್ರಯಾಣಿಕನೊಬ್ಬ ತನ್ನ ಸೀಟಿನಿಂದ ಎದ್ದು ಬಂದು ಆ 'ಮುತ್ತಪ್ಪ'ನನ್ನು ಕೇಳಿದ..
'ಮರೀ... ನಿನ್‌ಹತ್ರ ಮೂಲವ್ಯಾಧಿಗೂ ಏನಾದ್ರೂ ಔಷಧಿ ಇದ್ಯೇನಪ್ಪಾ..? ಈ ಪೈಲ್ಸ್ ಪ್ರಾಬ್ಲಂ ಹೋಗಿಸ್ತೀಯಾ ಪ್ಲೀಸ್?'

ಯಾಕೆ ನಗ್ತಿದ್ದೀರಾ?
ಟೈಟಾನಿಕ್ ಹಡಗು ಮುಳುಗ್ತಾ ಇತ್ತು. ಹಡಗಿನ ಜೊತೆ ನೂರಾರು ಜನ ಮುಳುಗ್ತಾ ಇದ್ರು. ಅವರಲ್ಲೊಬ್ಬ ಜಿಪುಣ ಇದ್ದ. ಎಲ್ಲರೂ ಗಾಬರಿ ದುಃಖದಲ್ಲಿದ್ರೆ, ಈತ ಮಾತ್ರ ತುಂಬಾ ಖುಷಿಯಿಂದ ನಗ್ತಾ ಇದ್ದ. ಜೊತೆಯಲ್ಲಿದ್ದವನು ಕೇಳ್ತಾನೆ, 'ಯಾಕೆ ಸಾರ್ ನಗ್ತಾ ಇದ್ದೀರಾ?'
'ಸದ್ಯ ನಾನು ರಿಟರ್ನ್ ಟಿಕೆಟ್ ತಗೊಂಡಿಲ್ಲ.. ತಗೊಂಡಿದ್ರೆ ಎಷ್ಟು ದುಡ್ಡು ಲಾಸ್ ಆಗ್ತಿತ್ತು. ಇದು ಖುಷಿ ವಿಷಯ ತಾನೇ?'

ಫಾಲೋ ಮಾಡ್ತಿದ್ದಾರೆ!
ರಜನಿ ಲವ್ವರ್: ನನ್ನನ್ಯಾರೋ ದಿನಾ ಫಾಲೋ ಮಾಡ್ತಿದಾರೆ ಕಣೋ.
ರಜನಿ: ಡೋಂಟ್ ವರಿ... ನಾ ನೋಡ್ಕೋಳ್ತೀನಿ ಬಿಡು.
ಮರುದಿನ...
ರಜನಿ ಲವ್ವರ್: ಚಿನ್ನಾ... ನನ್ ನೆರಳೆಲ್ಲೋ ಹೋಯ್ತು? ಕಾಣಿಸ್ತಾನೇ ಇಲ್ಲ????



ಸಾಲ್ ಪನಿಕ

    ಕಳ್ಳರು ಮಾತ್ರ 'ಜಗತ್ತಿನ ಎಲ್ಲ ಜನರೂ ಶ್ರೀಮಂತರಾಗಲಿ, ಸಮೃದ್ಧರಾಗಿರಲಿ' ಎಂದು ಬಯಸುವವರು.
    ನೂರು ಅತ್ಯದ್ಭುತ ಸುಂದರಿಯರಲ್ಲಿ ಒಬ್ಬರನ್ನು ಆರಿಸಿಕೊಳ್ಳಲು ಬಿಟ್ಟರೆ ಗಂಡಸು ಬೆಸ್ಟ್ ಅನಿಸುವಾಕೆಯನ್ನೇ ಆಯ್ಕೆ ಮಾಡಿಕೊಳ್ಳುತ್ತಾನೆ. ಆದರೆ ಆ ಖುಷಿ  ಮಿಕ್ಕ ತೊಂಬತ್ತೊಂಬತ್ತು ಹುಡುಗಿರನ್ನು ಕಳಕೊಂಡ ದುಃಖಕ್ಕೆ ಸಮವಲ್ಲ.
    ಅಂಡರ್‌ವೇರ್ ಬ್ರಾಂಡ್‌ಗೆ 'ಡಾಲರ್‌' ಅಂತ ಹೆಸರಿರೋದು ಒಳ್ಳೇದಾಯ್ತು. 'ರುಪಾಯಿ' ಬ್ರಾಂಡ್ ಅಂಡರ್ ವೇರ್ ಇದ್ದಿದ್ರೆ ಅದು ಪದೇ ಪದೆ ಬಿದ್ದು ಹೋಗ್ತಿತು.್ತ
    ಆಲ್ಕೋಹಾಲೇ ಹಾಗೆ. ರಾತ್ರಿಯೇನೋ ಖುಷಿ. ಆದರೆ ಬೆಳಗಾದ ಮೇಲಿನ ಅಸಾಧ್ಯ ತಲೆನೋವು. ಹುಡುಗೀರೂ ಕೂಡ ಹಾಗೇನೇ.!!
    ಪೊಂಗಲ್‌ಗೂ ಇಡ್ಲಿಗೂ ಇರುವ ಅತಿ ದೊಡ್ಡ ವ್ಯತ್ಯಾಸವೇನೆಂದರೆ, ಪೊಂಗಲ್‌ಗೆ ರಜೆ ಇರುತ್ತದೆ. ಇಡ್ಲಿಗೆ ರಜೆಯಿಲ್ಲ.
    ಏಪ್ರಿಲ್ ಫಸ್ಟ್ ಹುಟ್ಟಿದ ಹೆಣ್ಣುಮಗುವಿಗೆ ಫೂಲನ್‌ದೇವಿ ಅಂತ ಹೆಸರಿಡಬಹುದಾ?
    ಕಾಲೇಜಿನಲ್ಲಿ ನಮ್ಮದೇ ಕ್ಲಾಸಿನ ಸೆಕ್ಷನ್ನಿನ ಹುಡುಗಿಯ ಮೇಲೆ ಆಕರ್ಷಣೆ ಹುಟ್ಟಿದರೆ ಆಗುವ ಉಪಯೋಗವೇನು? ಶೇಕಡಾ ನೂರು ಹಾಜರಿ. (ಆಕೆಯ ಹಾಜರಿಯೂ ಶೇಕಡಾ ನೂರು ಇದ್ದರೆ ಮಾತ್ರ...!)


ಗುಂಡನ ಪಕ್ಕದಮನೇವ್ರು ಯಾರೋ ಖಾಯಿಲೆಯಿಂದಾಗಿ ಆಸ್ಪತ್ರೆಯಲ್ಲಿ ಸತ್ತು ಹೋಗಿರ್ತಾರೆ.
ಗುಂಡ ಬಂದು ಕೇಳ್ತಾನೆ: ಬಾಡಿ ಬಂತಾ?
ಗುಂಡ ಪ್ರಶ್ನೆ ಕೇಳೋ ಹೊತ್ತಿಗೆ ಸರಿಯಾಗಿ..  ಆ ಕಡೆಯಿಂದ ಆ್ಯಂಬುಲೆನ್ಸ್‌ಬರುತ್ತೆ.
ಗುಂಡ ಖುಷಿಯಿಂದ ಹೇಳ್ತಾನೆ. 'ಅರೆ ನಾನು ಕೇಳೋಕೂ.. ಬಾಡಿ ಬರೋಕೂ.. ಸರೀ ಹೋಯ್ತು! ನೂರ್ ವರ್ಷ ಆಯಸ್ಸು 'ಬಾಡಿ'ಗೆ!!!


ಕೋಟ್  & ಬೋಲ್ಡ್

ಸ್ಟೇಜ್ ಮೇಲೆ ಸೆಕ್ಸಿಯಾಗಿರೋದಕ್ಕೂ, ಬೆಡ್‌ರೂಮಿನಲ್ಲಿ ಸೆಕ್ಸಿಯಾಗಿರೋದಕ್ಕೂ ಇರುವ ದೊಡ ವ್ಯತ್ಯಾಸ ಅದ್ರೆ.. ಸ್ಟೇಜ್ ಮೇಲೆ ಬಟ್ಟೆ ಧರಿಸೋದು ಹಾಗೂ ಪರ್‌ಫಾರ್ಮ್ ಮಾಡೋದು ಕಡ್ಡಾಯ. ಆದರೆ ಬೆಡ್‌ರೂಮಿನಲ್ಲಿ ಬಟ್ಟೆಯ ಅಗತ್ಯವಲ್ಲ, ಪರ್‌ಫಾರ್ಮ್ ಮಾಡೋದೂ ಬೇಕಿಲ್ಲ. ಅಲ್ಲಿರೋದು ಕೇವಲ ಸುಖ.
-ಶಕೀರಾ(ಅಂತರಾಷ್ಟ್ರೀಯ ಪಾಪ್ ಸ್ಟಾರ್)  

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com