ಖುಷಿ

ಗಾಂಧಿಯನ್ನು ನಿಜಕ್ಕೂ ಕೊಂದವರಾರು?

ಗಾಂಧಿಯನ್ನು ನಿಜಕ್ಕೂ ಕೊಂದವರಾರು?
Published On :

ಗಾಂಧಿಯನ್ನು ನಿಜಕ್ಕೂ ಕೊಂದವರಾರು?
ಬೇರೆಯೇ ಚಿತ್ರ!

1. ಗಾಂಧಿಯವರನ್ನು ರಾಜಕೀಯ ನಕಾಶೆಯಿಂದ ಅಳಿಸಿಬಿಡಲು ಹೊರಟವರು ಒಂದಲ್ಲ! ಎರಡು ವಿಭಿನ್ನ ಪಟ್ಟಭದ್ರರ ಗುಂಪುಗಳು, ಸೇನೆ ಎನ್ನಿ, ಕಾರ್ಯಾಚರಣೆಯ ಏಜೆಂಟರು ಎನ್ನಿ, ಇವುಗಳ ಗುರಿ, ಧ್ಯೇಯ, ಬೇರೆಯೇ ಇದ್ದವು. ಆದರೆ ಇಲ್ಲಿ ಗಾಂಧಿಹತ್ಯೆ ಎಂಬ ಏಕಾಂಶದಲ್ಲಿ ಭಿನ್ನತೆ ಇರಲಿಲ್ಲ. ಒಂದರ ನಿಯೋಜಿತ, ನಾಥುರಾಂ ಗೋಡ್ಸೆ. ಇನ್ನೊಂದರ ಮುಖಂಡ ಒಬ್ಬ ಕಾಂಗ್ರೆಸ್ಸಿಗ! 1978ರ ವರೆಗೆ ಅವನು ಜೀವಂತ ಇದ್ದ. ಪುಣೆಯಲ್ಲಿ ಎಲ್ಲರ ಕಂಗಳಿಗೆ ಕಾಣುವಂತೆ. 30ರ ಜನವರಿ 1948ರಂದೇ ಗಾಂಧಿಯವರನ್ನು 'ಮುಗಿಸುವ' ಕಾಯಕದ ಹೊಣೆ ಇಬ್ಬರ ಮೇಲೂ ಇತ್ತು ಎಂಬುದು ಸಾಮಾನ್ಯ ಅಂಶ. ಇದಕ್ಕೆ ಆಧಾರಗಳು ಹೀಗೆ...
2. ಲೋಪ
ಎ) ಮ್ಯಾಜಿಸ್ಟ್ರೇಟರ ನ್ಯಾಯಾಲಯದಲ್ಲಿ ವಿಚಾರಣೆ ಆರಂಭವಾಗುವ ಮುನ್ನ ಸರ್ಕಾರಿ ವಕೀಲರು (Prosecution) ಇಲ್ಲಿ ಸಾಕ್ಷಿದಾರರ ಹೇಳಿಕೆಗಳ ಪ್ರತಿಗಳನ್ನು- ಕೋರ್ಟಿನಲ್ಲಿ ದಾಖಲೆಯಾದವನ್ನುPolice U/S 161. Cr. P.ಈ ಪ್ರಕಾರ ಆರೋಪಿಗಳಿಗೆ accused ಗಳಿಗೆ ಮೊದಲು ಕೊಟ್ಟು, ಅವರೇನು ಹೇಳುತ್ತಾರೋ ಅದನ್ನು 'ಪಾಟೀಸವಾಲು' (Cross examination) ಮಾಡುವಾಗ ದಾಖಲಿಸಿಕೊಳ್ಳುವುದು ವಾಡಿಕೆ. ಕಡ್ಡಾಯ ರೂಢಿ, ಇದು. ಈ ಪ್ರಕೃತ ಗಾಂಧಿ ಹತ್ಯಾ ಪ್ರಕರಣದಲ್ಲಿ, ಇಬ್ಬರು ಮುಖ್ಯ, ಅತಿ ಮುಖ್ಯ- ಸಾಕ್ಷೀದಾರರ, ಹೇಳಿಕೆಗಳನ್ನು ಪೊಲೀಸರು ಆರೋಪಿಗೆ ಕೊಡಲೇ ಇಲ್ಲ! ತಪ್ಪಿಸಿ, ಮುಚ್ಚಿಟ್ಟರು! ಅವರು ಯಾರು?
ಗಾಂಧಿಯವರು ಪ್ರಾರ್ಥನಾ ಸಭೆಯ ವೇದಿಕೆಗೆ ಬರುವಾಗ, ಯಾರ ಭುಜಗಳ ಮೇಲೆ ಎರಡೂ ತೋಳುಗಳನ್ನಿಟ್ಟು ಬರುತ್ತಿದ್ದರೋ ಆ ಹುಡುಗಿಯರು! ತೀರಾ ಸಮೀಪದಲ್ಲಿದ್ದ ಅತೀ ಮುಖ್ಯ ಸಾಕ್ಷಿದಾರರು!
ಬಿ) ಏಕೆ ಈ ವಿರೋಧಾಭಾಸ?
ಪೊಲೀಸರು ಇಲ್ಲಿ ಏನು ತಂತ್ರ ಮಾಡಿದ್ದರು? ತಾವು ದಾಖಲಿಸಿಕೊಂಡಿದ್ದ ಹೇಳಿಕೆಗಳನ್ನು ಒದಗಿಸುವಾಗ, ಆರೋಪಿಗೆ, ಅಲ್ಲಿ ಒಂದು ಮುಖಪತ್ರ Covering letter ಇಟ್ಟಿದ್ದರು. 'ಈ ಸಾಕ್ಷಿದಾರರನ್ನು ವಿಚಾರಣೆಗೆ ಕರೆತಂದು ಹೇಳಿಕೆ, ಪರೀಕ್ಷೆ ನಡೆಸುವ ಉದ್ದೇಶ ನಮಗಿಲ್ಲ. ಆದುದರಿಂದ ಅವರಿಬ್ಬರ ಹೇಳಿಕೆಗಳನ್ನು ನಿಮಗೆ ಕೊಡಲು ಆಗುವುದಿಲ್ಲ. ಅದು ಅನವಶ್ಯಕ' ಎಂದು. ಹಾಗೂ 'ಮುಂದೊಂದು ಸಂಭವನೀಯ ಸಂದರ್ಭದಲ್ಲಿ ಆ ಲಿಖಿತ ಹೇಳಿಕೆಗಳು ಅವಶ್ಯವಾಗುವುದಾದರೆ ಮಾತ್ರ ಆಗಲೂ ಬರೀ ಹೇಳಿಕೆಗಳನ್ನು ಒದಗಿಸಲಾಗುವುದೇ ವಿನಾ ಆ ಸಾಕ್ಷಿದಾರರ ನೇರ ಹಾಜರಾತಿ ಬೇಕಾಗುವುದಿಲ್ಲ' ಅಂತ.
ಮೋಜು!
ಸಿ) ಈಗ ಮೋಜು, ನೋಡಿ! ಸರ್ಕಾರಿವಾದಕ್ಕೆ, ನಿಲುವಿಗೆ, ಸಾಕ್ಷಿ ಆಗಬೇಕಾದವರಲ್ಲಿ ಈ ಹುಡುಗಿಯರಿಬ್ಬರೇ ಅತಿ ಮುಖ್ಯರಾಗಿದ್ದವರು! ಏಕೆ? ಅವರು ಗಾಂಧಿ ಕೊಲೆಯನ್ನು ನೇರ, ತಮ್ಮ ಸ್ವಂತ ಕಂಗಳಿಂದಲೇ ಕಂಡಿದ್ದವರು. ನಾಥೂರಾಂ ಗೋಡ್ಸೆಗೆ ಕೇವಲ ಒಂದೇ ಅಡಿಯಷ್ಟು ದೂರದಲ್ಲಿದ್ದವರು! (ಅವರು ಕುರುಡರಿರಲಿಲ್ಲ. ಮಾದಕ ವಸ್ತು ಸೇವಿಸಿದ್ದವರಲ್ಲ, ಅಮಲಿನಲ್ಲಿ ಇದ್ದವರಲ್ಲ).
ನಾಥೂರಾಂ ಗೋಡ್ಸೆಯು, ಗಾಂಧಿ ಬಳಿ- ತೀರಾ ಹತ್ತಿರ ಹೋಗಿ Point Blank ಎಂಬಷ್ಟು ಹತ್ತಿರಕ್ಕೆ ನಿಂತು ಗುಂಡು ಹಾರಿಸುವಾಗ, ಗಾಂಧಿಯ ಎದೆಯ ಮೇಲೆ ಪಿಸ್ತೂಲನಿಟ್ಟು ಚಾಲಿಸುವಾಗ, ಈ ಹುಡುಗಿಯಲ್ಲೊಬ್ಬಳನ್ನು, ತನ್ನ ಮೊಳಕೈಯಿಂದ elbow ತಳ್ಳಿಕೊಂಡು ಹೋಗಿ, ಗಾಂಧಿಗೆ ಕೇವಲ ಆರು ಆಂಗುಲ- ಅರ್ಧ ಅಡಿ ದೂರದಲ್ಲಿದ್ದವನು. ("Point Blank') ಎಂದರೆ ಎಲ್ಲೋ ದೂರದ ಗುರಿಯಾಗಿರದೆ, ಲಕ್ಷವು ತಪ್ಪದಂತೆ, ನೇರ ಮುಖಾಮುಖಿಯಾಗಿರುವಷ್ಟು ಹತ್ತಿರದ, ಮಿಸುಕಲಾರದ ಗುರಿ.) ಇಟ್ಟ ಗುರಿ ತಪ್ಪುವ ಸಾಧ್ಯವಿಲ್ಲದ ಹತ್ತಿರ ಅದು.
ಹೇಳಿಕೆಗಳು
ಡಿ) ಈಗ ಇಲ್ಲಿ ಅನಿವಾರ್ಯವಾಗಬೇಕಿದ್ದ ಸಾಕ್ಷಿಗಳಾದರೂ ಯಾರು? ಒಬ್ಬಳು ಸರ್ದಾರ ಪಟೇಲರ ಮಗಳು. ಇನ್ನೊಬ್ಬಳು ಗಾಂಧಿ ದತ್ತು ಪುತ್ರಿ. ಇವರಿಬ್ಬರೂ ಇತ್ತ ಹೇಳಿಕೆಗಳು ಆಮೇಲೆ ಪತ್ರಿಕೆಗಳಲ್ಲಿ ಬಂದವು. ಅಲ್ಲೂ ವಿಚಿತ್ರ ನೋಡಿ. ಒಬ್ಬಳೆಂದದ್ದು-
'ಈ ಗೋಡ್ಸೆ ಎಂದು ನೀವು ಕರೆಯುವ ವ್ಯಕ್ತಿ ಗಾಂಧಿಯವರಿಗೆ 'ನಮಸ್ತೆ' ಮಾಡುತ್ತಿದ್ದ. ಅವನ ಎರಡೂ ಕೈಗಳು ಅಂಜಲಿ ಸಂಪುಟಗಳಲ್ಲಿ ಮುದ್ರೆಯಲ್ಲಿರುತ್ತಾ ಕೈ ಮುಗಿಯುತ್ತಿದ್ದಾಗ, ಆತನ ಬಲ ತೋಳು ಸಂದಿನಿಂದ ಖಾದಿ ತುಂಬಿದ್ದ ಬೇರೊಂದು ತೋಳು ಹೊರ ಚಾಚಿ ಬಂದು, ಅವರ ಕೈಲಿ ಆಯುಧದಿಂದ ಮೂರು ಸುತ್ತು ಗುಂಡು ಚಲಾಯಿಸಲ್ಪಟ್ಟಿತು. ಗಾಂಧಿ ಕುಸಿದರು'. ಎರಡೂ ಕೈಗಳು ಗೋಡ್ಸೆಯವು - ಕೈ ಮುಗಿಯುತ್ತಿದ್ದಾಗ, ಪಿಸ್ತೂಲೋ ರಿವಾಲ್ವರೋ ಅವನ ಕೈಲಿರಲು ಸಾಧ್ಯವೇ? ಅವನೇ ಒಂದು ಕೈ ಬಿಡಿಸಿಕೊಂಡು ಪಿಸ್ತೂಲು ತೆಗೆದುದಾಗಿ ಇಲ್ಲಿ ಹೇಳಿಲ್ಲ ಎಂಬುದು ಗಮನೀಯ!

ಇನ್ನೊಬ್ಬಳ ಹೇಳಿಕೆ ಇನ್ನೂ ಹೆಚ್ಚು ಸ್ಪಷ್ಟವಿದೆ:
'ನೀವು ಗೋಡ್ಸೆ ಎನ್ನುವ ಈತ, ಎರಡೂ ಕೈಗಳಿಂದ ಎತ್ತಿ ಕೈ ಮುಗಿಯುತ್ತಿದ್ದ. ಆಗ ಬೇರೊಬ್ಬ, ಎತ್ತರದ, ಖಾದಿಧಾರಿ, ಕುರ್ತಾ, ಪೈಜಾಮಾ ಧರಿಸಿದ್ದವನು- ಗೋಡ್ಸೆಯ ಹಿಂದಿನಿಂದ ಬಂದು, ದಪದಪನೆ ವೇಗದ ಹೆಜ್ಜೆಗಳಲ್ಲಿ ಕಾಲಿಡುತ್ತಾ ಬಂದವನೇ, ನಾಥೂರಾಂನ ಬಲ ತೋಳ ಕೆಳಗಿನಿಂದ ಸಂದಿನಿಂದ- ಗುಂಡು ಹಾರಿಸಿದ'. ಹಾಗಾದರೆ ನೇರ ಗುರಿಯ ಬದಲಿಗೆ ಇದು Oblique ಓರೆಯ ಕೋನದ್ದು!

ಪ್ರಶ್ನೆಗಳು
ಈಗ ಯೋಚಿಸಿ: ಗಾಂಧಿಗೆ ಗುಂಡು ಹಾರಿಸಿದ್ದು ಎತ್ತ ಕಡೆಯಿಂದ?
-ಮೇಲಿನಿಂದ ಅಲ್ಲ!
( Not from above)
- ಹಿಂದಿನಿಂದ ಅಲ್ಲ
(Not from behind)
ತೀರಾ ಬಲಗಡೆಯಿಂದ ಅಲ್ಲ, ತೀರ ಎಡಗಡೆಯಿಂದಲೂ ಅಲ್ಲ (Not from the extreme right or left)
ಲೇಖಕರು: ಡಾ. ಕೆ.ಎಸ್. ನಾರಾಯಣಾಚಾರ್ಯ
ಕೃತಿ: ಗಾಂಧಿಯನ್ನು ನಿಜವಾಗಿ ಕೊಂದವರು ಯಾರು?
ಪ್ರಕಾಶನ: ಸಾಹಿತ್ಯ ಪ್ರಕಾಶನ
ಪುಟ: 152, ಬೆಲೆ: 130 ರುಪಾಯಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.