ಖುಷಿ

ಸಾಲ್‌ಪನಿಕ

Published On :

ಪಿಜ್ಜಾ ಅಂದ್ರೇನು?
    ಪಿಜ್ಜಾ ಅಂದ್ರೆ ನಮ್ ದೇಶದ್ ಪರೋಟಾ. ವಿದೇಶಕ್ಕೆ ಹೋಗಿ ಸ್ಟೈಲ್ ಕಲಿತು, ಮೇಕಪ್ ಮಾಡ್ಕಂಡ್ ಹೆಸ್ರು ಬದಲಾಯಿಸ್ಕೊಂಡಿದೆ ಅಷ್ಟೇ.
    ಟಿವಿ ವಾರ್ತಾಮಾಧ್ಯಮಕ್ಕೂ ಹೆಂಡ್ತಿಗೂ ಇರೋ ಒಂದು ಹೋಲಿಕೆ: ಇಬ್ರಿಗೂ ಒಂದೇ ವಿಷಯವನ್ನು ನೂರು ಸಲ ಹೇಳದೇ ಹೋದ್ರೆ ಸಮಾಧಾನ ಆಗೋದಿಲ್ಲ.
    ಗಂಡನ ಜೀವನದಲ್ಲಿ ಸಿಗುವ ಅತ್ಯಂತ ಅಪರೂಪದ ಅವಕಾಶ: ಎದುರಲ್ಲಿರೋ ಹೆಂಡ್ತಿಯ ಕೆನ್ನೆ ಮೇಲೆ ಸೊಳ್ಳೆ ಕೂತಿರೋದು.
    ಆಗಾಗ ಸಣ್ಣ ನಿದ್ದೆ ಮಾಡುವುದರಿಂದ ಮುಪ್ಪು ಬರದಂತೆ ತಡೆಯಬಹುದು. ಡ್ರೈವಿಂಗ್ ಮಾಡುವಾಗ ಯುವಕರು ಸಣ್ಣ ನಿದ್ದೆ ಮಾಡುವುದರಿಂದಲೂ ಮುಪ್ಪು ಬರುವುದಿಲ್ಲ!
    ಹೆಂಡ್ತೀರಲ್ಲಿ ಹೊಂದಾಣಿಕೆಯ ಗುಣ ಹಾಗೂ ಕ್ಷಮಾಗುಣ ಹೆಚ್ಚು. ಅವರು ತಮ್ಮ ತಪ್ಪಿದ್ದಾಗಲೆಲ್ಲ ಗಂಡಂದಿರನ್ನು ಕ್ಷಮಿಸುತ್ತಾರೆ.
    ಬಾದಾಮಿ ತಿಂದ್ರೆ ಬುದ್ಧಿಶಕ್ತಿ ಹೆಚ್ಚುತ್ತೆ. ಆದರೆ ಮದುವೆ ನಂತರ ಬಾದಾಮಿ ತಿನ್ನೋದನ್ನು ನಿಲ್ಲಿಸಬಹುದು.
    ಕಾಶ್ಮೀರಕ್ಕೂ ಹೆಂಡ್ತಿಗೂ ಇರೋ ಹೋಲಿಕೆ: ಎರಡೂ ಒಂಥರಾ ಪ್ರಾಬ್ಲಮ್ಮೇ. ಆದರೆ ಅಕ್ಕಪಕ್ಕದವರು ಕಣ್‌ಹಾಕಿದ್ರೆ  ಮಾತ್ರ ಯಜಮಾನ್ರಿಗೆ ಕೆಂಡದಂಥ ಕೋಪ ಬರತ್ತೆ.


ಕ್ಯಾಮೆರಾ ಕಾರಣ
ಹುಲಿ ತನ್ನ ಫ್ರೆಂಡ್ ಹುಲಿ ಹತ್ರ ಹೇಳ್ತು: ಈ ಡಿಸ್ಕವರಿ ಚಾನೆಲ್ಲು, ಅನಿಮಲ್ ಪ್ಲಾನೆಟ್ ಚಾನೆಲ್ಲುಗಳ ಬಾಧೆ ಅತಿ ಆಯ್ತು ಮಾರಾಯ...
ಫ್ರೆಂಡ್‌ಹುಲಿ: ಯಾಕ್ ಗುರೂ... ಅಂಥದ್ದೇನಾಯ್ತು? ಅವ್ರೇನ್ ಗನ್ ತಗೊಂಡ್ ಶೂಟ್ ಮಾಡ್ತಾರಾ? ಬರೀ ಕ್ಯಾಮೆರಾದಲ್ಲಿ ಶೂಟ್ ಮಾಡೋದ್ ತಾನೇ?
ಹುಲಿ: ಅಯ್ಯೋ ಹಂಗಲ್ಲ ಮಾರಾಯಾ. ಹಗಲು ರಾತ್ರಿ ಅಂತ ನೋಡದೇ.. ಮೂರ್ ಹೊತ್ತೂ ನಮ್ ಕಡೆಗೆ ಕ್ಯಾಮೆರಾ ಹಿಡಿದಿದ್ರೆ, ನಮ್ಗೆ ಪ್ರೈವೆಸಿ ಹೆಂಗ್ ಸಿಗೋದು?
ಹುಲಿ ಸಂತತಿ ಕಮ್ಮಿ ಆಗ್ತಿದೆ ಅಂತ ಟೀವೀಲಿ ಜಾಹೀರಾತು ತೋರಿಸ್ತಾರೆ. ಜಾಸ್ತಿ ಮಾಡೋಕ್ ಬಿಟ್ರೆ ತಾನೆ ಇವ್ರು?

ಜೀನ್ಸಲ್ಲೇ ಇದೆ...
ಹೆಂಡ್ತಿ: ನನ್ನ ಕೀ ಎಲ್ಲೋ ಮಿಸ್ ಆಗಿದೆ ಕಣ್ರೀ... ಎಷ್ಟ್ ಹುಡುಕಿದ್ರೂ ಸಿಕ್ತಾ ಇಲ್ಲ.
ಗಂಡ: ಅಯ್ಯೋ ಮತ್ತೆ ಕಳ್‌ಕೊಂಡ್ಯಾ? ನಿನ್ ಜೀನ್ಸಲ್ಲೇ ಇದೆ ಅನ್ಸುತ್ತೆ ಕಣೇ...
ಹೆಂಡ್ತಿ: ರೀ ಎಲ್ಲ ವಿಷಯಕ್ಕೂ ನನ್ನ ಫ್ಯಾಮಿಲೀನ ಎಳೀಬೇಡಿ. ನಾನು ಕೀ ಕಳಕೊಂಡ್ರೆ ಅವರ ಬಗ್ಗೆ ಯಾಕೆ ಹೇಳ್ತೀರಿ?
ಗಂಡ: ಅಯ್ಯೋ ನಾ ಹೇಳಿದ್ದು ಜೀನ್ಸ್ ಪ್ಯಾಂಟು ಮಾರಾಯ್ತಿ!

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.