

ಕನ್ನಡದ ಪ್ರಮುಖ ಕಲಾವಿದರಲ್ಲಿ ಡಿ.ಎಸ್. ಚೌಗಲೆ ಪ್ರಮುಖರು. ಚಿಕ್ಕೋಡಿ ಸಮೀಪದ ಬೆಡ್ಕಿಹಾಳ್‌ನ ಇವರ ಪೇಂಟಿಂಗ್‌ಗೆ ಇಂದು ಬಹುಬೇಡಿಕೆ. ಕಲಾವಿದರಲ್ಲದೆ ಸಾಹಿತಿಯೂ ಆಗಿರುವ ಚೌಗಲೆಯವರ ಅಂತರಂಗದಲ್ಲಿ ನಾಟಕಗಾರನೂ ಇದ್ದಾನೆಂಬುದು ಸಮಸ್ತ ಕನ್ನಡಿಗರಿಗೆ ಗೊತ್ತು. ಜಾಗತೀಕರಣದ ಈ ದಿನಗಳಲ್ಲಿ ಗ್ರಾಮೀಣತೆಯನ್ನು ಚಿತ್ರಗಳಲ್ಲಿ ತೆರೆದಿಡುವುದೇ ಇವರ ಕಲೆಯ ಮುಖ್ಯೋದ್ದೇಶ. ಈಗಾ ಗಲೇ ಹತ್ತಾರು ಕಡೆ ಇವರ ಚಿತ್ರಗಳು ಪ್ರದರ್ಶನಗೊಂಡಿವೆ. ಮೇ 20ರಿಂದ 26ರ ವರೆಗೆ ಬೆಂಗಳೂರಿನ ಕುಮಾರಕೃಪಾ ರಸ್ತೆಯಲ್ಲಿರುವ ಚಿತ್ರಕಲಾ ಪರಿಷತ್ತಿನಲ್ಲಿ ಇವರ ಚಿತ್ರಗಳ ಪ್ರದರ್ಶನವಿದೆ. ಕಲಾಭಿಮಾನಿಗಳು ಭೇಟಿ ಕೊಡಬಹುದು.
ಮೇ20ರಿಂದ ಚಿತ್ರಪ್ರದರ್ಶನ