ಪಂಜರ ಮತ್ತು ಹಕ್ಕಿ
1
ಹಕ್ಕಿಗೂ ಹಾರುವ ಹಕ್ಕಿದೆ
ಎಂಬುದ ತಿಳಿದು
ಪಂಜರ ದಿಗಿಲುಗೊಂಡಿದೆ
2
ಪಾಪಿ ಪಂಜರದ ಪರ
ವಕಾಲತ್ತು ವಹಿಸಲು
ನಿಂತಿದೆ
ವಕೀಲರ ಸಾಲು.
ಯಾರೂ ನುಡಿಯುತ್ತಿಲ್ಲ
ಸ್ವರ ಕಳಕೊಂಡ ಹಕ್ಕಿಯ ಸಲುವಾಗಿ
ಒಂದು ಸಾಲು!
3
ಹಕ್ಕಿಯ ಸ್ವಾತಂತ್ರ್ಯದ ಸಾವು
ಸ್ರವಿಸಿದ ನೋವಿನ ತಾಪಕ್ಕೆ
ಪಂಜರದ ಸರಳು ಕರಗಿ
ಕೊಳೆಯಾಗಿ ಹರಿದಿದೆ!
= ಎಚ್.ಕೆ. ಶರತ್
hksharu@gmail.com