ಹೃದಯದ ಚಿಹ್ನೆಯಲ್ಲಿ ಪ್ರೇಮಿಗಳ ಹೆಸರುಗಳು ಕೆತ್ತಿರುವುದನ್ನು, ಬಂಡೆಮೇಲೆ ಬರೆದಿರುವುದನ್ನು ನೋಡಿದಾಗೆಲ್ಲ ಮೂಡುವ ಒಂದೇ ಒಂದು ಪ್ರಶ್ನೆ : ಪ್ರೇಮಿಗಳು ತಾವು ಹೋಗುವೆಡೆಗೆಲ್ಲ ಚಾಕು, ಚಾಕ್ಪೀಸು ಯಾಕೆ ತಗೊಂಡ್ ಹೋಗ್ತಾರೆ?
ಎಲ್ಲದಕ್ಕೂ ಆಧಾರ್ ಕಾರ್ಡ್ ಒಂದಿದ್ರೆ ಸಾಕು ಅನ್ನೋವ್ರಿಗೊಂದು ಪ್ರಶ್ನೆ, ಮೊಬೈಲಿಗೆ ಮೆಮೋರಿ ಕಾರ್ಡು ಸಿಮ್ಕಾರ್ಡು ಬೇಡ್ವೇ. ಆಧಾರ್ ಕಾರ್ಡೇ ಸಾಕೆ?
ಇಬ್ಬರು ವ್ಯಕ್ತಿಗಳು ಸಂಜ್ಞೆ ಮೂಲಕ ಮಾತನಾಡುತ್ತಿದ್ದಾರೆ ಅಂದ್ರೆ ಅವರು ಮೂಕರೇ ಆಗಿರಬೇಕಿಲ್ಲ. ಬಾಯಲ್ಲಿ ಗುಟ್ಕಾ ಇಟ್ಕೊಂಡವರೂ ಕೂಡ ಹಾಗೆಯೇ ಮಾತನಾಡೋದು.
ನಿಮಗೆ ವಯಸ್ಸಾಗಿದೆ ಅಂತ ಗೊತ್ತಾಗೋದು ಯಾವಾಗ? ಎಲ್ಲರೂ 'ಎಷ್ಟು ಯಂಗ್ ಆಗಿ ಕಾಣಿಸ್ತೀರಾ' ಎಂದು ಹೊಗಳೋಕೆ ಶುರು ಮಾಡಿದಾಗ!
ಹೈಹೀಲ್ಡ್ ಚಪ್ಪಲಿಗಳನ್ನು ಕಂಡು ಹಿಡಿದದ್ದು ತನ್ನ ಹುಡುಗನಿಂದ ಹಣೆಮೇಲೆ ಸದಾ ಕಿಸ್ ಮಾಡಿಸಿಕೊಂಡು ಬೇಸತ್ತ ಕುಳ್ಳಿ ಹುಡುಗಿಯೊಬ್ಬಳಂತೆ!