ಗ್ಯಾಜೆಟ್ ವ್ಯಸನಿಗಳಾಗುತ್ತಿದ್ದಾರೆ ಶಾಲಾ ಮಕ್ಕಳು! ಪಾಲಕರೇ ಎಚ್ಚರ!

ತರಗತಿಯಲ್ಲಿ ವಿಹಾನ್  ಶಿಕ್ಷಕಿ ಆತನಲ್ಲಿ ಬದಲಾವಣೆಯನ್ನು ಗುರುತಿಸಿದ್ದರು. ಅವನು ತರಗತಿಯಲ್ಲಿ ಆತಂಕದಿಂದಿರುತ್ತಿದ್ದ. ಪ್ಯಾನಿಕ್ ಅಟ್ಯಾಕ್ ಗೆ ಒಳಗಾಗುತ್ತಿದ್ದ. ಇದೇ ಸಮಯದಲ್ಲಿ ಆತನ ತಾಯಿಯೂ ವಿಹಾನ್ ನಲ್ಲಿ ಒಂದು ಬದಲಾವಣೆಯನ್ನು ಗುರುತಿಸಿದ್ದರು.
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ

ಬೆಂಗಳೂರು: ಇಷ್ಟುದಿನದ ಆನ್ ಲೈನ್ ತರಗತಿಗಳಿಗೆ ಬ್ರೇಕ್ ಬಿದ್ದಿದೆ. ಶಾಲೆಗಳು ಮತ್ತೆ ಆರಂಭವಾಗಿದೆ. ಮಕ್ಕಳು ಬ್ಯಾಗುಗಳನ್ನು ನೇತುಹಾಕಿಕೊಂಡು ತರಗತಿಗಳತ್ತ ಮುಖ ಮಾಡಿದ್ದಾರೆ. ಅವರಲ್ಲಿ ವಿಹಾನ್ ಕೂಡಾ ಒಬ್ಬ. 

ತರಗತಿಯಲ್ಲಿ ವಿಹಾನ್  ಶಿಕ್ಷಕಿ ಆತನಲ್ಲಿ ಬದಲಾವಣೆಯನ್ನು ಗುರುತಿಸಿದ್ದರು. ಅವನು ತರಗತಿಯಲ್ಲಿ ಆತಂಕದಿಂದಿರುತ್ತಿದ್ದ. ಪ್ಯಾನಿಕ್ ಅಟ್ಯಾಕ್ ಗೆ ಒಳಗಾಗುತ್ತಿದ್ದ. ಇದೇ ಸಮಯದಲ್ಲಿ ಆತನ ತಾಯಿಯೂ ವಿಹಾನ್ ನಲ್ಲಿ ಒಂದು ಬದಲಾವಣೆಯನ್ನು ಗುರುತಿಸಿದ್ದರು. ಶಾಲೆಯಿಂದ ಮನೆಗೆ ಬರುತ್ತಿದ್ದಂತೆಯೇ ವಿಹಾನ್ ಮೊಬೈಲ್ ಫೋನ್ ಹಿಡಿದುಕೊಳ್ಳಲು ಮುಗಿಬೀಳುತ್ತಿದ್ದ. ಅವನ ಕೈಗೆ ಮೊಬೈಲು ಸಿಕ್ಕ ನಂತರವೇ ಅವನಿಗೆ ಸಮಾಧಾನವಾಗುತ್ತಿತ್ತು. 

ಹೀಗೆ ಮುಂದುವರಿದು ಆತ ರಾತ್ರಿ ನಿದ್ರಾಹೀನತೆಯಿಂದ ಬಳಲತೊಡಗಿದ್ದ. ನಿದ್ದೆಯನ್ನೇ ಚೆನ್ನಾಗಿ ಮಾಡುತ್ತಿರಲಿಲ್ಲ. ವಿಹಾನ್ ನಲ್ಲಿ ಉಂಟಾದ ಬದಲಾವಣೆಗಳಿಗೆ ಕಂಗಾಲಾದ ಹೆತ್ತವರು ಅವನನ್ನು ಮನೋವೈದ್ಯರ ಬಳಿ ಕರೆದೊಯ್ದರು.

ವಿಹಾನ್ ನನ್ನು ತಪಾಸಣೆಗೊಳಪಡಿಸಿದ ವೈದ್ಯರಿಗೆ ಆತನ ಸಮಸ್ಯೆ ತಿಳಿದುಬಿಟ್ಟಿತ್ತು. ಸ್ಮಾರ್ಟ್ ಫೋನಿನಲ್ಲಿಯೇ ಇಷ್ಟು ದಿನ ತರಗತಿಯ ಎಲ್ಲಾ ಕಾರ್ಯಗಳು ನಡೆಯುತ್ತಿದ್ದುದರಿಂದ ಅವನು ಸ್ಮಾರ್ಟ್ ಫೋನಿಗೆ ಅಡಿಕ್ಟ್ ಆಗಿಬಿಟ್ಟಿದ್ದ. ಈಗ ತರಗತಿಗಳು ಎಂದಿನಂತೆ ಪ್ರಾರಂಭವಾಗಿದ್ದರಿಂದ ಸ್ಮಾರ್ಟ್ ಫೋನ್ ನಿಂದ ಬಹುಕಾಲ ದೂರ ಇರುವುದು ಅವನಿಗೆ ಕಷ್ಟವಾಗಿಬಿಟ್ಟಿತ್ತು. 

ಮಾದಕ ವ್ಯಸನಿಗಳು ಮಾದಕ ವಸ್ತುಗಳನ್ನು ಸೇವಿಸದೇ ಸ್ವಲ್ಪ ಕಾಲ ದೂರವಿದ್ದಲ್ಲಿ ಅವರ ಮನಸ್ಸು ಮತ್ತು ದೇಹ ಒದ್ದಾಡಿಹೋಗುತ್ತದೆ. ಮಾದಕವಸ್ತು ಸೇವಿಸದೇ ಇದ್ದರೆ ಏನೋ ಆಗಿಬಿಡುತ್ತದೆ ಎನ್ನುವಶ್ಟು ಪರದಾಡುತ್ತಾರೆ. ಇದನ್ನು ವಿತ್ ಡ್ರಾವಲ್ ಸಿಂಪ್ಟಂ(withdrawal symptom) ಎಂದು ಕರೆಯಲಾಗುತ್ತದೆ. ಈ ಸಂದರ್ಭದಲ್ಲಿ ಅಡಿಕ್ಟ್ ಆದವರ ವ್ಯಕ್ತಿತ್ವ ಮತ್ತು ದೇಹದಲ್ಲಿ ಹಲವು ಬದಲಾವಣೆಗಳು ಕಂಡುಬರುತ್ತವೆ. ವಿಹಾನ್ ಗೆ ಆಗಿದ್ದು ಕೂಡಾ ಇದೇ. ಸ್ಮಾರ್ಟ್ ಫೋನ್ ಆಗಲಿ, ಮಾದಕ ವಸ್ತುವೇ ಆಗಲಿ ವ್ಯಸನ ವ್ಯಸನವೇ.

ವಿಹಾನ್ ಪರಿಸ್ಥಿತಿಯನ್ನು ಅವಲೋಕಿಸಿದ ಮನೋವೈದ್ಯರು ಆತನ ಸ್ಕ್ರೀನ್ ಟೈಮ್ ಅಂದರೆ ಡಿಜಿಟಲ್ ಪರದೆ ಮುಂದೆ ಕಳೆಯುವ ಸಮಯವನ್ನು ನಿಯಂತ್ರಿಸುವಂತೆ ಸಹೆ ನೀಡಿದ್ದರು. ಒಂದೇ ಬಾರಿ ಮೊಬೈಲ್ ಕಿತ್ತುಕೊಳ್ಳುವುದಕ್ಕಿಂತ ನಿಧಾನಕ್ಕೆ, ಹಂತ ಹಂತವಾಗಿ ಮೊಬೈಲ್ ಅನ್ನು ಬಳಸುವುದರ ಮೇಲೆ ನಿಯಂತ್ರಣ ಹೇರುವುದು ಸೂಕ್ತ ಎನ್ನುವುದನ್ನು ಪಾಲಕರಿಗೆ ಮನದಟ್ಟು ಮಾಡಲಾಯಿತು. ಈ ಪರಿಸ್ಥಿತಿ ವಿಹಾನ್ ಒಬ್ಬನದೇ ಅಲ್ಲ ಅನೇಕ ಮಕ್ಕಳು ಈ ತೊಂದರೆಯನ್ನು ಅನುಭವಿಸುತ್ತಿದ್ದಾರೆ. 

ಬಹುತೇಕ ಮಕ್ಕಳು ಆಫ್ ಲೈನ್ ಮತ್ತು ಆನ್ ಲೈನ್ ತರಗತಿಗಳಲ್ಲಿ ಆನ್ ಲೈನ್ ತರಗತಿಯತ್ತಲೇ ಒಲವು ತೋರಿಸುತ್ತಿದ್ದಾರೆ ಎಂದು ಮಕ್ಕಳ ವೈದ್ಯೆ ಡಾ.ಪ್ರೀತಿ ಗಲಗಲಿ ಹೇಳುತ್ತಾರೆ. ಕಾಲವೇ ಇದಕ್ಕೆ ತಕ್ಕ ಉತ್ತರ. ಸರಿಯಾದ ಮಾರ್ಗ ಅನುಸರಿಸಿದರೆ ಪಾಲಕರು ತಮ್ಮ ಮಕ್ಕಳ ಸ್ಮಾರ್ಟ್ ವ್ಯಸನವನ್ನು ದೂರಮಾಡಬಹುದು. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com