ಬುಕ್ಕಿಂಗ್ಗೆ 'ಆಧಾರ್'
ರೇಲ್ವೆ ಸೇವೆ ಮತ್ತಷ್ಟು ಸುಲಭಗೊಳಿಸಲು 'ಆಧಾರ್' ಸಂಖ್ಯೆ ಬಳಕೆ ಆರಂಭವಾಗಲಿದೆ. ಆಧಾರ್ ಸಂಖ್ಯೆಯ ಆಧಾರದ ಮೇಲೆ ಟಿಕೆಟ್ ಬುಕಿಂಗ್, ಟಿಕೆಟ್ನ ಅಸಲಿ ವಾರಸುದಾರರ ಪತ್ತೆಗಾಗಿ ಜಿಪಿಎಸ್ ವ್ಯವಸ್ಥೆ ಇರುವ ಕೈಯಲ್ಲಿ ಹಿಡಿದುಕೊಂಡು ಓಡಾಡಬಹುದಾದ ಉಪಕರಣಗಳು ರೇಲ್ವೆ ಸಿಬ್ಬಂದಿಗೆ ನೀಡಲಾಗುತ್ತದೆ.
ದುರುಪಯೋಗ ತಡೆಗೆ ಕ್ರಮ: ಪ್ರಯಾಣದ ವೇಳೆ ಮುಂಗಡ ಕಾಯ್ದಿರಿಸಿದ ಟಿಕೆಟ್ನೊಂದಿಗೆ ಗುರುತಿನ ಚೀಟಿ ಕಡ್ಡಾಯ. ಟಿಕೆಟ್ಗಳ ಅಕ್ರಮದಲ್ಲಿ ತೊಡಗಿದ್ದ 1800ಕ್ಕೂ ಹೆಚ್ಚು ಮಧ್ಯವರ್ತಿಗಳು, ದಲ್ಲಾಳಿಗಳ ವಿರುದ್ದ ಕಾನೂನು ಕ್ರಮ ಜರುಗಿಸಲಾಗಿದೆ. ತತ್ಕಾಲ್ ಟಿಕೆಟ್ ಬುಕಿಂಗ್ ಒಂದು ದಿನಕ್ಕೆ ಇಳಿಸಲಾಗಿದೆ. ಕೌಂಟರ್ಗಳಲ್ಲಿ ಬುಕಿಂಗ್ ವೇಳೆ ಗುರುತಿನ ಚೀಟಿ ಕಡ್ಡಾಯ. ಹಾಗೂ ಅನ್ಲೈನ್ನಲ್ಲಿ ಒಂದು ದಿನಕ್ಕೆ ಒಂದು ರೈಲಿಗೆ, ಒಬ್ಬರಿಗೆ ಒಂದೇ ಟಿಕೆಟ್ ಬುಕಿಂಗ್ ಮಾಡಬಹುದು. ಬೆ.8 ರಿಂದ ರಾ. 10 ರವರೆಗೂ ಏಜೆಂಟ್ಗಳು ಇಂಟರ್ನೆಟ್ನಲ್ಲಿ ಟಿಕೆಟ್ ಬುಕಿಂಗ್ಗೆ ಅವಕಾಶ ನಿರಾಕರಣೆ. ಮೊಬೈಲ್ ಮೂಲಕ ಇ-ಟಿಕೆಟ್ ಮಾಡಿಕೊಳ್ಳುವ ವ್ಯವಸ್ಥೆ. ರೇಲ್ವೆ ವಿಚಾರಣೆಗಾಗಿ '139' ಸಂಖ್ಯೆ ಬಳಕೆಯಲ್ಲಿದ್ದು ಮುಂದಿನ ದಿನಗಳಲ್ಲಿ 139 ಸಂಖ್ಯೆಯ ಮೂಲಕ 'ಎಸ್ಎಂಎಸ್' ಮೂಲಕ ಅಪ್ಡೇಟ್, 'ರಿಸರ್ವೇಶನ್ ಸ್ಟೇಟಸ್' ಆರಂಭವಾಗಲಿದೆ. ರೈಲು ಎಲ್ಲಿದೆ ತಡವಾಗುತ್ತದೆಯೋ, ಸರಿಯಾದ ಸಮಯಕ್ಕೆ ಬರುತ್ತದೆ ಎಂದು ತಿಳಿದುಕೊಳ್ಳವ ಆರ್ಟಿಐಎಸ್ 'ಖಚಿತ ಸಮಯ ಮಾಹಿತಿ ವ್ಯವಸ್ಥೆ'ಯನ್ನು ಹೆಚ್ಚಿನ ರೈಲುಗಳಿಗೆ ವಿಸ್ತರಿಸಲಾಗುತ್ತದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

