ಭಾರತದಲ್ಲಿ ಅಮೆರಿಕ ರಾಯಭಾರಿಯಾಗಿ ರಿಚರ್ಡ್ ವರ್ಮಾ ನಾಳೆ ಪ್ರಮಾಣ ವಚನ

ನ್ಯಾನ್ಸಿ ಪವಲ್‌ರ ಅಧಿಕಾರವಧಿ ಪೂರ್ಣವಾದ ಹಿನ್ನೆಲೆಯಲ್ಲಿ ಆ ಸ್ಥಾನಕ್ಕೆ ರಿಚ್ಚರ್ಡ್ ವರ್ಮಾರನ್ನು ಆಯ್ಕೆ...
ರಿಚ್ಚರ್ಡ್ ವರ್ಮಾ
ರಿಚ್ಚರ್ಡ್ ವರ್ಮಾ
Updated on

ವಾಷಿಂಗ್‌ಟನ್: ಭಾರತ ಅಮೆರಿಕ ರಾಯಭಾರಿಯಾಗಿ ರಿಚರ್ಡ್ ವರ್ಮಾ ಆಯ್ಕೆಗೆ ಅಮೆರಿಕ ಸೆನೆಟ್ ಒಪ್ಪಿಗೆ ಸೂಚಿಸಿದೆ. ಈ ಹಿನ್ನೆಲೆಯಲ್ಲಿ ರಿಚ್ಚರ್ಡ್ ಅಮೆರಿಕದಲ್ಲಿ ನಾಳೆ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಭಾರತ ಮೂಲದ ಪ್ರಥಮ ಅಮೆರಿಕ ರಾಯಭಾರಿ ವ್ಯಕ್ತಿ ಎಂಬ ಹೆಗ್ಗಳಿಕೆಗೆ ರಿಚ್ಚರ್ಡ್ ಪಾತ್ರರಾಗಿದ್ದಾರೆ.

ಅಮೆರಿಕದ ರಾಯಭಾರಿ ಕಚೇರಿ, ರಿಚ್ಚರ್ಡ್ ವರ್ಮಾನನ್ನು ಭಾರತದ ರಾಯಭಾರಿಯಾಗಿ ಆಯ್ಕೆ ಮಾಡಿದ್ದು, ಕಳೆದ ವಾರ ಈ ಕುರಿತು ಅಮೆರಿಕ ಸೆನೆಟ್ ಸಭೆ ಒಪ್ಪಿಗೆ ಸೂಚಿಸಿತ್ತು.

46 ವರ್ಷದ ರಿಚ್ಚರ್ಡ್ ವರ್ಮಾ ನಾಳೆ ಅಧಿಕಾರ ಸ್ವೀಕರಿಸಲಿದ್ದಾರೆ. ಅಧಿಕಾರ ಸ್ವೀಕಾರ ಕಾರ್ಯಕ್ರಮದಲ್ಲಿ ಅಮೆರಿಕದ ವಿದೇಶಾಂಗ ಕಾರ್ಯದರ್ಶಿ ಜಾನ್‌ಗೆರ್ರಿ ಸೇರಿದಂತೆ ಹಲವು ಗಣ್ಯರು ಭಾಗವಹಿಸಲಿದ್ದಾರೆ.

ಜನವರಿ 26ರ ಭಾರತ ಗಣರಾಜ್ಯೋತ್ಸವ ಕಾರ್ಯಕ್ರಮದ ಅಂಗವಾಗಿ ಅಮೆರಿಕ ಅಧ್ಯಕ್ಷ ಬರಾಕ್ ಒಬಾಮ ಭಾರತಕ್ಕೆ ಆಗಮಿಸುವ ಮುನ್ನವೇ, ರಿಚ್ಚರ್ಡ್ ವರ್ಮಾ ಭಾರತದ ಅಮೆರಿಕ ರಾಯಭಾರಿ ಕಚೇರಿಯಲ್ಲಿ ಪದಗ್ರಹಣ ಮಾಡುವ ಸಾಧ್ಯತೆಗಳಿವೆ.

ಪ್ರಸ್ತುತ ದೆಹಲಿಯಲ್ಲಿ ಕ್ಯಾಥಲಿನ್ ಸ್ಟೀಫನ್ ಉಪರಾಯಭಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದು, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಲಿದ್ದಾರೆ. ಭಾರತ ಅಮೆರಿಕ ರಾಯಭಾರಿಯಾಗಿ ಸೇವೆ ಸಲ್ಲಿಸುತ್ತಿರುವ ನ್ಯಾನ್ಸಿ ಪವಲ್‌ರ ಅಧಿಕಾರವಧಿ ಪೂರ್ಣವಾದ ಹಿನ್ನೆಲೆಯಲ್ಲಿ ಆ ಸ್ಥಾನಕ್ಕೆ ರಿಚ್ಚರ್ಡ್ ವರ್ಮಾರನ್ನು ಆಯ್ಕೆ ಮಾಡಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com