

ಸೌದಿ: ಸೌದಿ ಅರೇಬಿಯಾದಲ್ಲಿ ಮಹಿಳೆಯರಿಗೆ ಇದೀಗ ಮತ್ತೊಂದು ನಿಷೇಧ ಹೇರಲಾಗಿದೆ.
ಇಸ್ಲಾಂ ಸಂಪ್ರದಾಯಬದ್ಧ ರಾಷ್ಟ್ರವಾದ ಸೌದಿಯಲ್ಲಿ ಈಗಾಗಲೇ ಮಹಿಳೆಯರು ಬುರ್ಖಾ ಧರಿಸುವುದನ್ನು ಕಡ್ಡಾಯಗೊಳಿಸಿರುವ ಸೌದಿ ಅರೇಬಿಯಾ, ಇದೀಗ ಮಹಿಳೆಯರ ಮಾದಕ ಕಣ್ಣು(tempting eyes)ಗಳಿಗೂ ನಿಷೇಧ ಹೇರಿದೆ. ಗಂಡಸರನ್ನು ಕೆಣುಕುವ ಮಾದಕ ಕಣ್ಣುಗಳನ್ನು ಹೊಂದಿರುವ ಮಹಿಳೆಯರು ತಮ್ಮ ಕಣ್ಣುಗಳನ್ನು ಮುಚ್ಚಿಕೊಳ್ಳಲು ಮುಖಕ್ಕೆ ಪರದೆ ಹಾರಿಕೊಳ್ಳಬೇಕು ಎಂಬ ಹೊಸ ಕಾನೂನು ಜಾರಿಗೊಳಿಸಿದೆ.
ಮಹಿಳೆಯರ ಮೇಲೆ ಹೇರಲಾಗಿರುವ ಈ ಹೊಸ ಕಾನೂನಿನ ಬಗ್ಗೆ ಸಾಮಾಜಿಕ ಜಾಲ ತಾಣಗಳಲ್ಲಿ ಬಾರಿ ವಿರೋಧ ವ್ಯಕ್ತವಾಗಿದೆ.
ಈ ಬಗ್ಗೆ ಪ್ರತಿಕ್ರಿಯಿಸಿರುವ ಸೌದಿಯ ಪ್ರಮೋಶನ್ ಆಫ್ ವರ್ಚ್ಯೂ ಅಂಡ್ ಪ್ರಿವೆಂಶನ್ ಆಫ್ ವೈಸ್ ಸಮಿತಿಯ ವಕ್ತಾರ ಶೇಖ್ ಮೊತ್ಲಾಬ್, ಮಹಿಳೆಯರು ಮುಖ ಮುಚ್ಚಿಕೊಳ್ಳುವಂತೆ ಒತ್ತಡ ಹೇರುವ ಹಕ್ಕು ನಮಗಿದೆ ಎಂದು ಹೇಳಿದ್ದಾರೆ.