ನಟ ಅಹ್ವಾನ್ ಕುಮಾರ್ ವಿರುದ್ಧ ರೇಪ್ ಕೇಸ್ ದಾಖಲು

ನಟ ಅಹ್ವಾನ್ ಕುಮಾರ್ ವಿರುದ್ಧ ಆತನ ಗೆಳತಿ ಮುಂಬೈನ...
ನಟ ಅಹ್ವಾನ್ ಕುಮಾರ್
ನಟ ಅಹ್ವಾನ್ ಕುಮಾರ್

ಹಿಂದಿ ಧಾರಾವಾಹಿ ನಟ ಅಹ್ವಾನ್ ಕುಮಾರ್ ವಿರುದ್ಧ ಆತನ ಗೆಳತಿ ಮುಂಬೈನ ಒಶಿವರ್ ಪೊಲೀಸ್ ಠಾಣೆಯಲ್ಲಿ ರೇಪ್ ಕೇಸ್ ದಾಖಲಿಸಿದ್ದಾರೆ.

ತಾನೊಬ್ಬ ನಟಿಯಾಗಿದ್ದು, 2011ರಲ್ಲಿ ಟಿವಿಯೊಂದರ ಧಾರಾವಾಹಿ ಚಿತ್ರೀಕರಣದ ವೇಳೆ ಭೇಟಿಯಾಗಿದ್ದೆವು ನಂತರ ಇದು ಪ್ರೇಮಕ್ಕೆ ತಿರುಗಿ ಅಹ್ವಾನ್ ಕುಮಾರ್ ಮತ್ತು ನಾನು ಲಿವಿಂಗ್ ಟುಗೆದರ್ ಸಂಬಂಧದಲ್ಲಿದ್ದೆವು, 2012ರ ಫೆ.12 ರಂದು ತಾನು ಗರ್ಭವತಿ ಎಂದು ತಿಳಿದಾಗ ಅಹ್ವಾನ್ ಬಲವಂತವಾಗಿ ಕರೆದುಕೊಂಡು ಹೋಗಿ ಅಂಧೇರಿ ನರ್ಸಿಂಗ್ ಹೋಂನಲ್ಲಿ ಗರ್ಭಪಾತ ಮಾಡಿಸಿದ್ದನು. ಅಲ್ಲದೇ ಇನ್ನು ಮುಂದೆ ನನಗೂ ನಿನಗೂ ಯಾವುದೇ ಸಂಬಂಧವಿಲ್ಲ ನಿನ್ನ ಭವಿಷ್ಯದ ಬಗ್ಗೆ ಚಿಂತಿಸು ಎಂದು ಹೇಳಿದ್ದನು ಎಂದು ತನ್ನ ದೂರಿನಲ್ಲಿ ಹೇಳಿದ್ದಾಳೆ.

ಅಲ್ಲದೇ ತಾನು ಗರ್ಭವತಿಯಾಗಿದ್ದ ಸಂದರ್ಭದಲ್ಲಿ ಅಹ್ವಾನ್ ತನ್ನನ್ನು ಮದುವೆಯಾಗುವುದಾಗಿ ತಿಳಿಸಿ ಆಕೆಯ ಪೋಷಕರನ್ನು ಭೇಟಿಯಾಗಿದ್ದನು ಈ ಕಾರಣದಿಂದಲೇ ಅಸ್ಪತ್ರೆಯಲ್ಲಿ ಗರ್ಭಪಾತಕ್ಕೆ ಅಂಗೀಕರಿಸಿದ್ದೆ ಎಂದು ಹೇಳಿರುವ ನಟಿ ತದನಂತರ ಆಹ್ವಾನ್ ತನಗೆ ಮಾನಸಿಕ ಕಿರುಕುಳ ನೀಡಿದ್ದನು.

ಇದಾದ ನಂತರವೂ ನಟಿ ತನ್ನನ್ನು ಮದುವೆಯಾಗಲೇ ಬೇಕು ಎಂದು ಅಹ್ವಾನ್ನಿಗೆ ಒತ್ತಡ ಹೇರಿದಾಗ ನಮ್ಮಿಬ್ಬರ ಕುಂಡಲಿಗಳು ಸರಿಯಾಗಿ ಕೂಡಿಬರುತ್ತಿಲ್ಲ ಎಂದು ನೆಪ ಹೂಡಿದ್ದಲ್ಲದೆ ಆತ ಹಾಗೂ ಆತನ ಗೆಳೆಯರು ಎಲ್ಲರೂ ಸೇರಿ ನನಗೆ ಹಾಗೂ ನನ್ನ ಕುಟುಂಬಕ್ಕೆ ಜೀವ ಬೆದರಿಕೆ ನೀಡಿದ್ದರು ಎಂದು ನಟಿ ದೂರಿನಲ್ಲಿ ಆರೋಪಿಸಿದ್ದಾಳೆ.

ಪ್ರಕರಣ ಕುರಿತಂತೆ ಭಾರತೀಯ ದಂಡ ಸಂಹಿತೆಯ ಪ್ರಕಾರ ಸೆಕ್ಷನ್ 376 (ರೇಪ್) ಮತ್ತು 507 (ಅನಾಮಿಕ ಬೆದರಿಕೆ ಕರೆ) ಎಫ್ಐಆರ್ ದಾಖಲಾಗಿದ್ದು, ಆರೋಪಿಯನ್ನು ಈಗಾಗಲೇ ವಶಕ್ಕೆ ಪಡೆದುಕೊಂಡು ವಿಚಾರಣೆ ನಡೆಸಲಾಗುತ್ತಿದೆ ಎಂದು ಒಶಿವರ ಪೊಲೀಸ್ ಅಧಿಕಾರಿ ಸುಭಾಷ್ ಬೆಲೆ ಹೇಳಿದ್ದಾರೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com