

ನವದೆಹಲಿ: ದೆಹಲಿ ವಿಧಾನಸಭೆ ಚುನಾವಣೆ ಮತದಾನಕ್ಕೆ ಇನ್ನು ನಾಲ್ಕು ದಿನ ಬಾಕಿ ಇರುವಾಗಲೇ ಮತದಾರರನ್ನು ಸೆಳೆಯುವ ದೃಷ್ಟಿಯಿಂದ ಭಾರತೀಯ ಜನತಾ ಪಾರ್ಟಿ 'ವಿಷನ್ ಡಾಕ್ಯೂಮೆಂಟ'ನ್ನು ಬಿಡುಗಡೆ ಮಾಡಿದ್ದು, ರಾಷ್ಟ್ರ ರಾಜಧಾನಿ ದೆಹಲಿಯನ್ನು 'ವಿಶ್ವದರ್ಜೆ ನಗರ'ವನ್ನಾಗಿ ಮಾಡುವುದಾಗಿ ದೆಹಲಿ ಬಿಜೆಪಿ ಮುಖ್ಯಮಂತ್ರಿ ಅಭ್ಯರ್ಥಿ ಕಿರಣ್ ಬೇಡಿ ಹೇಳಿದ್ದಾರೆ.
ಬಿಜೆಪಿ ಬಿಡುಗಡೆ ಮಾಡಿರುವ ವಿಷನ್ ಡಾಕ್ಯೂಮೆಂಟ್‌ನಲ್ಲಿ ಸುಮಾರು 270 ಪ್ರಮುಖ ಅಂಶಗಳನ್ನು ಹೊಂದಿದೆ. ಅವು ಇಂತಿದೆ:
* ಸ್ವಚ್ಛ ಹಾಗೂ ಹಚ್ಚ ಹಸಿರಿನ ದೆಹಲಿ
* ಭ್ರಷ್ಟಾಚಾರ ಮುಕ್ತ ದೆಹಲಿ
* ಸರ್ಕಾರಿ ಕೆಲಸ ಕಾರ್ಯಗಳಲ್ಲಿ ಶೇಕಡ 100 ರಷ್ಟು ಪಾರದರ್ಶಕತೆ
* ಮಹಿಳೆಯರ ಸುರಕ್ಷತೆ ಮತ್ತು ಭದ್ರತೆಗೆ ಪ್ರಮುಖ ಆದ್ಯತೆ
* ಜನಸಂಖ್ಯೆ ಇಳಿಕೆಗೆ ಆದ್ಯತೆ
* ಸಾರ್ವಜನಿಕ ಸಾರಿಗೆಗೆ ಪುನರುಜ್ಜೀವನ
* 24 ಗಂಟೆಗಳ ನಿರಂತ ನೀರು ಸರಬರಾಜು
* ಕಡಿಮೆ ದರದಲ್ಲಿ 24 ಗಂಟೆಗಳ ನಿರಂತರ ವಿದ್ಯುತ್ ಸರಬರಾಜು
* ದೆಹಲಿಯಲ್ಲಿ ವಲಸಿಗರ ಸಂಖ್ಯೆ ಜಾಸ್ತಿಯಾಗಿದ್ದು, ಆ ಸಮಸ್ಯೆ ನಿವಾರಣೆಗೆ ಆದ್ಯತೆ
* ಅಭಿವೃದ್ಧಿಯತ್ತ ಸಾಗಬೇಕಾ? ಬಿಜೆಪಿಯೊಂದಿಗೆ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರೊಂದಿಗೆ ಮುನ್ನಡೆಯಿರಿ.
* ಆಯಾ ತಿಂಗಳ ಪ್ರಗತಿ ವರದಿಯನ್ನು ರೇಡಿಯೋದಲ್ಲಿ ದಿಲ್ ಕಿ ಬಾತ್ ಮೂಲಕ ಜನರಿಗೆ ತಿಳಿಸಲಾಗುತ್ತದೆ.
* ದೆಹಲಿಯನ್ನು ಸಾಂಸ್ಕೃತಿಕ ನಗರವನ್ನಾಗಿ ಮಾಡುವ ಭರವಸೆ
* ತತ್ವ ಸಿದ್ಧಾಂತಗಳ ಮೇಲೆ ಸರ್ಕಾರ ರಚನೆ
* ಪ್ರಶ್ನಾತೀತ ಸಮಗ್ರತೆ
* ಸರ್ಕಾರಿ ಕಾಮಗಾರಿಗಳ ಬಗ್ಗೆ ನಿಗ
* ಡಿಜಿಟಲ್ ಇಂಡಿಯಾ- ಆನ್‌ಲೈನ್ ಮತ್ತು ಮೊಬೈಲ್ ತಂತ್ರಜ್ಞಾನ ಬಳಕೆ