

ನ್ಯೂಯಾರ್ಕ್ : ಅಮೆರಿಕಾದಲ್ಲಿ ಮನೆ ಮುಂದೆ ವಾಕಿಂಗ್ ಮಾಡುತ್ತಾ ಇದ್ದ ಭಾರತೀಯನಿಗೆ ಥಳಿಸಿದ ಪೊಲೀಸ್ ಅಧಿಕಾರಿಯನ್ನು ಬಂಧಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.
ಗುಜರಾತ್ ಮೂಲದ 57 ವರ್ಷದ ಸುರೇಶ್ ಬಾಯಿ ಪಟೇಲ್ ಎಂಬುವವರು ಮನೆ ಮುಂದೆ ವಾಕಿಂಗ್ ಮಾಡುತ್ತಾ ಇದ್ದರು. ಈ ವೇಳೆ ಅಲ್ಲಿಗೆ ಬಂದ ಅಮೆರಿಕದ ಪೊಲೀಸರು ಹಿಂದೆ ಮುಂದೆ ವಿಚಾರಿಸದೆಯೇ ಹಿಗ್ಗಾ ಮಗ್ಗಾ ಥಳಿಸಿದ್ದರು.
ಭಾಷೆ ಸರಿಯಾಗಿ ಬರುತ್ತಿಲ್ಲ ಎಂಬ ಹಿನ್ನಲೆಯಲ್ಲಿ ಸುರೇಶ್ ಬಾಯಿ ಪಟೇಲ್ ಅವರಿಗೆ ಯಾವುದೇ ವಿಚಾರಣೆ ಮಾಡದೇ ಸಾಯುವಂತೆ ಅಮೆರಿಕದ ಪೊಲೀಸರು ಥಳಿಸಿದ್ದರು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಸುರೇಶ್ ಅವರಿಗೆ ಥಳಿಸಿದ ಇಬ್ಬರು ಪೊಲೀಸರನ್ನು ಅಮಾನತುಗೊಳಿಸಲಾಗಿತ್ತು. ಪೊಲೀಸರ ವಿರುದ್ಧ ಸುರೇಶ್ ಮಗ ದೂರು ದಾಖಲಿಸಿದ್ದಾರೆ. ಭಾರತೀಯನ ಮೇಲೆ ಥಳಿಸಿರುವ ಹಿನ್ನಲೆಯಲ್ಲಿ ಈ ಪ್ರಕರಣದ ಪೂರ್ಣ ತನಿಖೆ ಕೈಗೊಂಡಿರುವ ಪೊಲೀಸರು, ಸುರೇಶ್ ಗೆ ಥಳಿಸಿದ ಪೊಲೀಸ್ ಅಧಿಕಾರಿಯನ್ನು ಬಂಧಿಸಿ, ವಿಚಾರಣೆ ಕೈಗೊಂಡಿದ್ದಾರೆ ಎಂದು ತಿಳಿದು ಬಂದಿದೆ.
ಎರಡು ವಾರಗಳ ಹಿಂದಷ್ಟೇ ಗುಜರಾತಿನಿಂದ ಅಮೆರಿಕಾದಲ್ಲಿರುವ ತಮ್ಮ ಮಗನ ಮನೆಗೆ ಸುರೇಶ್ ತೆರಳಿದ್ದರು. ಅವರಿಗೆ ಇಂಗ್ಲೀಷ್ ಸರಿಯಾಗಿ ಬರುತ್ತಿರಲಿಲ್ಲ. ಪ್ರತಿ ದಿನ ಪಟೇಲ್ ತಮ್ಮ ಮಗನ ಮನೆ ಮುಂದೆ ವಾಕಿಂಗ್ ಮಾಡುತ್ತಿದ್ದರು. ಆದರೆ, ಅನುಮಾನಗೊಂಡ ಪಕ್ಕದ ಮನೆಯವರು ಪೊಲೀಸರಿಗೆ ತಿಳಿಸಿದ್ದಾರೆ. ತಕ್ಷಣ ಸ್ಥಳಕ್ಕೆ ಆಗಮಿಸಿದ ಪೊಲೀಸರು ವಿಚಾರಸಿದೇ ಮನಬಂದಂತೆ ಥಳಿಸಿದ್ದಾರೆ.
ತೀವ್ರವಾಗಿ ಗಾಯಗೊಂಡ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರಿಗೆ ಇಂಗ್ಲೀಷ್ ಸರಿಯಾಗಿ ಬರುವುದಿಲ್ಲ. ಇದೇ ಘಟನೆಗೆ ಕಾರಣ ಎಂದು ಮಗ ಹೇಳಿದ್ದಾನೆ. ತನಿಖೆ ನಂತರ ಹೊಡೆದ ಪೊಲೀಸ್ ಅಧಿಕಾರಿಯನ್ನು ಅಮಾನತು ಮಾಡಲಾಗಿದೆ ಎಂದು ಮೂಲಗಳು ತಿಳಿಸಿವೆ.