ಪತ್ನಿ ಸತ್ತು ಗಂಟೆ ಬಳಿಕ ಪತಿ ಸಾವು

7 ತಿಂಗಳ ಪತ್ನಿ ಇದ್ದಕ್ಕಿಂತ ಸಾವನ್ನಪ್ಪಿರುವ ವಿಚಾರ ತಿಳಿದ ಪತಿ ಪತ್ನಿ ಸತ್ತು 1 ಗಂಟೆಯಾಗುತ್ತಿದ್ದಂತೆ ತಾನು ಸಾವನ್ನಪ್ಪಿರುವ...
ಪತ್ನಿ ಸತ್ತು ಗಂಟೆ ಬಳಿಕ ಪತಿ ಸಾವು

ವೆಲ್ಲೂರು: 7 ತಿಂಗಳ ಪತ್ನಿ ಇದ್ದಕ್ಕಿಂತ ಸಾವನ್ನಪ್ಪಿರುವ ವಿಚಾರ ತಿಳಿದ ಪತಿ ಪತ್ನಿ ಸತ್ತು 1 ಗಂಟೆಯಾಗುತ್ತಿದ್ದಂತೆ ತಾನು ಸಾವನ್ನಪ್ಪಿರುವ ಘಟನೆ ಶನಿವಾರ ಮಡಪಲ್ಲಿಯ ತಿರುಪತ್ತೂರಿನಲ್ಲಿ ನಡೆದಿದೆ.

ಮರಿಯಪ್ಪನ್(30) ಚೆನ್ನೈನ ಖಾಸಗಿ ಆಸ್ಪತ್ರೆಯಲ್ಲಿ ಕೆಲಸ ಮಾಡುತ್ತಿದ್ದರು. ಪತ್ನಿ ಸತ್ಯ ಅವರನ್ನು ಕೆಲವು ವರ್ಷಗಳ ಹಿಂದಷ್ಟೇ ವಿವಾಹವಾಗಿದ್ದರು. 7 ತಿಂಗಳ ಗರ್ಭಿಣಿಯಾಗಿದ್ದ ಸತ್ಯ(22) ತನ್ನ ಪತಿಯೊಂದಿಗೆ ತಿರುಪತ್ತೂರಿನ ಸರ್ಕಾರಿ ಆಸ್ಪತ್ರೆಗೆ ಹೋಗಿ ಆರೋಗ್ಯ ತಪಾಸಣೆ ಮಾಡಿಸಿಕೊಂಡು ಮನೆಗೆ ಬಂದಿದ್ದಾರೆ. ಬಳಿಕ ಪತಿಯೊಂದಿಗೆ ಜ್ವರ ಬಂದಂತಾಗುತ್ತಿದೆ ಎಂದ ಸತ್ಯ ಕೆಲವೇ ನಿಮಿಷಗಳ ಬಳಿಕ ಇದ್ದಕ್ಕಿದ್ದಂತೆ ಸಾವನ್ನಪ್ಪಿದ್ದಾರೆ.

ಪತ್ನಿಯ ಅಕಾಲಿಕ ಮರಣ ಕಂಡ ಮುನಿಯಪ್ಪನ್ ಅತ್ತು ಜೋರಾಗಿ ಚೀರಿದ್ದಾರೆ. ನಂತರ ಇದ್ದಕ್ಕಿಂತೆ ಹೃದಯಾಘಾತಗೊಂಡು ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com