ಬಿಹಾರ ಮುಖ್ಯಮಂತ್ರಿ ಜೀತನ್ ರಾಮ್ ಮಾಂಝಿ (ಸಂಗ್ರಹ ಚಿತ್ರ)
ಬಿಹಾರ ಮುಖ್ಯಮಂತ್ರಿ ಜೀತನ್ ರಾಮ್ ಮಾಂಝಿ (ಸಂಗ್ರಹ ಚಿತ್ರ)

ಜಿತನ್ ಮಾಂಝಿಗೆ ಬಿಜೆಪಿ ಬೆಂಬಲ

ಬಿಹಾರ ವಿಧಾನಸಭೆಯಲ್ಲಿ ಫೆ.20ರಂದು ವಿಶ್ವಾಸಮತ ಕೋರಲಿರುವ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ..

ಪಟನಾ: ಬಿಹಾರ ವಿಧಾನಸಭೆಯಲ್ಲಿ  ಫೆ.20ರಂದು ವಿಶ್ವಾಸಮತ ಕೋರಲಿರುವ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿ ಅವರನ್ನು ಬೆಂಬಲಿಸುವುದಾಗಿ ಬಿಜೆಪಿ ಘೋಷಿಸಿದೆ.

ಮಾಂಝಿಗೆ ಬೆಂಬಲ ನೀಡುವ ಕುರಿತು ಇದುವರೆಗೆ ಗೊಂದಲದ ಹೇಳಿಕೆ ನೀಡುತ್ತಿದ್ದ ಬಿಜೆಪಿ, ಕೊನೆಗೂ ತನ್ನ ನಿಲವು ಸ್ಪಷ್ಟಪಡಿಸಿದೆ. ಬುಧವಾರ ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಮಾಂಝಿ ಪರ ಮತ ಚಲಾಯಿಸುವ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇನ್ನು ವಿಶ್ವಾಸ ಮತ ಯಾಚನೆ ವೇಳೆ ಪ್ರತಿಪಕ್ಷ ಸಾಲಿನಲ್ಲಿ ಯಾವ ಪಕ್ಷ ಕೂರಬೇಕು ಎಂಬ ಜಿಜ್ಞಾಸೆ ಎದುರಾಗಿದೆ. ಈ ಸಾಲಿನಲ್ಲಿ ಜೆಡಿಯು ಸದಸ್ಯರು ಕೂರುತ್ತಾರೆಯೇ ಬಿಜೆಪಿ ಸದಸ್ಯರು ಕೂರುತ್ತಾರೆಯೇ ಎಂಬ ಬಗ್ಗೆ ಇನ್ನೂ ನಿರ್ಧಾರವಾಗಿಲ್ಲ.

ಕೋರ್ಟ್ ಷರತ್ತು
 ನಿಮ್ಮ ಸರ್ಕಾರದಿಂದ ಯಾವುದೇ ನಿರ್ಧಾರ ಹಾಗೂ ಹೊಸ ನೀತಿಗಳನ್ನು ಜಾರಿಗೆ ತರಬಹುದು ಎಂದು ಬಿಹಾರ ಮುಖ್ಯಮಂತ್ರಿ ಜಿತನ್ ರಾಮ್ ಮಾಂಝಿಗೆ ಪಟನಾ ಹೈಕೋರ್ಟ್ ಸೂಚನೆ ನೀಡಿದೆ. ಆದರೆ, ಇವುಗಳ ಅನುಷ್ಠಾನಕ್ಕೆ ಸಂಪೂರ್ಣ ಬಹುಮತ ಹೊಂದಿರಬೇಕು ಎಂಬ ಷರತ್ತನ್ನು ವಿಧಿಸಿದೆ.

Related Stories

No stories found.

Advertisement

X
Kannada Prabha
www.kannadaprabha.com