

ನವದೆಹಲಿ:ಎನ್‍ಡಿಎ ಸರ್ಕಾರದ ಬೆಳವಣಿಗೆಯಿಂದ ಭೀತಿಗೊಂಡು ಬಿಹಾರದಲ್ಲಿ ಆರ್‍ಜೆಡಿ ಮತ್ತು ಜೆಡಿಯು ಮೈತ್ರಿ ಮಾಡಿಕೊಂಡಿದೆ ಎಂದು ಹೇಳಿರುವ ಬಿಜೆಪಿ ರಾಷ್ಟ್ರೀಯ ವಕ್ತಾರ ಶಹನಾಜ್ ಹುಸೇನ್, ಮೈತ್ರಿಯಿಂದ ಬಿಹಾರದ ಜನತೆ ಮತ್ತೆ ಭೀತಿಗೊಳಗಾಗಿದ್ದಾರೆ ಎಂದು ಹೇಳಿದ್ದಾರೆ.
ಪರಿಸ್ಥಿತಿಯ ಅನಿವಾರ್ಯತೆಗೆ ಆರ್‍ಜೆಡಿ, ಜೆಡಿಯು ಮತ್ತು ಕಾಂಗ್ರೆಸ್ ಮೈತ್ರಿ ಮಾಡಿಕೊಂಡಿದೆ.ಈ ಹಿಂದೆ ಬಿಜೆಪಿ ಮತ್ತು ಜೆಡಿಯು ಒಂದುಗೂಡಿ `ಜಂಗಲ್ ರಾಜ' ಲಾಲೂ ಪ್ರಸಾದ್ ಯಾದವ್ ಅವರಿಂದ ಬಚಾವ್ ಮಾಡಿತ್ತು ಎಂದು ಹೇಳಿದ್ದಾರೆ.
ಬಿಹಾರದಲ್ಲಿ ಬಿಜೆಪಿಯು ದೊಡ್ಡ ಪಕ್ಷವಾಗಿದ್ದು, ಅದನ್ನು ಹಿಂದೆ ಹಾಕಲು ಯಾವ ಪಕ್ಷಗಳಿಂದಲೂ ಸಾಧ್ಯವಿಲ್ಲ. ರಾಮ್ ವಿಲಾಸ್ ಪಾಸ್ವಾನ್ ಅವರ ಎಲ್ ಜೆಪಿ ಉಪೇಂದ್ರ ಕುಶ್ವಹ ಅವರ ರಾಷ್ಟ್ರೀಯ ಲೋಕ ಸಮತ ಪಕ್ಷದೊಂದಿಗೆ ಸೇರಿ ಬಿಜೆಪಿ ವಿಧಾನಸಭೆ ಚುನಾವಣೆಯಲ್ಲಿ ಜಯಗಳಿಸಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಆರ್‍ಜೆಡಿಯೊಂದಿಗಿನ ಮೈತ್ರಿಯಿಂದ ನಿತೀಶ್ ಕುಮಾರ್ ಅವರಿಗೆ ಗೆಲ್ಲಲು ಸಾಧ್ಯವಿಲ್ಲ. ಅವರು ಈಗಾಗಲೇ ಬಿಹಾರ ಜನತೆಯ ವಿಶ್ವಾಸ ಕಳೆದುಕೊಂಡಿದ್ದಾರೆ ಎಂದು ಟೀಕಿಸಿದ್ದಾರೆ.