

ಜಮ್ಮು: ಪದೇ ಪದೇ ಕದನ ವಿರಾಮ ಉಲ್ಲಂಘಿಸುತ್ತಲೇ ಬಂದಿರುವ ಪಾಕಿಸ್ತಾನ ಶುಕ್ರವಾರ ಪರ್ಗ್ವಾಲ್ ಪ್ರದೇಶದ ಅಖ್ನೂರ್ ಸೆಕ್ಟರ್ ನಲ್ಲಿ ಗುಂಡಿನ ದಾಳಿ ನಡೆಸಿರುವುದಾಗಿ ತಿಳಿದುಬಂದಿದೆ..
ಇಂದು ಬೆಳಿಗ್ಗೆ 12ರ ಸುಮಾರಿಗೆ ಪರ್ಗ್ವಾಲ್ ಪ್ರದೇಶದ ಅಖ್ನೂರ್ ಸೆಕ್ಟರ್ ನಲ್ಲಿ ಇದ್ದಕ್ಕಿದ್ದಂತೆ ಪಾಕಿಸ್ತಾನದ ಸೈನಿಕರು ದಾಳಿ ನಡೆಸಿದ್ದಾರೆ.
ಇದಕ್ಕೆ ಪ್ರತಿಯಾಗಿ ಭಾರತೀಯ ಸೇನಾ ಪಡೆಗಳು ಪ್ರತಿದಾಳಿ ನಡೆಸಿದ್ದರಿಂದ ಕೆಲ ಕಾಲ ಗುಂಡಿನ ಚಕಚಕಿ ನಡೆದಿದೆ. ದಾಳಿಯಲ್ಲಿ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ ಎಂದು ಹಿರಿಯ ಅಧಿಕಾರಿಗಳು ತಿಳಿಸಿದ್ದಾರೆ.