

ಕಠ್ಮಂಡು: ಕಠ್ಮಂಡುವಿನಲ್ಲಿ ಸುರಿಯುತ್ತಿರುವ ಭಾರಿ ಮಳೆ ಮತ್ತು ಪ್ರತಿಕೂಲ ಹವಾಮಾನದಿಂದಾಗಿ ಟರ್ಕಿಷ್ ಮೂಲದ ವಿಮಾನವೊಂದು ವಿಮಾನ ನಿಲ್ದಾಣದ ರನ್ ವೇ ಮೇಲೆ ಅಪ್ಪಳಿಸಿದೆ.
ಟರ್ಕಿಷ್ ಏರ್ ಬಸ್ ಎ330 ವಿಮಾನ ನೆಲಕಪ್ಪಳಿಸಿದ್ದು, ವಿಮಾನದಲ್ಲಿ ಸುಮಾರು 238 ಮಂದಿ ಪ್ರಯಾಣಿಕರು ಇದ್ದರು ಎಂದು ತಿಳಿದುಬಂದಿದೆ. ಅದೃಷ್ಟವಶಾತ್ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದು, ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ತಿಳಿದುಬಂದಿದೆ. ಕಠ್ಮಂಡುವಿನ ತ್ರಿಭುವನ್ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಈ ದುರ್ಘಟನೆ ಸಂಭವಿಸಿದ್ದು, ಘಟನೆ ಪ್ರತೀಕೂಲ ಹವಾಮಾನವೇ ಕಾರಣ ಎಂದು ಹೇಳಲಾಗುತ್ತಿದೆ.
ಕಳೆದ ಹಲವು ದಿನಗಳಿಂದ ಕಠ್ಮಂಡುವಿನಲ್ಲಿ ಸತತ ಮಳೆಯಾಗುತ್ತಿದ್ದು, ವಿಮಾನ ನಿಲ್ದಾಣದಲ್ಲಿ ಮಂಜು ಕವಿದ ವಾತಾವರಣಾ ನಿರ್ಮಾಣವಾಗಿತ್ತು. ಈ ವೇಳೆ ಟರ್ಕಿಷ್ ಮೂಲದ ವಿಮಾನ 2 ಬಾರಿ ಲ್ಯಾಂಡಿಂಗ್ ಗೆ ಪ್ರಯತ್ನಿಸಿತಾದರೂ, ಲ್ಯಾಂಡಿಂಗ್ ಸಾಧ್ಯವಾಗಿರಲಿಲ್ಲ. ರನ್ ವೇ ಮೇಲೆ ದಟ್ಟ ಮಂಜು ಆವರಿಸಿದ್ದರಿಂದ ರನ್ ವೇ ವಿಮಾನದ ಪೈಲಟ್ ಗೆ ಕಾಣುತ್ತಿರಲಿಲ್ಲ. ಹೀಗಾಗಿ ವಿಮಾನ ಆಯತಪ್ಪಿ ನೆಲಕಪ್ಪಿಳಿಸಿದೆ. ಪರಿಣಾಮ ವಿಮಾನ ದುರಂತಕ್ಕೀಡಾಗಿದೆ.
ಆದರೆ ಅದೃಷ್ಟವಶಾತ್ ವಿಮಾನದಲ್ಲಿದ್ದ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದು, ಯಾವುದೇ ಪ್ರಯಾಣಿಕರಿಗೂ ಹಾನಿಯಾಗಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.