ಮತ್ತೆ ಭೂಕಂಪ: ನೇಪಾಳದಲ್ಲಿ ನೂರಾರು ಸಾವು ಶಂಕೆ, ಬಿಹಾರದಲ್ಲಿ 10 ಮಂದಿ ಸಾವು

ಭೀಕರ ಭೂಕಂಪದಿಂದ ತತ್ತರಿಸಿದ್ದ ನೇಪಾಳದಲ್ಲಿ ಮಂಗಳವಾರ ಮತ್ತೆ ಪ್ರಬಲ ಭೂಕಂಪ ಸಂಭವಿಸಿದ್ದು, ನೂರಾರು ಜನ ಮೃತಪಟ್ಟಿರುವ ಸಂಖ್ಯೆ ವ್ಯಕ್ತವಾಗಿದೆ.
ಭೂಕಂಪದಿಂದ ಆತಂಕಗೊಂಡು ರಸ್ತೆ ಮಧ್ಯೆ ಜಮಾಯಿಸಿರುವ ನೇಪಾಳಿಗರು
ಭೂಕಂಪದಿಂದ ಆತಂಕಗೊಂಡು ರಸ್ತೆ ಮಧ್ಯೆ ಜಮಾಯಿಸಿರುವ ನೇಪಾಳಿಗರು
Updated on: 

ನವದೆಹಲಿ: ಭೀಕರ ಭೂಕಂಪದಿಂದ ತತ್ತರಿಸಿದ್ದ ನೇಪಾಳದಲ್ಲಿ ಮಂಗಳವಾರ ಮತ್ತೆ ಪ್ರಬಲ ಭೂಕಂಪ ಸಂಭವಿಸಿದ್ದು, ನೂರಾರು ಜನ ಮೃತಪಟ್ಟಿರುವ ಶಂಕೆ ವ್ಯಕ್ತವಾಗಿದೆ.

ಇತ್ತೀಚಿನ ವರದಿಯ ಪ್ರಕಾರ, ಇಂದು ಸಂಭವಿಸಿದ ಭೂಕಂಪದಿಂದ ನೇಪಾಳದಲ್ಲಿ ಇದುವರೆಗೆ 26 ಮಂದಿ ಮೃತಪಟ್ಟಿದ್ದಾರೆ ಮತ್ತು 150ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಇನ್ನು ರಾಷ್ಟ್ರರಾಜಧಾನಿ ದೆಹಲಿ ಸೇರಿದಂತೆ ಉತ್ತರ ಭಾರತದ ಹಲವು ಕಡೆ ಭೂಮಿ ಕಂಪಿಸಿದ್ದು, ಭೂಕಂಪದಿಂದಾಗಿ ಬಿಹಾರದಲ್ಲಿ 10 ಮಂದಿ ಮೃತಪಟ್ಟಿದ್ದಾರೆ.

ಇಂದು ಮಧ್ಯಾಹ್ನ 12.30ರ ಸುಮಾರಿಗೆ ದೆಹಲಿ, ಉತ್ತರ ಪ್ರದೇಶ, ಪಶ್ಚಿಮ ಬಂಗಾಳ, ಅಸ್ಸಾಂ, ಛತ್ತೀಸ್‌ಗಡ, ಬಿಹಾರ, ಒಡಿಶಾ ಹಾಗೂ ಚಂಡೀಗಢದಲ್ಲಿ ಸುಮಾರು 60 ಸೆಕೆಂಡ್‌ಗಳ ಕಾಲ ಭೂಮಿ ಕಂಪಿಸಿದ ಅನುಭವವಾಗಿದ್ದು, ಜನರು ಭಯಭೀತರಾಗಿ ಕಟ್ಟಡಗಳಿಂದ ಹೊರಗೋಡಿ ಬಂದಿದ್ದಾರೆ.

ಎರಡು ಪ್ರತ್ಯೇಕ ಸ್ಥಳಗಳಲ್ಲಿ ಭೂಕಂಪದ ಕೇಂದ್ರ ಬಿಂದು ಪತ್ತೆಯಾಗಿದ್ದು, ಒಂದು ನೇಪಾಳದ ಕಠ್ಮಂಡು ನಗರದಿಂದ ಸುಮಾರು 83 ಕಿ.ಮೀ. ದೂರದ ಕೊಡಾರಿಯಲ್ಲಿ ಹಾಗೂ ಮತ್ತೊಂದು ಅಫ್ಘಾನಿಸ್ತಾನದಲ್ಲಿ. ರಿಕ್ಟರ್ ಮಾಪಕದಲ್ಲಿ ನೇಪಾಳದಲ್ಲಿ 7.2ರಷ್ಟು ಹಾಗೂ ಅಪ್ಘಾನಿಸ್ತಾನದಲ್ಲಿ 6.9ರಷ್ಟು ತೀವ್ರತೆ ದಾಖಲಾಗಿದೆ.

ಮುನ್ನೆಚ್ಚರಿಕೆ ಕ್ರಮವಾಗಿ ದೆಹಲಿ ಹಾಗೂ ಕೋಲ್ಕತಾದಲ್ಲಿ ಮೆಟ್ರೋ ರೈಲು ಸಂಚಾರವನ್ನು ಸ್ಥಗಿತಗೊಳಿಸಲಾಗಿದೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com