ಭಾರತದ ವಿಪತ್ತು ನಿರ್ವಹಣಾ ಸಾಮರ್ಥ್ಯದ ಬಗ್ಗೆ ಅಮೇರಿಕಾ ಶ್ಲಾಘನೆ

ನೇಪಾಳದಲ್ಲಿ ಸಂಭವಿಸಿದ್ದ ಭೂಕಂಪಕ್ಕೆ ಭಾರತ ನೀಡಿದ್ದ ಗಮನಾರ್ಹ ನೆರವನ್ನು ಅಮೇರಿಕಾ ಶ್ಲಾಘಿಸಿದೆ.
ವಿಪತ್ತು ನಿರ್ವಹಣೆ(ಸಾಂದರ್ಭಿಕ ಚಿತ್ರ )
ವಿಪತ್ತು ನಿರ್ವಹಣೆ(ಸಾಂದರ್ಭಿಕ ಚಿತ್ರ )
Updated on

ವಾಷಿಂಗ್ಟನ್: ನೇಪಾಳದಲ್ಲಿ ಸಂಭವಿಸಿದ್ದ ಭೂಕಂಪಕ್ಕೆ ಭಾರತ ನೀಡಿದ್ದ ಗಮನಾರ್ಹ ನೆರವನ್ನು ಶ್ಲಾಘಿಸಿರುವ ಅಮೇರಿಕಾ, ಭಾರತದ ವಿಪತ್ತು ನಿರ್ವಹಣಾ ಸಾಮರ್ಥ್ಯವನ್ನು ಅತ್ಯಾಧುನಿಕ ಮತ್ತು ಸುಧಾರಿತ ಎಂದು ಬಣ್ಣಿಸಿದೆ.

ನೇಪಾಳದ ಭೂಕಂಪದ ಸಂತ್ರಸ್ತರನ್ನು ರಕ್ಷಿಸಲು ಕೈಗೊಂಡ ರಕ್ಷಣಾ ಕಾರ್ಯಾಚರಣೆ, ಭಾರತ ವಿಪತ್ತು ನಿರ್ವಹಣೆಯಲ್ಲಿ ಅದ್ಭುತ ಸಾಮರ್ಥ್ಯ ಹೊಂದಿದ್ದು, ಸುಧಾರಿತವಾಗಿದೆ ಎಂಬುದು ಸ್ಪಷ್ಟಪಡಿಸಿದೆ ಎಂದು ಅಮೇರಿಕಾ ಕಾಂಗ್ರೆಸ್ ನ ಸಭೆಯಲ್ಲಿ ದಕ್ಷಿಣ ರಾಜ್ಯದ ಸಹಾಯಕ ಕಾರ್ಯದರ್ಶಿ ನಿಶಾ ದೇಸಾಯಿ ಬಿಸ್ವಾಲ್ ತಿಳಿಸಿದ್ದಾರೆ.

ವಿಪತ್ತು ನಿರ್ವಣೆಯಲ್ಲಿ ಭಾರತೀಯ ಸೇನೆ ಕೈಗೊಂಡ ಕಾರ್ಯಾಚರಣೆ  ಅಮೇರಿಕಾ ಹೆಮ್ಮೆಪಡುವಂತಹದ್ದು ಎಂದಿರುವ  ನಿಶಾ ದೇಸಾಯಿ, ವಿಪತ್ತು ನಿರ್ವಹಣೆಯಲ್ಲಿ ಜಾಗತಿಕ ಮಟ್ಟದಲ್ಲಿ ಸಹಕಾರ ಮತ್ತು ಪ್ರಾದೇಶಿಕ ಪ್ರತಿಸ್ಪಂದನೆಯನ್ನು ಮತ್ತಷ್ಟು ಉತ್ತಮಗೊಳಿಸಬೇಕಿದೆ ಎಂದು ಅಭಿಪ್ರಾಪಟ್ಟಿದ್ದಾರೆ.  

ಪ್ರಕೃತಿ ವಿಕೋಪ ಸಂಭವಿಸಿದರೆ, ತಮ್ಮ ಸ್ವಂತ ವಿಪತ್ತು ನಿರ್ವಹಣಾ ದಳವನ್ನು ಅವಲಂಬಿಸಿದಂತೆ ನೆರೆ ರಾಷ್ಟ್ರಗಳು ಭಾರತದ ನೆರವನ್ನು ಅವಲಂಬಿಸುತ್ತಾರೆ. ಭಾರತದ ವಿಪತ್ತು ನಿರ್ವಹಣೆ ಆ  ಸಾಮರ್ಥ್ಯವನ್ನು ಹೊಂದಿದೆ. ಇತ್ತೀಚೆಗಷ್ಟೇ ಒರಿಸ್ಸಾದಲ್ಲಿ ಉಂಟಾದ ಚಂಡಮಾರುತದಲ್ಲಿ, ವಿಪತ್ತು ನಿರ್ವಹಣಾ ದಳ ಯಶಸ್ವೀ ಕಾರ್ಯಾಚರಣೆ ನಡೆಸಿದ್ದರ ಪರಿಣಾಮ ಅತ್ಯಂತ ಕಡಿಮೆ ಪ್ರಾಣಹಾನಿ ಸಂಭವಿಸಿತ್ತು. ಇದೂ ಸಹ ಭಾರತದ ಸಾಮರ್ಥ್ಯಕ್ಕೆ ಮತ್ತೊಂದು  ಉದಾಹರಣೆ ಎಂದು ನಿಶಾ ದೇಸಾಯಿ ಅಮೆರಿಕಾದ ಕಾಂಗ್ರೆಸ್ ಸದಸ್ಯರಿಗೆ ತಿಳಿಸಿದ್ದಾರೆ.  ನೇಪಾಳದ ಭೂಕಂಪದ ರಕ್ಷಣಾ ಕಾರ್ಯಾಚರಣೆಗೆ  ಬಾಂಗ್ಲಾ ದೇಶ, ಶ್ರೀಲಂಕಾ, ಚೀನಾ, ಜಪಾನ್ ನೀಡಿದ ನೆರವನ್ನು ನಿಶಾ ದೇಸಾಯಿ ಶ್ಲಾಘಿಸಿದ್ದಾರೆ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com