ಬಿಗ್‍ಬಿ ಮುಂದೆಯೇ ಗುಂಡಿನ ದಾಳಿ

ಗೋರೆಗಾಂವ್‍ನ ಫೀಲ್ಮ್ ಸಿಟಿ ಯಲ್ಲಿ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಗುಂಡಿನ ದಾಳಿ ನಡೆದಿದ್ದು, ವ್ಯಕ್ತಿಯೊಬ್ಬರಿಗೆ ತೀವ್ರ ಗಾಯಗಳಾಗಿವೆ.
ಬಿಗ್ ಬಿ ಟ್ವೀಟ್
ಬಿಗ್ ಬಿ ಟ್ವೀಟ್
Updated on

ಮುಂಬೈ: ಗೋರೆಗಾಂವ್‍ನ ಫೀಲ್ಮ್ ಸಿಟಿ ಯಲ್ಲಿ ಬಾಲಿವುಡ್ ನಟ ಅಮಿತಾಭ್ ಬಚ್ಚನ್ ಅವರ ಚಿತ್ರದ ಚಿತ್ರೀಕರಣ ನಡೆಯುತ್ತಿದ್ದ ವೇಳೆ ಗುಂಡಿನ ದಾಳಿ ನಡೆದಿದ್ದು, ವ್ಯಕ್ತಿಯೊಬ್ಬರಿಗೆ ತೀವ್ರ ಗಾಯಗಳಾಗಿವೆ.

ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಏಕಾಏಕಿ ಗುಂಡಿನ ದಾಳಿ ನಡೆಸಿದ್ದರಿಂದ ಶಿವಸೇನೆ ಮುಖ್ಯಸ್ಥ ರಾಜುಶಿಂಧೆ ಗಾಯಗೊಂಡಿದ್ದಾರೆ. ’ದಿ 1873 - ಒ.ಕೆ.!! ಫಿಲಂ ಸಿಟಿಯಲ್ಲಿ ಶೂಟಿಂಗ್..! ನಾವಿದ್ದ ಸ್ಥಳದಿಂದ 20 ಅಡಿ ದೂರದಲ್ಲಿ ಗ್ಯಾಂಗ್​ವಾರ್... ಒಬ್ಬ ಸತ್ತಿದ್ದಾನೆ. ಎಲ್ಲೆಲ್ಲೂ ಪೊಲೀಸರು...!’ ಎಂದು ಅಮಿತಾಭ್ ಬಚ್ಚನ್ ಟ್ವೀಟ್ ಮಾಡಿದ್ದಾರೆ.

ಮುಂಬೈ ಫಿಲಂ ಸಿಟಿಯಲ್ಲಿ ನಡೆದ ಗುಂಡು ಹಾರಾಟದ ಘಟನೆಯನ್ನು ಪೊಲೀಸರು ದೃಢಪಡಿಸಿದ್ದಾರೆ. ಮುಂಬೈಯಲ್ಲಿ ಸೆಕ್ಯುರಿಟಿ ಏಜೆನ್ಸಿ ಹೊಂದಿರುವರೆನ್ನಲಾದ ವ್ಯಕ್ತಿಯೊಬ್ಬರು ಫಿಲಂಸಿಟಿ ಗುಂಡೇಟಿನ ಘಟನೆಯಿಂದ ಗಾಯಗೊಂಡಿದ್ದಾರೆ. ಗಾಯಾಳುವನ್ನು ಕಾಂಟ್ರಾಕ್ಟರ್ ರಾಜು ಶಿಂಧೆ ಎಂದು ಗುರುತಿಸಲಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಮೂಲಗಳು ತಿಳಿಸಿವೆ.

ಬೈಕ್ ನಲ್ಲಿ ಬಂದ ವ್ಯಕ್ತಿಗಳಿಬ್ಬರು ಶಿಂಧೆ ಅವರ ಹೊಟ್ಟೆ, ಕೈಗೆ ಗುಂಡು ಹಾರಿಸಿದರು. ಅವರನ್ನು ಬೆನ್ನಟ್ಟಿಕೊಂಡು ಹೋಗಲಾಯಿತಾದರೂ ಅವರು ಪರಾರಿಯಾಗುವಲ್ಲಿ ಸಫಲರಾದರು ಎಂದು ಪೊಲೀಸರು ಹೇಳಿದ್ದಾರೆ. ಕಾಂಟ್ರಾಕ್ಟರ್​ನನ್ನು ಮೊದಲು ಲೈಫ್​ಲೈನ್ ಆಸ್ಪತ್ರೆಗೆ ದಾಖಲಿಸಲಾಯಿತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ನಾನಾವತಿ ಆಸ್ಪತ್ರೆಗೆ ಸ್ಥಳಾಂತರಿಸಲಾಯಿತು. ಅವರ ಸ್ಥಿತಿ ಗಂಭೀರವಾಗಿದ್ದು, ಗುಂಡೇಟಿನ ಘಟನೆಗೆ ಕಾರಣವೇನೆಂದು ಇನ್ನೂ ತಿಳಿಯಬೇಕಾಗಿದೆ. ಈವರೆಗೆ ಯಾರನ್ನೂ ಬಂಧಿಸಲಾಗಿಲ್ಲ ಎಂದು ಮುಂಬೈಯ ಅಡಿಷನಲ್ ಪೊಲೀಸ್ ಕಮಿಷನರ್ ಪತೇ ಸಿಂಗ್ ಪಾಟೀಲ್ ಹೇಳಿದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com