ದೀಪಾವಳಿ: ನವದೆಹಲಿಯಲ್ಲಿ 290, ಬೆಂಗಳೂರಿನಲ್ಲಿ 19 ಲಘು ಪಟಾಕಿ ಅವಘಡ

ದೀಪಾವಳಿ ಸಂಭ್ರಮದ ನಡುವೆಯೇ ಪಟಾಕಿ ಅವಘಡಗಳೂ ಸಂಭವಿಸಿದೆ. ನವದೆಹಲಿಯೊಂದರಲ್ಲೇ 290 ಪ್ರಕರಣಗಳು ದಾಖಲಾಗಿವೆ.
ದೀಪಾವಳಿ: ನವದೆಹಲಿಯಲ್ಲಿ 290, ಬೆಂಗಳೂರಿನಲ್ಲಿ 19 ಲಘು ಪಟಾಕಿ ಅವಘಡ
Updated on

ನವದೆಹಲಿ: ದೀಪಾವಳಿ ಸಂಭ್ರಮದ ನಡುವೆಯೇ ಪಟಾಕಿ ಅವಘಡಗಳೂ ಸಂಭವಿಸಿದೆ. ನವದೆಹಲಿಯೊಂದರಲ್ಲೇ 290 ಪ್ರಕರಣಗಳು ದಾಖಲಾಗಿವೆ.
ಎಲ್ಲಾ ಪ್ರಕರಣಗಳಲ್ಲೂ ಸಣ್ಣಪುಟ್ಟ ಗಾಯಗಳಾಗಿದ್ದು ಯಾವುದೇ ಹಾನಿ ಸಂಭವಿಸಿಲ್ಲ ಎಂದು ದೆಹಲಿ ಫೈರ್ ಸರ್ವಿಸಸ್(ಡಿಎಫ್ಎಸ್) ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.  ಕಳೆದ ವರ್ಷದ ದೀಪಾವಳಿಯಲ್ಲಿ 293 ಕರೆ ಬಂದಿದ್ದವು. ಮುನ್ನೆಚ್ಚರಿಕಾ ಕ್ರಮವಾಗಿ ವಾಹನದಟ್ಟಣೆಯ ಪ್ರದೇಶ ಮತ್ತು ಪ್ರಮುಖ ಮಾರುಕಟ್ಟೆಗಳಿರುವ ಸ್ಥಳ ಸೇರಿದಂತೆ 20 ಪ್ರಮುಖ ಸ್ಥಳಗಳಲ್ಲಿ ಡಿಎಫ್ಎಸ್ 20 ಪ್ರಮುಖ ಸ್ಥಳಗಳಲ್ಲಿ ಸಿಬ್ಬಂದಿಗಳನ್ನು ನಿಯೋಜಿಸಿದೆ.
ಬೆಂಗಳೂರಿನಲ್ಲಿ ಕಳೆದ ಎರಡು ದಿನಗಳಲ್ಲಿ 19  ಪಟಾಕಿ ಅವಘಡಗಳು ಸಂಭವಿಸಿದ್ದು, ಪಟಾಕಿ ಸಿಡಿಸುವ ವೇಳೆ ಸಣ್ಣಪುಟ್ಟ ಗಾಯಗಳಿಗೆ ಒಳಗಾದವರ ಪೈಕಿ 6, ನಾರಾಯಣ ನೇತ್ರಾಲಯ, 4 ಶಂಕರ ಕಣ್ಣಿನ ಆಸ್ಪತ್ರೆ, 4 ಬೆಂಗಳೂರು ನೇತ್ರಾಲಯ, 3 ಸಂಪ್ರತಿ ಕಣ್ಣಿನ ಅಸ್ಪತ್ರೆಯಲ್ಲಿ ಇಬ್ಬರು ಹೊರರೋಗಿ ವಿಭಾಗದಲ್ಲಿ ಚಿಕಿತ್ಸೆ ಪಡೆದು ಮನೆಗೆ ತೆರಳಿದ್ದಾರೆ.  ಕಳೆದ ಬಾರಿ ಅನೇಕರು ಪಟಾಕಿ ಅವಘಡದಲ್ಲಿ ಕೈ, ಕಾಲು ಕಣ್ಣಿಗೆ ತೀವ್ರ ಹಾನಿ ಮಾಡಿಕೊಂಡಿದ್ದರು. ಈ ಬಾರಿ ಅಂತಹ ಯಾವುದೇ ಗಂಭೀರ ಪ್ರಕರಣಗಳು ನಡೆದಿಲ್ಲ.

Follow KannadaPrabha channel on WhatsApp

  

Download the KannadaPrabha News app to follow the latest news updates

  

Subscribe and Receive exclusive content and updates on your favorite topics

  

Subscribe to KannadaPrabha YouTube Channel and watch Videos

ಈ ವಿಭಾಗದ ಇತರ ಸುದ್ದಿ

No stories found.

X

Advertisement

X
Kannada Prabha
www.kannadaprabha.com