ಬಿಗ್ ಬಿ 'ಲಿವರ್ ಶೇ.75ರಷ್ಟು ಹಾನಿ!

ಹಿಂದಿ ಚಿತ್ರರಂಗದ ಮೇರು ನಟ ಬಾಲಿವುಡ್‌ ಬಿಗ್‌ ಬಿ ಅಮಿತಾಬ್‌ ಬಚ್ಚನ್‌ ಅವರ ಲಿವರ್ ಕೇವಲ ಶೇ.25ರಷ್ಟು...
ಅಮಿತಾಬ್‌ ಬಚ್ಚನ್‌
ಅಮಿತಾಬ್‌ ಬಚ್ಚನ್‌
Updated on: 
ಮುಂಬೈ: ಹಿಂದಿ ಚಿತ್ರರಂಗದ ಮೇರು ನಟ ಬಾಲಿವುಡ್‌ ಬಿಗ್‌ ಬಿ ಅಮಿತಾಬ್‌ ಬಚ್ಚನ್‌ ಅವರ ಲಿವರ್ ಕೇವಲ ಶೇ.25ರಷ್ಟು ಮಾತ್ರ ಕಾರ್ಯನಿರ್ವಹಿಸುತ್ತಿದೆಯಂತೆ. ಈಗಂತ ಅಮಿತಾಬ್ ಬಚ್ಚನ್ ತಮ್ಮ ಬ್ಲಾಗ್ ನಲ್ಲಿ ಮಂಗಳವಾರ ಬಹಿರಂಗಪಡಿಸಿದ್ದಾರೆ.
ಇದೇ ಮೊಟ್ಟ ಮೊದಲಿಗೆ ಅಮಿತಾಬ್ ಬಚ್ಚನ್ ತಮ್ಮ ಆರೋಗ್ಯ ಸಮಸ್ಯೆ ಬಗ್ಗೆ ಬ್ಲಾಗ್ ನಲ್ಲಿ ಹಂಚಿಕೊಂಡಿದ್ದಾರೆ. ನನ್ನ ಲಿವರ್(ಯಕೃತ್ತು) ಕೇವಲ ಶೇ.25ರಷ್ಟು ಕಾರ್ಯ ಮಾಡುತ್ತಿದ್ದು, ಶೇ.75ರಷ್ಟು ಸಂಪೂರ್ಣವಾಗಿ ಹಾಳಾಗಿ ಹೋಗಿದೆ ಎಂದು ಹೇಳಿದ್ದಾರೆ.
ಕೂಲಿ ಚಿತ್ರ ನಿರ್ಮಾಣವಾಗುತ್ತಿದ್ದ ವೇಳೆ ನನಗೆ ಆಕಸ್ಮಿಕವಾಗಿ ಅಪಘಾತವಾಯಿತು. ಆ ವೇಳೆ 200 ಜನರಿಂದ 60 ಬಾಟಲ್ ರಕ್ತ ಹಾಕಲಾಗಿತ್ತು. ಇದರಲ್ಲಿ ಓರ್ವ ವ್ಯಕ್ತಿಗೆ ಹೆಪಟೈಟಿಸ್-ಬಿ ಇತ್ತು. ಈ ರಕ್ತವನ್ನೂ ಸಹ ನನಗೆ ಹಾಕಿದ್ದರಿಂದ ಲಿವರ್ ಶೇ.75ರಷ್ಟು ಹಾಳಾಗಿದೆ ಎಂದು ತಮ್ಮ ನೋವು ತೋಡಿಕೊಂಡಿದ್ದಾರೆ.
2000ನೇ ಸಾಲಿನಲ್ಲಿ ನನಗೆ ಹೆಪಟೈಟಿಸ್ ರೋಗ ಆಕಸ್ಮಿಕವಾಗಿ ತಗುಲಿತ್ತು. ಅಷ್ಟೇ ಅಲ್ಲದೇ ಕಳೆದ 18 ವರ್ಷಗಳಿಂದ ನಾನು ಕಿಡ್ನಿ ಮತ್ತು ಲಿವರ್ ಸಮಸ್ಯೆಯಿಂದ ಬಳಲುತ್ತಿದ್ದೇನೆ. ಇಲ್ಲಿಯವರೆಗೂ ನಾನು ಇರಲು ಕಾರಣವೆಂದರೆ ನಿಮ್ಮ ಆಶೀರ್ವಾದ ಎಂದು ಹೇಳಿದ್ದಾರೆ. 

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com