ತಂಗ್ದಾರ್ ನಲ್ಲಿ ಉಗ್ರರ ದಾಳಿ; ಓರ್ವ ಯೋಧ ಸಾವು, ಮುಂದುವರೆದ ಗುಂಡಿನ ಚಕಮಕಿ

ಭಾರತ ಮತ್ತು ಪಾಕಿಸ್ತಾನ ಗಡಿ ನಿಯಂತ್ರಣ ರೇಖೆಯಲ್ಲಿನ ಭಾರತೀಯ ಸೇನಾ ಶಿಬಿರದ ಮೇಲೆ ಬುಧವಾರ ಉಗ್ರರು ದಾಳಿ ನಡೆಸಿದ್ದು, ಓರ್ವ ಯೋಧ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ...
ತಂಗ್ಧಾರ್ ಸೆಕ್ಟರ್ ನಲ್ಲಿ ಭಯೋತ್ಪಾದಕ ದಾಳಿ
ತಂಗ್ಧಾರ್ ಸೆಕ್ಟರ್ ನಲ್ಲಿ ಭಯೋತ್ಪಾದಕ ದಾಳಿ
Updated on: 

ಶ್ರೀನಗರ: ಭಾರತ ಮತ್ತು ಪಾಕಿಸ್ತಾನ ಗಡಿ ನಿಯಂತ್ರಣ ರೇಖೆಯಲ್ಲಿನ ಭಾರತೀಯ ಸೇನಾ ಶಿಬಿರದ ಮೇಲೆ ಬುಧವಾರ ಉಗ್ರರು ದಾಳಿ ನಡೆಸಿದ್ದು, ಓರ್ವ ಯೋಧ ಸಾವನ್ನಪ್ಪಿದ್ದಾನೆ ಎಂದು ತಿಳಿದುಬಂದಿದೆ.

ಜಮ್ಮು ಮತ್ತು ಕಾಶ್ಮೀರದ ತಂಗ್ಧಾರ್ ಸೇನಾ ಶಿಬಿರದ ಮೇಲೆ ಎಕೆ 47 ಮತ್ತು ರಾಕೆಟ್ ಲಾಂಚರ್ ಗಳನ್ನು ಹೊತ್ತಿದ್ದ ಮೂರಕ್ಕೂ ಹೆಚ್ಚು ಮಂದಿ ಉಗ್ರರು ದಾಳಿ ನಡೆಸಿದ್ದು, ಘಟನೆಯಲ್ಲಿ ಓರ್ವ ಭಾರತೀಯ ಯೋಧ ಸಾವನ್ನಪ್ಪಿದ್ದಾನೆ ಎಂದು ಮೂಲಗಳು ತಿಳಿಸಿವೆ. ಪ್ರಸ್ತುತ ಯೋಧರು ಮತ್ತು ಉಗ್ರರ ನಡುವೆ ಗುಂಡಿನ ಚಕಮಕಿ ಮುಂದುವರೆದಿದ್ದು, ಉಗ್ರರಿಗೆ ಯೋಧರು ತಕ್ಕ ಪ್ರತ್ಯುತ್ತರ ನೀಡುತ್ತಿದ್ದಾರೆ. ಘಟನಾ ಸ್ಥಳಕ್ಕೆ ಹಿರಿಯ ಸೇನಾಧಿಕಾರಿಗಳು ದೌಡಾಯಿಸಿದ್ದು, ಹೆಚ್ಚುವರಿ ಭದ್ರತಾ ಪಡೆಗಳನ್ನು ನಿಯೋಜಿಸಿದ್ದಾರೆ.

ಘಟನೆಯಲ್ಲಿ ಓರ್ವ ಸ್ಥಳೀಯ ನಾಗರಿಕನಿಗೆ ಕೂಡ ಗಾಯವಾಗಿದ್ದು, ಆತನನ್ನು ಸಮೀಪದ ಸೇನಾಸ್ಪತ್ರೆಗೆ ದಾಖಲು ಮಾಡಲಾಗಿದೆ. ಗುಂಡಿನ ದಾಳಿಗೆ ಸೇನೆಗೆ ಸೇರಿದೆ ಕೆಲ ವಾಹನಗಳು ಜಖಂಗೊಂಡಿದ್ದು, ಯೋಧರು ವಿಶ್ರಮಿಸುವ ಕೊಠಡಿಗಳು ಹಾನಿಗೊಳಗಾಗಿವೆ ಎಂದು ತಿಳಿದುಬಂದಿದೆ.

ಸೇನಾ ಮೂಲಗಳ ಪ್ರಕಾರ ಕಲ್ಸೂರಿ ರಿಡ್ಜ್ ನಲ್ಲಿರುವ ತಂಗ್ಧಾರ್ ಸೆಕ್ಟರ್ ನಲ್ಲಿ ಮುಂಜಾನೆ ಈ ದಾಳಿ ನಡೆಸಿದ್ದು, ಸೇನೆ ಮತ್ತು ಉಗ್ರರ ನಡುವೆ ಗುಂಡಿನ ದಾಳಿ ನಡೆದಿದೆ ಎಂದು ತಿಳಿದುಬಂದಿದೆ. ತಂಗ್ಧಾರ್ ಸೆಕ್ಟರ್ ಕುಪ್ವಾರ ಜಿಲ್ಲೆಗೆ ಅತ್ಯಂತ ಸಮೀಪದಲ್ಲಿದ್ದು, ಭಾರತದ ಗಡಿಯೊಳಗೆ ನುಸುಳಲು ಇದು ಉತ್ತಮ ದಾರಿಯಾಗಿದೆ ಎಂದು ಉಗ್ರರು ಭಾವಿಸಿದಂತಿದೆ. ಇದೇ ಕಾರಣಕ್ಕೆ ಉಗ್ರರು ಇಲ್ಲಿ ದಾಳಿ ನಡೆಸಿರಬಹುದು ಸೇನಾಧಿಕಾರಿ ಎಸ್​ಎಸ್​ಪಿ ಅಜಾಜ್ ಅಹಮ್ಮದ್ ತಿಳಿಸಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com