

ನವದೆಹಲಿ: ಬಹು ವಿವಾದಿತ ಅಸಹಿಷ್ಣುತೆ ವಿಚಾರ ಸಂಸತ್ತಿನಲ್ಲಿ ಚರ್ಚೆಯಾಗುತ್ತಿರುವುದು ಜನರ ಮನಸ್ಸಿಗೆ ನೋವುಂಟು ಮಾಡುತ್ತಿದೆ ಎಂದು ಸಮಾಜವಾದಿ ಪಕ್ಷ ಸೋಮವಾರ ಹೇಳಿದೆ.
ಈ ಕುರಿತಂತೆ ಮಾತನಾಡಿರುವ ಸಮಾಜವಾದಿ ಪಕ್ಷದ ನಾಯಕ ರಾಮ್ ಗೋಪಾಲ್ ಯಾದವ್ ಅವರು, ಅಸಹಿಷ್ಣುತೆಯುತ ವಿಷಯಗಳು ಸಂಸತ್ತಿನಲ್ಲಿ ಹೆಚ್ಚು ಚರ್ಚೆಯಾಗುವುದರಿಂದ ಇದು ಜನರ ಮೇಲೆ ಪರಿಣಾಮ ಬೀರಲಿದ್ದು, ದೇಶದ ಜನತೆಗೆ ನೋವುಂಟು ಮಾಡಲಿದೆ ಎಂದು ಹೇಳಿದ್ದಾರೆ.
ಭಾರತ ಪ್ರಪಂಚದಲ್ಲಿಯೇ ಅತೀ ಹೆಚ್ಚು ಅಸಹಿಷ್ಣುತೆ ಇರುವ ದೇಶದವಾಗಿದ್ದು, ವಿಷಯಗಳಿಗೆ ಸಂಬಂಧಿಸಿದ ವಿಷಯಗಳನ್ನು ಪ್ರಸ್ತಾಪಿಸಿ ದೊಡ್ಡದು ಮಾಡುವುದು ಸರಿಯಲ್ಲ ಎಂದು ಹೇಳಿದ್ದಾರೆ.
ದೇಶದಲ್ಲಿ ಇತ್ತೀಚಿನ ದಿನಗಳಲ್ಲಿ ಅಸಹಿಷ್ಣುತೆ ವಿಷಯ ಅತೀ ಹೆಚ್ಚು ವಿವಾದಕ್ಕೀಡಾಗುತ್ತಿದ್ದು, ಅಸಹಿಷ್ಣುತೆ ಕುರಿತಂತೆ ಪ್ರತಿಪಕ್ಷಗಳು ಕೇಂದ್ರ ಸರ್ಕಾರದ ವಿರುದ್ಧ ಹರಿಹಾಯುತ್ತಿವೆ. ಹೀಗಾಗಿ ಅಸಹಿಷ್ಣುತೆ ಕುರಿತ ವಿಚಾರ ಇಂದು ಲೋಕಸಭೆಯಲ್ಲಿ ಚರ್ಚೆಯಾಗುತ್ತಿದ್ದು, ಪ್ರತಿಪಕ್ಷಗಳು ಎನ್ ಡಿಎ ಸರ್ಕಾರದ ವಿರುದ್ಧ ಕಿಡಿಕಾರುತ್ತಿವೆ ಎಂದು ತಿಳಿದುಬಂದಿದೆ.