ಆಧಾರ್ ಕಾರ್ಡ್ ವಿವಾದ: ಸಮಸ್ಯೆ ಬಗೆಹರಿಸಲು ಕಾಲಾವಕಾಶಬೇಕೆಂದ ಸುಪ್ರೀಂ

ಪಡಿತರ ಮತ್ತು ಅಡುಗೆ ಅನಿಲಕ್ಕೆ ಸಂಬಂಧಪಟ್ಟು ಮಾತ್ರವೇ ಆಧಾರ್‌ ಕಾರ್ಡ್‌ನ್ನು ಸೀಮಿತಗೊಳಿಸಬೇಕೆಂಬ ಈ ಮೊದಲಿನ ತೀರ್ಪನ್ನು ತಿದ್ದುಪಡಿ ಮಾಡಬೇಕೆಂದು ಕೋರಿರುವ ಕೇಂದ್ರ, ಸೆಬಿ ಹಾಗೂ ಆರ್‌ಬಿಐ ಮನವಿ ಸ್ವೀಕರಿಸಿರುವ ಸುಪ್ರೀಂ ಕೋರ್ಟ್...
ಆಧಾರ್‌ ಕಾರ್ಡ್‌ (ಸಂಗ್ರಹ ಚಿತ್ರ)
ಆಧಾರ್‌ ಕಾರ್ಡ್‌ (ಸಂಗ್ರಹ ಚಿತ್ರ)
Updated on: 

ನವದೆಹಲಿ: ಪಡಿತರ ಮತ್ತು ಅಡುಗೆ ಅನಿಲಕ್ಕೆ ಸಂಬಂಧಪಟ್ಟು ಮಾತ್ರವೇ ಆಧಾರ್‌ ಕಾರ್ಡ್‌ನ್ನು ಸೀಮಿತಗೊಳಿಸಬೇಕೆಂಬ ಈ ಮೊದಲಿನ ತೀರ್ಪನ್ನು ತಿದ್ದುಪಡಿ ಮಾಡಬೇಕೆಂದು ಕೋರಿರುವ ಕೇಂದ್ರ, ಸೆಬಿ ಹಾಗೂ ಆರ್‌ಬಿಐ ಮನವಿ ಸ್ವೀಕರಿಸಿರುವ ಸುಪ್ರೀಂ ಕೋರ್ಟ್,  ವಿವಾದ ಇತ್ಯರ್ಥಗೊಳಿಸುವ ಸಲುವಾಗಿ ಬೃಹತ್‌ ಪೀಠ ರಚಿಸುವ ಅಗತ್ಯವಿದ್ದು ಆದೇಶಕ್ಕಾಗಿ ಒಂದು ದಿನದ ಕಾಲಾವಕಾಶ ಬೇಕೇಂದು ಗುರುವಾರ ಹೇಳಿದೆ.

ಇಂದು ನಡೆದ ವಿಚಾರಣೆ ವೇಳೆ ಅಟಾರ್ನಿ ಜನರಲ್‌ ಮುಕುಲ್‌ ರೋಹಟಗಿ ಅವರು ಕೇಂದ್ರ ಸರಕಾರ ಹಾಗೂ ಇನ್ನೂ ಮೂರು ಸರಕಾರಿ ಸಂಸ್ಥೆಗಳು ಮಾಡಿರುವ ಈ ಮನವಿಯನ್ನು ಸುಪ್ರೀಂ ಕೋರ್ಟ್‌ ಮುಂದೆ ಮಂಡಿಸಿದರು. ಇದಕ್ಕುತ್ತರಿಸಿದ ವರಿಷ್ಠ ನ್ಯಾಯಮೂರ್ತಿ ಎಚ್‌ ಎಲ್‌ ದತ್ತು ನೇತೃತ್ವದ ನ್ಯಾಯಪೀಠ, "ಈ ಬಗ್ಗೆ ನಮಗೆ ನಾಳೆ ಸಂಜೆಯವರೆಗಿನ ಅವಧಿಗೆ ಕಾಲಾವಕಾಶ ಅಗತ್ಯವಿದ್ದು, ಸಮಸ್ಯೆ ಬಗೆಹರಿಯುವಿಕೆಗೆ ಬೃಹತ್‌ ಪೀಠ ರಚನೆಯ ಅಗತ್ಯವಿದೆ. ಹೀಗಾಗಿ ನಾವು ಒಂಬತ್ತು ನ್ಯಾಯಮೂರ್ತಿಗಳನ್ನು ಕಲೆ ಹಾಕಬೇಕಾಗಿದೆ' ಎಂದು ಹೇಳಿದ್ದಾರೆ.

ನ್ಯಾಯಮೂರ್ತಿ ಎಚ್‌ ಎಲ್‌ ದತ್ತು ಅವರ ಈ ಪ್ರತಿಕ್ರಿಯೆಗೆ ಉತ್ತರಿಸಿದ ರೋಹಟಗಿ ಅವರು, ಆಧಾರ್‌ ಕಾರ್ಡ್‌ ಬಳಕೆ ವಿವಾದ ಕುರಿತಾಗಿ ಸುಪ್ರೀಂ ಕೋರ್ಟ್‌ ಈ ಹಿಂದೆ ನೀಡಿರುವ ತೀರ್ಪಿನ ತಿದ್ದುಪಡಿಯ ಕೋರಿಕೆಗೆ ಕೆ ಕೆ ವೇಣುಗೋಪಾಲ್‌ ಮತ್ತು ಹರೀಶ್‌ ಸಾಳ್ವೆ ಸೇರಿದಂತೆ ಹಿರಿಯ ವಕೀಲರ ದಂಡೇ ಒಗ್ಗೂಡಿರುವುದರಿಂದ ಈ ವಿಷಯವು ತುರ್ತಾಗಿ ತೀರ್ಮಾನವಾಗಬೇಕಿದೆ ಎಂದು ಹೇಳಿದ್ದಾರೆ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com