ಲಾಲುಗೆ ನಿತೀಶ್ ಬರೆದಿದ್ದ ಪತ್ರ ಬಹಿರಂಗ

ಬಿಹಾರ ವಿಧಾನಸಭೆ ಚುನಾವಣೆಯ ಉಳಿದ ೩ ಹಂತ ಗಳು ಬಾಕಿಯಿರುವಾಗಲೇ ಮಹಾಮೈತ್ರಿಯಲ್ಲಿ ಹುಳಿಹಿಂಡಲು ಬಿಜೆಪಿ ಸಿದ್ಧತೆ ನಡೆಸಿದೆ. ಅದರ ಮೊದಲ ಪ್ರಯತ್ನವಾಗಿ, ೨೩ ವರ್ಷಗಳ ಹಿಂದೆ ಲಾಲು..
ಲಾಲು ಪ್ರಸಾದ್ ಮತ್ತು ನಿತೀಶ್ ಕುಮಾರ್ (ಸಂಗ್ರಹ ಚಿತ್ರ)
ಲಾಲು ಪ್ರಸಾದ್ ಮತ್ತು ನಿತೀಶ್ ಕುಮಾರ್ (ಸಂಗ್ರಹ ಚಿತ್ರ)
Updated on: 

ಪಾಟ್ನಾ: ಬಿಹಾರ ವಿಧಾನಸಭೆ ಚುನಾವಣೆಯ ಉಳಿದ ೩ ಹಂತ ಗಳು ಬಾಕಿಯಿರುವಾಗಲೇ ಮಹಾಮೈತ್ರಿಯಲ್ಲಿ ಹುಳಿಹಿಂಡಲು ಬಿಜೆಪಿ ಸಿದ್ಧತೆ ನಡೆಸಿದೆ. ಅದರ ಮೊದಲ ಪ್ರಯತ್ನವಾಗಿ, ೨೩  ವರ್ಷಗಳ ಹಿಂದೆ ಲಾಲು ಪ್ರಸಾದ್ ರ ದುರಾಡಳಿತವನ್ನು ಖಂಡಿಸಿ ಸ್ವತಃ ನಿತೀಶ್ ಅವರು ಲಾಲುಗೆ ಬರೆದಿದ್ದ ಪತ್ರ ಬಿಜೆಪಿ ಬಿಡುಗಡೆ ಮಾಡಿದೆ.

ಆರ್‌ಜೆಡಿ ಮುಖ್ಯಸ್ಥ ಲಾಲು ಅವರು ಸಿಎಂ ಆಗಿದ್ದಾಗ ನಿತೀಶ್ ಬರೆದಿದ್ದ ಪತ್ರದ ಕೆಲವೊಂದು ಅಂಶಗಳನ್ನು ಎತ್ತಿ, ಬಿಜೆಪಿಯು ಸ್ಥಳೀಯ ಪತ್ರಿಕೆಗಳಲ್ಲಿ ತಲಾ ಒಂದೊಂದು ಪುಟಗಳ ಜಾಹೀರಾತು  ನೀಡಿದೆ.

ಪತ್ರದಲ್ಲೇನಿತ್ತು?: ೧೯೯೨ರಲ್ಲಿ ಬರೆದ ಪತ್ರದಲ್ಲಿ ನಿತೀಶ್ ಅವರು, ‘ಲಾಲು, ಸಾಮಾಜಿಕ ನ್ಯಾಯ ಎಂಬ ಅಜೆಂಡಾವನ್ನೇ ತ್ಯಾಗ ಮಾಡಿ, ವೈಯಕ್ತಿಕ ಪ್ರಚಾರಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆ.  ಪೊಲೀಸರ ನೇಮಕದ ವೇಳೆ ಭಾರಿ ಅಕ್ರಮ ನಡೆದಿದೆ. ಎಲ್ಲ ಹುದ್ದೆಗಳನ್ನೂ ಪ್ರಭಾವಿ ಜಾತಿಯೊಂದಕ್ಕೆ ಮೀಸಲಿಟ್ಟಂತೆ ಕಾಣುತ್ತಿದೆ’ ಎಂದು ಹೇಳಿದ್ದರು.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com