ಅಲ್ಪಸಂಖ್ಯಾತರಲ್ಲಿ ಭಯ: ನಾರಾಯಣಮೂರ್ತಿ

ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣು ವಾತಾವರಣ ಹಾಗೂ ಅಲ್ಪಸಂಖ್ಯಾತರಲ್ಲಿ ಹುಟ್ಟಿರುವ ಭಯದ ಬಗ್ಗೆ ಇನ್ಫೋಸಿಸ್ ಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಕಳವಳ ವ್ಯಕ್ತಪಡಿಸಿದ್ದಾರೆ...
ಇನ್ಫೋಸಿಸ್ ಸ್ಥಾಪಕ ಎನ್ ಆರ್ ನಾರಾಯಣಮೂರ್ತಿ (ಸಂಗ್ರಹ ಚಿತ್ರ)
ಇನ್ಫೋಸಿಸ್ ಸ್ಥಾಪಕ ಎನ್ ಆರ್ ನಾರಾಯಣಮೂರ್ತಿ (ಸಂಗ್ರಹ ಚಿತ್ರ)
Updated on: 

ನವದೆಹಲಿ: ದೇಶದಲ್ಲಿ ಹೆಚ್ಚುತ್ತಿರುವ ಅಸಹಿಷ್ಣು ವಾತಾವರಣ ಹಾಗೂ ಅಲ್ಪಸಂಖ್ಯಾತರಲ್ಲಿ ಹುಟ್ಟಿರುವ ಭಯದ ಬಗ್ಗೆ ಇನ್ಫೋಸಿಸ್ ಸ್ಥಾಪಕ ಎನ್ ಆರ್ ನಾರಾಯಣಮೂರ್ತಿ ಕಳವಳ ವ್ಯಕ್ತಪಡಿಸಿದ್ದಾರೆ.

ದೇಶ ಅಭಿವೃದ್ಧಿ ಹೊಂದಬೇಕಾದರೆ, ಜನರಲ್ಲಿ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಸರ್ಕಾರ ಮಾಡಬೇಕು ಎಂದೂ ಸಲಹೆ ನೀಡಿದ್ದಾರೆ. ಸಾಹಿತಿಗಳು, ವಿಜ್ಞಾನಿ, ಇತಿಹಾಸಕಾರರ ಬಳಿಕ ಉದ್ಯಮಿ ಯೊಬ್ಬರು ಅಸಹಿಷ್ಣುತೆ ವಿರುದಟಛಿ ಧ್ವನಿಯೆತ್ತಿರುವುದು ಇದೇ ಮೊದಲು. ಎನ್‍ಡಿಟಿವಿಗೆ ನೀಡಿದ ಸಂದರ್ಶನದಲ್ಲಿ ಇನ್ಫಿ ಮೂರ್ತಿ, ನಾನು ರಾಜಕಾರಣಿಯಲ್ಲ, ರಾಜಕಾರಣದಲ್ಲಿ ಆಸಕ್ತಿಯೂ ಇಲ್ಲ. ಆದರೆ, ಅಲ್ಪಸಂಖ್ಯಾತರಲ್ಲಿ ಗಣನೀಯ ಭಯ ಸೃಷ್ಟಿಯಾಗಿರುವುದು ವಾಸ್ತವ. 1967ರಲ್ಲಿ ಶಿವಸೇನೆ ದಕ್ಷಿಣ ಭಾರದತೀಯರನ್ನು ಕೆಟ್ಟದಾಗಿ ನಡೆಸಿಕೊಂಡಿತ್ತು. ಈಗ ಪರಿಸ್ಥಿತಿ ಅದಕ್ಕಿಂತಲೂ ಕೆಟ್ಟಿದೆ ಎಂದಿದ್ದಾರೆ.

ಮೂರ್ತಿ ಹೇಳಿದ್ದೇನು?

  • ನಾನು ಸರ್ಕಾರಕ್ಕೆ (ಕೇಂದ್ರ ಹಾಗೂ ರಾಜ್ಯ) ಹೇಳಬಯಸುವುದೊಂದೇ ಪ್ರತಿಯೊಬ್ಬ ಭಾರತೀಯನ ಮನಸ್ಸಿನಲ್ಲೂ `ಇದು ನನ್ನ ದೇಶ, ನನಗಿಲ್ಲಿ ಎಲ್ಲ ಹಕ್ಕುಗಳೂ ಇವೆ, ನಾನಿಲ್ಲಿ ಸುರಕ್ಷಿತವಾಗಿದ್ದೇನೆ. ಹಾಗಾಗಿ ಭಾರತದ ಏಳ್ಗೆಗಾಗಿ ನಾನು ಶ್ರಮಿಸುತ್ತೇನೆ' ಎಂಬಂತಹ ವಿಶ್ವಾಸ, ಶಕ್ತಿ, ಆಸಕ್ತಿ ಮತ್ತು ನಂಬಿಕೆಯನ್ನು ಹುಟ್ಟಿಸಬೇಕಾಗಿದೆ.
  • ಕಳೆದ 300 ವರ್ಷಗಳ ಇತಿಹಾಸ ಓದಿದಾಗ ನನಗೆ ಗೊತ್ತಾಗಿದ್ದಿಷ್ಟು- ಸಂಘರ್ಷ, ಅವಿಶ್ವಾಸ, ಭಯ, ಅಲ್ಪಸಂಖ್ಯಾತ ಸಮುದಾಯದ ಮೇಲೆ ಬಹುಸಂಖ್ಯಾತರ ಸವಾರಿ, ಅಲ್ಪಸಂಖ್ಯಾತರ ಹಕ್ಕುಗಳ ದಮನ ಇತ್ಯಾದಿಗಳಿಂದ ಯಾವ ದೇಶವೂ ಅಭಿವೃದ್ಧಿ ಹೊಂದಿಲ್ಲ. ಇಂತಹ ತಾರತಮ್ಯಗಳಿಲ್ಲದ ದೇಶಗಳು ಮಾತ್ರವೇ ತ್ವರಿತ ಪ್ರಗತಿಯನ್ನು ದಾಖಲಿಸಿವೆ.
  • ಯಾವ ಪಕ್ಷ ಅಧಿಕಾರದಲ್ಲಿದೆ ಎನ್ನುವುದು ಇಲ್ಲಿ ಮುಖ್ಯವಲ್ಲ. ಆದರೆ, ಜನರಲ್ಲಿ `ನಾನು ಭಾರತಕ್ಕೆ ಸೇರಿದವನು' ಎಂಬಂತಹ ಧನಾತ್ಮಕ, ವಿಶ್ವಾಸಪೂರ್ಣ ಪರಿಸರವನ್ನು ಸೃಷ್ಟಿಸುವುದಕ್ಕೆ ಸರ್ಕಾರ ಆದ್ಯತೆ ನೀಡಬೇಕು. ಶಾಂತಿ, ಸೌಹಾರ್ದತೆ, ನಂಬಿಕೆ, ಶಕ್ತಿಯ ವಾತಾವರಣ ಸೃಷ್ಟಿಯಾದರೆ ಮಾತ್ರ ಆರ್ಥಿಕ ಪ್ರಗತಿ ಸಾಧ್ಯ.
  • ಸದ್ಯದ ಸಮಸ್ಯೆಗಳನ್ನು ಪರಿಹರಿಸಿಕೊಳ್ಳದೇ ಇದ್ದರೆ, ಖಂಡಿತಾ ದೇಶವನ್ನು ಅಬಿsವೃದಿಟಛಿಯ ಪಥದತ್ತ ಕೊಂಡೊಯ್ಯಲು ಸಾಧ್ಯವಿಲ್ಲ. ಬಡತನ, ರೈತರ ಆತ್ಮಹತ್ಯೆಯಂತಹ ಸಮಸ್ಯೆಗಳ ಪರಿಹಾರವೂ ಅಸಾಧ್ಯ. ಎಲ್ಲರೂ ಸಹಿಷ್ಣುತೆ, ಜಾತ್ಯತೀತತೆ ಮತ್ತು ಜನರ ಹಕ್ಕುಗಳಿಗೆ ಗೌರವ ನೀಡಬೇಕಾದ್ದು ಅತ್ಯಗತ್ಯ.

Follow KannadaPrabha channel on WhatsApp

  

Subscribe to KannadaPrabha YouTube Channel and watch Videos

   

Download the KannadaPrabha News app to follow the latest news updates

  

Subscribe and Receive exclusive content and updates on your favorite topics

X
Kannada Prabha
www.kannadaprabha.com