

ಶ್ರೀನಗರ: ದೇಶೀಯ ತಂತ್ರಜ್ಞಾನವನ್ನು ಬಳಸಿ ಭಾರತಕ್ಕೆ ವಿರುದ್ಧವಾಗಿ 1965ರ ಭಾರತ-ಪಾಕಿಸ್ತಾನ ಯುದ್ಧವನ್ನು ಸ್ಮರಿಸುವ ಕಾಶ್ಮೀರಿ ಜನರಿಗೆ ಬೋಧನೆ ಮಾಡುವಂತೆ ಅಂತರ್ಜಾಲ ರೇಡಿಯೋವನ್ನು ಆರಂಭಿಸಲಾಗಿದೆ.
ಭಾರತ ವಿರೋಧಿ ಸುದ್ದಿ ಪೋರ್ಟಲ್ ನ ಕಾಶ್ಮೀರ ಮಾಧ್ಯಮ ಸೇವೆಯಿಂದ ಈ ಅಂತರ್ಜಾಲ ರೇಡಿಯೋ ಆರಂಭಿಸಿರುವ ವಿಷಯವನ್ನು ವೆಬ್ ಸೈಟ್ ನಲ್ಲಿ ಪ್ರಕಟಿಸಲಾಗಿದ್ದು, ರೇಡಿಯೋ ಸದಾ-ಇ-ಜಮ್ಮು ಕಾಶ್ಮೀರ ಇದನ್ನು ಆರಂಭಿಸಿದೆ. ಭಾರತೀಯ ಆಕ್ರಮಿತ ಕಾಶ್ಮೀರದಲ್ಲಿ ಮಾನವ ಹಕ್ಕು ಉಲ್ಲಂಘನೆಯಾಗುತ್ತಿದೆ ಎಂದು ಅಂತರ್ಜಾಲ ರೇಡಿಯೋದಲ್ಲಿ ಪರಿಣಾಮಕಾರಿಯಾಗಿ ಹೇಳಲಾಗಿದೆ.
ಇತ್ತೀಚೆಗೆ ಭಾರತ-ಪಾಕ್ ಭದ್ರತಾ ಸಲಹೆಗಾರರ ಮಟ್ಟದ ಮಾತುಕತೆ ಮುರಿದು ಬಿದ್ದಿದ್ದು, ಜಮ್ಮು-ಕಾಶ್ಮೀರದಲ್ಲಿ ಪದೇ ಪದೇ ಯುದ್ಧ ವಿರಾಮ ಉಲ್ಲಂಘನೆಯಾಗುತ್ತಿದೆ. ಈ ಸಂದರ್ಭದಲ್ಲಿ ಅಂತರ್ಜಾಲ ರೇಡಿಯೋವನ್ನು ಕೂಡ ಬಿಡುಗಡೆ ಮಾಡಲಾಗಿದೆ.
1965ರಲ್ಲಿ ಭಾರತ-ಪಾಕ್ ನಡುವಿನ ಯುದ್ಧದ ವೇಳೆ, ಭೂಗತ ರೇಡಿಯೋ ಕೇಂದ್ರ ರೇಡಿಯೋ ಸದಾ-ಇ-ಕಾಶ್ಮೀರ ಆರಂಭವಾಗಿತ್ತು. ಯುದ್ಧದಲ್ಲಿನ ಕಾಲ ಕಾಲದ ಮಾಹಿತಿಯನ್ನು ರೇಡಿಯೋದಲ್ಲಿ ಪ್ರಸಾರ ಮಾಡಲಾಗುತ್ತಿತ್ತು. ಇದೀಗ ಅಂತರ್ಜಾಲ ರೇಡಿಯೋದಲ್ಲಿನ ಕಾರ್ಯಕ್ರಮಗಳು ಕಾಶ್ಮೀರಿ, ಉರ್ದು, ಇಂಗ್ಲೀಷ್ ಮತ್ತು ಹಿಂದಿಯಲ್ಲಿ ಪ್ರಸಾರ ಮಾಡಲಾಗುತ್ತಿದೆ. ಗುಪ್ತಚರ ಸಂಸ್ಥೆಗಳು ಈ ಬಗ್ಗೆ ಯಾವುದೇ ಪ್ರತಿಕ್ರಿಯೆ ನೀಡಿಲ್ಲ.