ವಿಂಡೀಸ್ ವಿರುದ್ಧ ಸೋತರು, ವಿಶ್ವ ದಾಖಲೆ ಬರೆದ ಎಂಎಸ್ ಧೋನಿ

ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಸೋತರು ನಾಯಕನಾಗಿ ಎಂಎಸ್ ಧೋನಿ ವಿಶ್ವ ದಾಖಲೆ ಮಾಡಿದ್ದಾರೆ...
ಎಂಎಸ್ ಧೋನಿ
ಎಂಎಸ್ ಧೋನಿ
ಫೋರ್ಟ್ ಲಾರ್ಡರ್ ಡೇಲ್: ವೆಸ್ಟ್ ಇಂಡೀಸ್ ವಿರುದ್ಧದ ಟಿ20 ಪಂದ್ಯದಲ್ಲಿ ಟೀಂ ಇಂಡಿಯಾ ಸೋತರು ನಾಯಕನಾಗಿ ಎಂಎಸ್ ಧೋನಿ ವಿಶ್ವ ದಾಖಲೆ ಮಾಡಿದ್ದಾರೆ. 
ಕ್ರಿಕೆಟ್ ಜಗತ್ತಿನಲ್ಲಿ ಹಲವು ವಿಶ್ವದಾಖಲೆಗಳನ್ನು ಬರೆದಿರುವ ಎಂಎಸ್ ಧೋನಿ ಖಾತೆಯಲ್ಲಿ ಇದೀಗ ಮತ್ತೊಂದು ವಿಶ್ವ ದಾಖಲೆ ಸೇರ್ಪಡೆಗೊಂಡಿದೆ. 
ನಾಯಕನಾಗಿ ಧೋನಿ ಒಟ್ಟು 325 ಪಂದ್ಯಗಳೊಂದಿಗೆ ಟೀಂ ಇಂಡಿಯಾವನ್ನು ಮುನ್ನಡೆಸಿ ಆಸ್ಟ್ರೇಲಿಯಾ ಮಾಜಿ ನಾಯಕ ರಿಕಿ ಪಾಂಟಿಂಗ್ ದಾಖಲೆಯನ್ನು ಸರಿಗಟ್ಟಿದ್ದಾರೆ. 
2007ರಲ್ಲಿ ಟೀಂ ಇಂಡಿಯಾದ ನಾಯಕರಾದ ಧೋನಿ 194 ಏಕದಿನ, 71 ಟಿ20 ಹಾಗೂ 60 ಟೆಸ್ಟ್ ಪಂದ್ಯಗಳಿಗೆ ನಾಯಕತ್ವ ವಹಿಸಿದ್ದಾರೆ. ಅವರ ನಾಯಕತ್ವದಲ್ಲಿ ವಿಶ್ವ ಟಿ20, 2011ರ ವಿಶ್ವಕಪ್ ಹಾಗೂ 2013ರ ಚಾಂಪಿಯನ್ಸ್ ಟ್ರೋಫಿಗಳನ್ನು ಗೆದ್ದಿದ್ದಾರೆ. 

ಈ ವಿಭಾಗದ ಇತರ ಸುದ್ದಿ

No stories found.

Advertisement

X
Kannada Prabha
www.kannadaprabha.com